Fact Check: ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್ ನಾಗರಿಕರನ್ನು ಒತ್ತಾಯಿಸಿದ್ದಾರಾ?

ಸಿಜೆಐ ಚಂದ್ರಚೂಡ್‌, ಸರ್ಕಾರದ ವಿರುದ್ಧ ಬೀದಿಗಿಳಿಯಲು ಕರೆ,

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್‌ ನಾಗರಿಕರನ್ನು ಒತ್ತಾಯಿಸಿದ್ದಾರೆ

Fact
ಮುಖ್ಯ ನ್ಯಾಯಮೂರ್ತಿಯವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ

ಸುಪ್ರೀಂ ಕೋರ್ಟ್‌ ನ ಮುಖ್ಯನ್ಯಾಯಮೂರ್ತಿ(ಸಿಜೆಐ) ಡಿ.ವೈ. ಚಂದ್ರಚೂಡ್‌ ಅವರು ಭಾರತೀಯ ನಾಗರಿಕರು ಬೀದಿಗಿಳಿವಂತೆ ಕರೆ ನೀಡಿದ್ದಾರೆ ಎಂಬ ಸಂದೇಶವು ವೈರಲ್‌ ಆಗಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಈ ಸಂದೇಶದಲ್ಲಿ, ಸರ್ವಾಧಿಕಾರಿ ಸರ್ಕಾರವನ್ನು ಪ್ರಶ್ನಿಸಿ, ಜನರ ಹಕ್ಕುಗಳ ಬಗ್ಗೆ ಭಾರತೀಯ ನಾಗರಿಕರು ಒಗ್ಗೂಡಿ ಬೀದಿಗಿಳಿವಂತೆ ಪ್ರೇರೇಪಿಸುತ್ತಿದ್ದಾರೆ. ಅಲ್ಲದೇ ಸಂವಿಧಾನ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಉಳಿಸುವ ಪ್ರಯತ್ನಗಳಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದಿದೆ.

Also Read: ಹಿಂದೂ ಧರ್ಮದ ಮೇಲಿನ ಗೌರವಕ್ಕೆ ಅಮೆರಿಕದ ಹೊಸ ಕಾರಿಗೆ ‘ರಾಮ್’ ಹೆಸರಿಡಲಾಗಿದೆಯೇ?

Fact Check: ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್ ನಾಗರಿಕರನ್ನು ಒತ್ತಾಯಿಸಿದ್ದಾರೆಯೇ?

ಈ ಸಂದೇಶದ ಬಗ್ಗೆ ಸತ್ಯಶೋಧನೆ ನಡೆಸಲು ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್ಲೈನ್‌ ಗೆ (+91-9999499044) ಮನವಿ ಬಂದಿದ್ದು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.  

370ನೇ ವಿಧಿ ರದ್ದತಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370ನೇ ಕಾಯ್ದೆಯ ರದ್ದತಿ ಕುರಿತಂತೆ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ 2019 ಆಗಸ್ಟ್‌ 5ರಿಂದ ವಿಚಾರಣೆಯನ್ನು ನಡೆಸುತ್ತಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ಸದಸ್ಯರ ಸಂವಿಧಾನ ಪೀಠವು ಇದರ ವಿಚಾರಣೆ ನಡೆಸುತ್ತಿದೆ. ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ರಾಷ್ಟ್ರಪತಿ ಆದೇಶ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಸಂಸತ್ತಿನ ಕ್ರಮವನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು, ಖಾಸಗಿ ವ್ಯಕ್ತಿಗಳು, ವಕೀಲರು, ಕಾರ್ಯಕರ್ತರು ಅನೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆಗಸ್ಟ್ 16 ರಂದು ವಿಚಾರಣೆ ಪುನರಾರಂಭಗೊಳ್ಳಲಿದೆ. ಈ ವಿಚಾರಣೆ ಸಂದರ್ಭದಲ್ಲಿ ಚಂದ್ರಚೂಡ್ ಅವರು ಹೇಳಿಕೆ ನೀಡಿದ್ದಾರೆ ಎಂಬರ್ಥದಲ್ಲಿ ಸಂದೇಶಗಳು ಹರಿದಾಡಿದ್ದವು.

Fact Check/Verification

ಫ್ಯಾಕ್ಟ್ ಚೆಕ್ ನ್ಯಾ.ಚಂದ್ರಚೂಡ್‌ ಅವರ ಸುದ್ದಿಗಳ ಬಗ್ಗೆ ನ್ಯೂಸ್‌ಚೆಕರ್‌ ಮೊದಲಾಗಿ ಹುಡುಕಾಟ ನಡೆಸಿದೆ. ಚಂದ್ರಚೂಡ್‌ ಅವರು 2022 ನವೆಂಬರ್ ನಿಂದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅವರು ಹಾಗೆ ಹೇಳಿದ್ದಾರೆ ಎನ್ನುವ ಯಾವುದೇ ಸುದ್ದಿ, ವರದಿಗಳು ನಮಗೆ ಸಿಗಲಿಲ್ಲ. ಇದೇ ಸಂದರ್ಭದಲ್ಲಿ ತಪ್ಪಾದ ವ್ಯಾಕರಣ, ಹಿನ್ನಲೆ ಬಣ್ಣ, ವಿವಿಧ ಫಾಂಟ್‌ ಗಳಿರುವ ಈ ವೈರಲ್‌ ಮೆಸೇಜ್‌, ಗೂಗಲ್‌ ಲೆನ್ಸ್ ನೆರವಿನಿಂದ ಮಾಡಿದ ಅನುವಾದದ ರೀತಿ ಕಾಣುವುದನ್ನು ನಾವು ಗಮನಿಸಿದ್ದೇವೆ. ಇದರಲ್ಲಿರುವ ಪಠ್ಯವನ್ನು ನಾವು ಹಿಂದಿ ಭಾಷೆಗೆ ಭಾಷಾಂತರಿಸಿದ ಬಳಿಕ ಕೀವರ್ಡ್ ಸರ್ಚ್ ನಡೆಸಿದ್ದು, ಇದು ಭಾರತೀಯ ಒಲಿಂಪಿಕ್ ಪದಕ ವಿಜೇತ-ಬಾಕ್ಸರ್ ಮತ್ತು ರಾಜಕಾರಣಿ ವಿಜೇಂದರ್ ಸಿಂಗ್ ಅವರ ಈ ಫೇಸ್ಬುಕ್ ಪೋಸ್ಟ್ ಗೆ ನಮ್ಮನ್ನು ಕರೆದೊಯ್ದಿದೆ.

Fact Check: ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್ ನಾಗರಿಕರನ್ನು ಒತ್ತಾಯಿಸಿದ್ದಾರೆಯೇ?

ವೈರಲ್ ಸಂದೇಶ ನಕಲಿ: ಸುಪ್ರೀಂ ಸ್ಪಷ್ಟನೆ

ಆಗಸ್ಟ್ 14, 2023ರಂದು ಸುಪ್ರೀಂ ಕೋರ್ಟ್‌ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದ್ದು, ಅದರಲ್ಲಿ ಈ ವೈರಲ್‌ ಸಂದೇಶವನ್ನು ತಳ್ಳಿಹಾಕಿದೆ. ಹಳೆಯ ಫೋಟೋವೊಂದನ್ನು ಬಳಸಿಕೊಂಡು ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ತಪ್ಪಾಗಿ ಉಲ್ಲೇಖಿಸಿ, (ಸರ್ಕಾರದ ವಿರುದ್ಧ ಪ್ರತಿಭಟಿಸುವಂತೆ ಜನರನ್ನು ಪ್ರೇರೇಪಿಸುವ) ಸಾಮಾಜಿಕ ಜಾಲತಾಣದ ಪೋಸ್ಟ್‌ ಒಂದು ಗಮನಕ್ಕೆ ಬಂದಿದೆ. ಈ ಪೋಸ್ಟ್‌ ನಕಲಿಯಾಗಿದ್ದು ದುರುದ್ದೇಶ ಮತ್ತು ಕಿಡಿಗೇಡಿತನದಿಂದ ಕೂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳು ಅಂತಹ ಯಾವುದೇ ಪೋಸ್ಟ್‌ಗಳನ್ನು ಪ್ರಕಟಿಸಿಲ್ಲ ಮತ್ತು ಅಂತಹ ಯಾವುದೇ ಪೋಸ್ಟ್‌   ಪೋಸ್ಟ್‌ ಮಾಡಲು ಅಧಿಕಾರವನ್ನೂ ನೀಡಿಲ್ಲ. ಈ ನಿಟ್ಟಿನಲ್ಲಿ ಕಾನೂನು ಅಧಿಕಾರಿಗಳ ಸಕ್ಷಮ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದಿದೆ.

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಪ್ರಸಾರವಾಗುತ್ತಿರುವ ಈ ಸಂದೇಶ ನಕಲಿ ಎಂದು ದೃಢಪಡಿಸಿದ್ದಾರೆ ಎಂದು ವರದಿ ಹೇಳಿದೆ.. “ಇದು ನಕಲಿ ಫಾರ್ವರ್ಡ್ ಸಂದೇಶವಾಗಿದೆ. ಚಂದ್ರಚೂಡ್ ಅವರಂತಹ ಯಾವುದೇ ಮುಖ್ಯ ನ್ಯಾಯಮೂರ್ತಿಗಳೂ ಅಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಹೆಸರಲ್ಲಿ ಮಾಡುವ ಇಂತಹ ಕಿಡಿಗೇಡಿತನದ ಕೆಲಸಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಲಾಗುವುದು” ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಲಾ ಟುಡೇಗೆ ತಿಳಿಸಿದರು.

Also Read: ಆಗಸ್ಟ್‌ 10ರಿಂದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಬಂದ್‌ ಹೈಕೋರ್ಟ್‌ ತೀರ್ಪು, ಎನ್ನುವುದು ನಿಜವೇ?

ವೈರಲ್ ಹೇಳಿಕೆಯಲ್ಲಿರುವಂತೆ “ಪ್ರಜಾಪ್ರಭುತ್ವವನ್ನು ಉಳಿಸುವ” ಬಗ್ಗೆ ಮುಖ್ಯ ನ್ಯಾಯಮೂರ್ತಿ ಅವರ ಹೇಳಿಕೆಗಳ ವರದಿಗಳನ್ನು ನೋಡಿದಾಗ, 2022 ನವೆಂಬರ್‌ನಲ್ಲಿ ಅವರು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬಾಂಬೆ ಹೈಕೋರ್ಟ್‌ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, “1975 ರ ತುರ್ತು ಪರಿಸ್ಥಿತಿಯ ಸಮಯದಲ್ಲಿ “ನ್ಯಾಯಾಲಯಗಳ ನಿರ್ಭೀತ ಸ್ವಾತಂತ್ರ್ಯದ ಪ್ರಜ್ಞೆ” ಪ್ರಜಾಪ್ರಭುತ್ವವನ್ನು ಉಳಿಸಿದೆ ಎಂದು ಹೇಳಿದ್ದರು. “1975 ರ ತುರ್ತು ಪರಿಸ್ಥಿತಿಯ ಆ ವರ್ಷಗಳಲ್ಲಿ ಮಂಕಾಗಿದ್ದ ಸ್ವಾತಂತ್ರ್ಯದ ಜ್ಯೋತಿಯನ್ನು ಉರಿಸಿದವರು ರಾಣೆ ಅವರಂತಹ ನ್ಯಾಯಾಧೀಶರು. ನಮ್ಮ ನ್ಯಾಯಾಲಯಗಳ ನಿರ್ಭೀತ ಸ್ವಾತಂತ್ರ್ಯದ ಪ್ರಜ್ಞೆಯೇ 1975 ರಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಿತು” ಎಂದು ಚಂದ್ರಚೂಡ್‌ ಅವರು ಹೇಳಿದರು, “ಯಾವಾಗಲು ಉರಿಯುತ್ತಿರುವ ಸ್ವಾತಂತ್ರ್ಯ ಜ್ಯೋತಿಯಿಂದಾಗಿ, ನಮ್ಮ ಸ್ವತಂತ್ರ ನ್ಯಾಯಾಲಯಗಳು ದೃಢವಾಗಿ ನಿಲ್ಲಲು ಕಾರಣ, ವಕೀಲರು ಮತ್ತು ನ್ಯಾಯಾಧೀಶರು ಒಟ್ಟಾಗಿರುವುದಾಗಿದೆ” ಎಂದು ಹೇಳಿದ್ದರು. 2020ರಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿದ್ದ ವೇಳೆ ಪ್ರತಿಭಟನೆ ಬಗ್ಗೆ ಮಾತನಾಡಿದ್ದ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ಅವರು ಭಿನ್ನಾಭಿಪ್ರಾಯ ಎನ್ನುವುದು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟ ಎಂದು ಕರೆದಿದ್ದರು. ಪ್ರತಿಭಟನೆಗಳ ಬಗ್ಗೆ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು 2020 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ, ಭಿನ್ನಾಭಿಪ್ರಾಯವನ್ನು ಪ್ರಜಾಪ್ರಭುತ್ವದ “ಸುರಕ್ಷತಾ ಕವಾಟ” ಎಂದು ಕರೆದಿದ್ದರು, ಆದರೆ ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಸರ್ಕಾರವನ್ನು ಬಳಸುವುದು ಭಯವನ್ನು ಹುಟ್ಟುಹಾಕುತ್ತದೆ, ಇದು ಕಾನೂನಿನ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು. ಭಿನ್ನಾಭಿಪ್ರಾಯವನ್ನು ರಾಷ್ಟ್ರ ವಿರೋಧಿ ಅಥವಾ ಪ್ರಜಾಪ್ರಭುತ್ವ ವಿರೋಧಿ ಎಂದು ಹಣೆಪಟ್ಟಿ ಕಟ್ಟುವುದು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಮತ್ತು ಸಮಾಲೋಚನಾ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ದೇಶದ ಬದ್ಧತೆಯ ಹೃದಯಕ್ಕೆ ಇದು ಹೊಡೆತ ನೀಡುತ್ತದೆ ಎಂದು ಅವರು ಹೇಳಿದ್ದಾಗಿ ಫೆಬ್ರವರಿ 15, 2020 ರ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ ಸಿ ) ಅಂಗೀಕಾರದ ಮಧ್ಯೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಹೇಳಿಕೆ ಹೇಳಿಕೆ ಬಂದಿದೆ. ಆದಾಗ್ಯೂ, ಈ ಯಾವುದೇ ವರದಿಗಳು ಪ್ರಸ್ತುತ ಸರ್ಕಾರವನ್ನು ವಿರೋಧಿಸಲು ಬೀದಿಗಿಳಿಯುವಂತೆ ಜನರನ್ನು ಒತ್ತಾಯಿಸುವ ಯಾವುದೇ ಉಲ್ಲೇಖವನ್ನು ಸಿಜೆಐಗೆ ನೀಡಲಿಲ್ಲ. ನಾವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದೇವೆ ಮತ್ತು ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಲೇಖನವನ್ನು ನವೀಕರಿಸಲಿದ್ದೇವೆ.

Also Read: ಎಂಟಿಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎನ್ನುವ ಹೇಳಿಕೆ ಸತ್ಯವೇ?

Conclusion

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವಂತೆ ಜನರನ್ನು ಒತ್ತಾಯಿಸಿಲ್ಲ. ವೈರಲ್‌ ಆಗಿರುವ ಹೇಳಿಕೆಯು ನಕಲಿ ಮತ್ತು ಕಪೋಲಕಲ್ಪಿತವಾದದ್ದು ಎಂದು ಕಂಡುಬಂದಿದೆ.

Result: False

Our Sources:
Supreme Court of India press release, August 14, 2023
India Today report, August 14, 2023

ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.