Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಎಂಟಿಆರ್ ಕಂಪೆನಿ ಈಗ ಈಸ್ಟರ್ನ್ ಮಸಾಲಾ ತೆಕ್ಕೆಗೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಾಟ್ಸಾಪ್‌ನಲ್ಲಿ ಕಂಡುಬಂದ ಈ ಸಂದೇಶದಲ್ಲಿ “ಮಯ್ಯರ ಕುಟುಂಬದಿಂದ ವಿದೇಶಿ ಕಂಪನಿ ಪಾಲಾಗಿದ್ದ ಎಂ.ಟಿ.ಆರ್. ಈಗ ಜಿಹಾದಿಗಳ ಈಸ್ಟರ್ನ್ ಮಸಾಲೆ ತೆಕ್ಕೆಗೆ” ಎಂದು ಹೇಳಲಾಗಿದೆ.
ಈ ಕುರಿತಂತೆ ಸತ್ಯಶೋಧನೆಗೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್(+91 9999499044)ಗೆ ದೂರು ಬಂದಿದ್ದು, ಅದನ್ನು ಸ್ವೀಕರಿಸಲಾಗಿದೆ.
Also Read: ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ ಎನ್ನುವುದು ನಿಜವೇ?
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನಾವು ಹಲವು ಮಾಧ್ಯಮ ವರದಿಗಳನ್ನು ಗಮನಿಸಿದ್ದೇವೆ.
ಇಕನಾಮಿಕ್ ಟೈಮ್ಸ್, ಸೆಪ್ಟೆಂಬರ್ 4, 2020ರಂದು ಪ್ರಕಟಿಸಿದ ವರದಿಯಲ್ಲಿ ಎಂಟಿಆರ್ ಫೂಡ್ಸ್ ಈಸ್ಟರ್ನ್ ಮಸಾಲಾ ಕಾಂಡಿಮೆಂಟ್ಸ್ ನಲ್ಲಿ ಗರಿಷ್ಠ ಪ್ರಮಾಣದ ಷೇರುಗಳನ್ನು ಖರೀದಿಸಿದೆ. ಎಂಟಿಆರ್ ಫೂಡ್ಸ್‌ನ ಮಾಲಕತ್ವ ಹೊಂದಿರುವ ನಾರ್ವೆಯ ಪ್ರಮುಖ ಕಂಪೆನಿಯಾದ ಓರ್ಕ್ಲಾ, ಕೊಚ್ಚಿ ಈಸ್ಟರ್ನ್ ಮಸಾಲಾದ ಹೆಚ್ಚಿನ ಷೇರುಗಳನ್ನು ಖರೀದಿಸುವ ಬಗ್ಗೆ ಶುಕ್ರವಾರ ಒಪ್ಪಂದಕ್ಕೆ ಬಂದಿದೆ” ಎಂದಿದೆ.
ಜುಲೈ 22, 2022ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ “ಕೇರಳ ಮಸಾಲಾ ಪೌಡರ್ ತಯಾರಿಕೆದಾರ ಈಸ್ಟರ್ನ್ ಕಾಂಡಿಮೆಟ್ಸ್ ಅನ್ನು ಓರ್ಕ್ಲಾ ಖರೀದಿಸಿದ್ದು, ಅದೀಗ ಆಹಾರ ಕಂಪೆನಿಯಾಗಿದೆ” ಎಂದಿದೆ. “ಓಸ್ಲೋ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ಲಿಸ್ಟ್ ಆಗಿರುವ ಓರ್ಕಾಲಾ ತನ್ನ ಭಾರತೀಯ ಕಂಪೆನಿ ಎಂಟಿಆರ್ ಫುಡ್ಸ್ ಮೂಲಕ ₹1356 ಕೋಟಿಗಳಿಗೆ ಈಸ್ಟರ್ನ್ ಕಾಂಡಿಮೆಂಟ್ಸ್ ನಲ್ಲಿ ಶೇ., 67.8 ಷೇರುಗಳನ್ನು ಪಡೆದಿದೆ” ಎಂದಿದೆ.
ದಿ ನ್ಯೂಸ್ ಮಿನಿಟ್ ಸೆಪ್ಟೆಂಬರ್ 5, 2020ರಂದು ಪ್ರಕಟಿಸಿದ ವರದಿಯಲ್ಲೂ “ಎಂಟಿಆರ್ ಮಾಲಕತ್ವ ಹೊಂದಿರುವ ಓರ್ಕ್ಲಾ ಈಸ್ಟರ್ನ್ ಕಾಂಡಿಮೆಂಟ್ಸ್ನ ಶೇ.68 ಷೇರುಗಳನ್ನು ಖರೀದಿಸಿದೆ” ಎಂದು ಹೇಳಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ವರದಿಗಳಲ್ಲಿ ಎಲ್ಲೂ ಎಂಟಿಆರ್ ಅನ್ನು ಈಸ್ಟರ್ನ್ ಮಸಾಲಾ ಖರೀದಿಸಿದ್ದರ ಕುರಿತ ವಿಚಾರ ಕಂಡುಬಂದಿರುವುದಿಲ್ಲ.
Also Read: ಕ್ಯಾಪ್ಸಿಕಂನಲ್ಲಿ ಪ್ರಪಂಚದ ಅತಿ ಚಿಕ್ಕ ವಿಷಕಾರಿ ಹಾವು, ವೈರಲ್ ವೀಡಿಯೋ ಸತ್ಯವೇ?
ಇನ್ನು, ಈಸ್ಟರ್ನ್ ಮಸಾಲಾವನ್ನು ಕೊಚ್ಚಿಯಲ್ಲಿ ಪ್ರಸಿದ್ಧ ಮಸಾಲೆ ಉತ್ಪನ್ನಗಳ ರಫ್ತುದಾರರಾಗಿದ್ದ, ಮುಸ್ಲಿಂ ಸಮುದಾಯದ ಎಮ್.ಇ. ಮೀರನ್ ಅವರು ಆರಂಭಿಸಲು ಕಾರಣವಾಗಿದ್ದರು. ಅವರು ಆರಂಭದಲ್ಲಿ ಇಟಿಸಿ ಕಂಪೆನಿ ಹೆಸರಲ್ಲಿ ಸಾಂಬಾರ ಪದಾರ್ಥಗಳ ರಫ್ತು ಮಾಡುತ್ತಿದ್ದು, 1983ರಲ್ಲಿ ಈಸ್ಟರ್ನ್ ಮಸಾಲಾ ಕಂಪೆನಿ ಶುರುವಾಗಿತ್ತು.
ಇನ್ನು ಎಂಟಿಆರ್ ಅನ್ನು ಉಡುಪಿ ಮೂಲದ ಮಯ್ಯ ಕುಟುಂಬದ ಮೂವರು ಸಹೋದರರು 1924ರಲ್ಲಿ ಬೆಂಗಳೂರಿನಲ್ಲಿ ಹೋಟೆಲ್ ನೊಂದಿಗೆ (ಮಾವಳ್ಳಿ ಟಿಫಿನ್ ರೂಂ) ಆರಂಭಿಸಿದ್ದರು. 1975ರಲ್ಲಿ ಆಹಾರ, ಮಸಾಲೆ, ಇನ್ಸ್ಟಂಟ್ ಮಿಕ್ಸ್ ಉದ್ಯಮಕ್ಕೆ ಎಂಟಿಆರ್ ಶುರುಮಾಡಿದ್ದು, 2007ರಲ್ಲಿ ಕಂಪೆನಿ ನಾರ್ವೆಯ ಓರ್ಕ್ಲಾಗೆ ಮಾರಾಟವಾಗಿತ್ತು.
ಈ ಸತ್ಯ ಶೋಧನೆಯ ಪ್ರಕಾರ ಎಂಟಿಆರ್ ಒಡೆತನವನ್ನು ಹೊಂದಿದ ನಾರ್ವೆಯ ಓರ್ಕಾಲಾ ಕಂಪೆನಿ, ಈಸ್ಟರ್ನ್ ಮಸಾಲಾದಲ್ಲಿ ಗರಿಷ್ಠ ಷೇರುಗಳನ್ನು ಖರೀದಿಸಿರುವುದು ಗೊತ್ತಾಗಿದೆ. ಆ ಪ್ರಕಾರ, ಜಿಹಾದಿ ಕಂಪೆನಿ ಈಸ್ಟರ್ನ್ ಮಸಾಲಾ ಎಂಟಿಆರ್ನ್ನು ತೆಕ್ಕೆಗೆ ತೆಗೆದುಕೊಂಡಿದೆ ಎನ್ನವುದು ತಪ್ಪಾಗುತ್ತದೆ.
Our Sources
Report By Economic Times, Dated: September 4, 2020
Report By The New Indian Express, Dated: July 22, 2022
Report By The News Minute, Dated: September 5, 2020
Website of MTR Foods
Website of Eastern Masala
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.