ಈ ಕಾಂಗ್ರೆಸ್‌ ಪ್ರಣಾಳಿಕೆ ಈಗಿನದ್ದಲ್ಲ! ಕ್ಲೇಮ್‌ ಹಿಂದಿನ ಸತ್ಯ ಏನು?

ಕಾಂಗ್ರೆಸ್‌, ಪ್ರಣಾಳಿಕೆ, ಹಿಂದೂ, ಮುಸ್ಲಿಮ್‌

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೀಗೆ ನಡೆದುಕೊಳ್ಳುತ್ತದೆ, ಅದರ ಪ್ರಣಾಳಿಕೆ ಹಿಂದೂಗಳಿಗಲ್ಲ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮ್‌ ನಲ್ಲಿ “ಇದು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನಡೆದುಕೊಳ್ಳುವ ರೀತಿ ಆಗಿರುತ್ತದೆ, ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ದಯವಿಟ್ಟು ಮತ ನೀಡಬೇಡಿ, ಹಿಂದುಗಳಿಗೆ ನಾವೇನು ಕೊಡುವುದಿಲ್ಲ ಏನೂ ಮಾಡುವುದಿಲ್ಲ ಎಂದು ನೇರವಾಗಿ  ಹೇಳುತ್ತಿದ್ದಾರೆ ನೋಡಿ” ಎಂದು ಹೇಳಲಾಗಿದೆ.

ಕಾಂಗ್ರೆಸ್‌, ಪ್ರಣಾಳಿಕೆ, ಮುಸ್ಲಿಂ, ಹಿಂದೂ, ಅಧಿಕಾರ

ಇದು ಕಾಂಗ್ರೆಸ್‌ನ ಇತ್ತೀಚಿನ ಪ್ರಣಾಳಿಕೆ ಎಂಬ ರೀತಿಯಲ್ಲಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಕ್ಲೇಮಿನ ಬಗ್ಗೆ ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆಯನ್ನು ನಡೆಸಿದ್ದು, ಇದೊಂದು ತಪ್ಪಾದ ಸಂದರ್ಭವಾಗಿದೆ ಎಂದು ತಿಳಿದುಬಂದಿದೆ.

Fact Check/ Verification

ಈ ಕ್ಲೇಮಿನ ಬಗ್ಗೆ ಸತ್ಯಪರಿಶೀಲನೆ ನಡೆಸುವ ಆರಂಭದಲ್ಲಿ ಕ್ಲೇಮಿನಲ್ಲಿ ಹಂಚಿಕೊಳ್ಳಲಾದ ಪತ್ರಿಕೆಯ ಕ್ಲಿಪ್ಪಿಂಗ್‌ ಅನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಈ ವೇಳೆ ಫೋಟೋದಲ್ಲಿ ಕಾಂಗ್ರೆಸ್‌ ನಾಯಕ ಜೈ ರಾಂ ರಮೇಶ್, ಕಾಂಗ್ರೆಸ್‌ ಸಂಸದ, ಎಂ.ಪಿ. ಉತ್ತಮ್‌ ಕುಮಾರ್‌ ರೆಡ್ಡಿ ಅವರು ಇರುವುದು ಮತ್ತು ಕೈಯಲ್ಲಿ ಪುಸ್ತಕದ ರೀತಿ ಹಿಡಿದಿರುವುದು ಕಂಡು ಬಂದಿದೆ.

ಇದನ್ನು ಸಾಕ್ಷ್ಯವಾಗಿಟ್ಟುಕೊಂಡು, ಗೂಗಲ್‌ ಕೀವರ್ಡ್‌ ಸರ್ಚ್ ನಡೆಸಲಾಗಿದೆ. “ಜೈ ರಾಂ ರಮೇಶ್‌, ಎಂ.ಪಿ. ಉತ್ತಮ್‌ ಕುಮಾರ್ ರೆಡ್ಡಿ” ಎಂದು ಸರ್ಚ್‌ ನಡೆಸಲಾಗಿದ್ದು ಈ ವೇಳೆ ಪೇಪರ್‌ ಕ್ಲಿಪ್ಪಿಂಗ್‌ನಲ್ಲಿ ತೋರಿಸಲಾದ ಫೋಟೋ 2018ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆಯ ಸಮಯದ್ದು ಎಂದು ತಿಳಿದು  ಬಂದಿದೆ.

Also Read: ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಹಾರಿ ಹೋದ ಬಾಲಕಿ: ಘಟನೆ ನಿಜವೇ?

ಇದಕ್ಕೆ ಪೂರಕವಾಗಿ ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ಕೂಡ ನಡೆಸಲಾಗಿದ್ದು, ಪೇಪರ್‌ ಕ್ಲಿಪ್ಪಿಂಗ್‌ನಲ್ಲಿರುವ ಫೋಟೊ, ನವೆಂಬರ್‌ 28, 2018ರಂದು ಹೈದ್ರಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ್ದು ಎಂದು ತಿಳಿದುಬಂದಿದೆ. ಇದನ್ನು ನ್ಯೂಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇಂಡಿಯಾ.ಕಾಮ್‌ ಕೂಡ ಈ ಬಗ್ಗೆ ವರದಿ ಮಾಡಿದ್ದು, ಈ ಕುರಿತ ವರದಿಯನ್ನು ನವೆಂಬರ್‌ 27, 2018ರಂದು ಅಪ್‌ಲೋಡ್‌ ಮಾಡಲಾಗಿದೆ.

ಈ ಕಾರ್ಯಕ್ರಮದ ವರದಿಯನ್ನು ಎಚ್‌ಎಮ್‌ಟಿವಿ ಕೂಡ ವರದಿ ಮಾಡಿದ್ದು ಅದು ಯೂಟ್ಯೂಬ್‌ನಲ್ಲಿ ಲಭ್ಯವಾಗಿದೆ. ನವೆಂಬರ್‌ 27, 2018ರಂದು ಅಪ್‌ ಲೋಡ್‌ ಮಾಡಲಾದ ಈ ವೀಡಿಯೋದ ಶೀರ್ಷಿಕೆಯಲ್ಲಿ ಜೈ ರಾಂ ರಮೇಶ್‌ ಅವರು ಗಾಂಧಿ ಭವನದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು ಎಂದು ಬರೆಯಲಾಗಿದೆ. 

ಇದರ ಪ್ರಕಾರ ಗೂಗಲ್‌ ಸರ್ಚ್‌ ನಡೆಸಿದಾಗ ತೆಲಂಗಾಣ ಕಾಂಗ್ರೆಸ್‌ ಬಿಡುಗಡೆ ಮಾಡಿದ ಪ್ರಣಾಳಿಕೆ ಲಭ್ಯವಾಗಿದೆ. ಇದರಲ್ಲಿ ಕ್ಲೇಮ್‌ನಲ್ಲಿ ಪೋಸ್ಟ್‌ ಮಾಡಲಾದ ಪೇಪರ್‌ ಕ್ಲಿಪ್ಪಿಂಗ್‌ನಲ್ಲಿರುವ ಅಂಶಗಳು ಕಂಡು ಬಂದಿವೆ.

Conclusion

ಈ ಸತ್ಯಶೋಧನೆಯ ಪ್ರಕಾರ ಕಾಂಗ್ರೆಸ್‌ ಪ್ರಣಾಳಿಕೆ 2018ರ ತೆಲಂಗಾಣ ಚುನಾವಣೆ ಹೊತ್ತಿನದ್ದಾಗಿದೆ. ಅದನ್ನು ಈಗ ಪೋಸ್ಟ್‌ ಮಾಡಿ ಪ್ರತಿಪಾದಿಸಿರುವುದು ತಪ್ಪಾದ ಸಂದರ್ಭವಾಗಿದೆ.

Result: Missing Contex

Our Sources
The NewIndian Express report dated November 28, 2018
India.com report dated November, 27 2018
HMTV Youtube Video dated November, 27 2018

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.