ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಹಾರಿಹೋದ ಬಾಲಕಿ: ಘಟನೆ ನಿಜವೇ?

ಗಾಳಿಪಟ, ಹಾರಿಹೋದ, ಬಾಲಕಿ, ತೈವಾನ್‌

ಅಹಮದಾಬಾದ್‌ನಲ್ಲಿ ಗಾಳಿಪಟದೊಂದಿಗೆ ಬಾಲಕಿ ಹಾರಿಹೋಗಿದ್ದಾಳೆ ಎನ್ನುವ ವೀಡಿಯೋ ಒಂದು ವೈರಲ್‌ ಆಗಿದೆ.

ಈ ಕುರಿತ ಕ್ಲೇಮ್‌  ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲೇಮಿನಲ್ಲಿ “Three year old girl flew away with the kite in Ahmedabad… Thank God, she has come down safely… Very scary…Have you seen this vidio of Ahmedabad patang bazillion????” ಎಂದು ಹೇಳಲಾಗಿದೆ. ಜೊತೆಗೆ ಕೆಲವು ವಾಟ್ಸ್ ಆಪ್‌ ಗ್ರೂಪ್‌ನಲ್ಲಿ ಕೂಡ ಇದೇ ವೀಡಿಯೋ ಹರಿದಾಡುತ್ತಿರುವುದು ಕಂಡು ಬಂದಿದೆ.

ಗಾಳಿಪಟ, ಹಾರಿಹೋದ, ಬಾಲಕಿ, ತೈವಾನ್‌, ಅವಘಡ, ಗಾಳಿಪಟ ಉತ್ಸವ
ಅಹಮದಾಬಾದ್‌ನಲ್ಲಿ ಗಾಳಿಪಟ ಬಾಲಕಿಯನ್ನು ಎತ್ತಿಕೊಂಡು ಗಾಳಿಪಟ ಹಾರಿದೆ ಎನ್ನಲಾದ ಕ್ಲೇಮ್‌

ನ್ಯೂಸ್‌ಚೆಕರ್‌ ಈ ಬಗ್ಗೆ ಸತ್ಯ ಪರಿಶೀಲನೆಯನ್ನು ನಡೆಸಿದ್ದು, ಇದು ತಪ್ಪು ಎಂದು ಗುರುತಿಸಿದೆ.

Fact Check/ Verification

ಈ ವೈರಲ್‌ ವೀಡಿಯೋದ ಬಗ್ಗೆ ಗೂಗಲ್‌ನಲ್ಲಿ ಕೀವರ್ಡ್‌ ಸರ್ಚ್‌ ನಡೆಸಲಾಗಿದೆ. “girl” “kite” “swept away ಎಂದು ಸರ್ಚ್‌ ಮಾಡಲಾಗಿದ್ದು ಈ ವೇಳೆ ಹಲವು ವೀಡಿಯೋಗಳು ಮತ್ತು ಸರ್ಚ್‌ ಫಲಿತಾಂಶಗಳು ಲಭ್ಯವಾಗಿವೆ.

ಪರಿಶೀಲನೆ ವೇಳೆ ಆಗಸ್ಟ್ 31 2020ರ ನ್ಯೂಯಾರ್ಕ್ ಟೈಮ್ಸ್‌ ವರದಿ ಲಭ್ಯವಾಗಿದ್ದು ಈ ಘಟನೆ ನಡೆದ ಸ್ಥಳ ತೈವಾನ್‌ ಎಂದು ತಿಳಿದುಬಂದಿದೆ. “ತೈವಾನ್‌ನಲ್ಲಿ ಹಬ್ಬವೊಂದರ ವೇಳೆ ಗಾಳಿಪಟದ ಬಾಲಕ್ಕೆ ಸಿಕ್ಕಿ ಹಾಕಿಕೊಂಡ 3 ವರ್ಷದ ಬಾಲಕಿ ಆಕಾಶಕ್ಕೆ ನೆಗೆದಂತಾಗಿದ್ದು, ತುಸು ಸಮಯದ ಬಳಿಕ ಆಕೆ ಸುರಕ್ಷಿತವಾಗಿ ಇಳಿದಳು” ಎಂದು ಈ ವರದಿಯಲ್ಲಿ ಹೇಳಲಾಗಿದೆ.

Also Read: ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಚಿರತೆ ಕಾಣಿಸಿಕೊಂಡಿದೆಯೇ? ಸುಳ್ಳು ಕ್ಲೇಮ್‌ ವೈರಲ್‌

 ವರದಿಯಲ್ಲಿ ಈ ಘಟನೆಯನ್ನು  ಉತ್ತರ ತೈವಾನ್‌ನಲ್ಲಿ ನಡೆದ ಗಾಳಿ ಪಟ ಉತ್ಸವದಲ್ಲಿ ನಡೆದಿದೆ. ಸುಮಾರು 30 ಸೆಕೆಂಡ್‌ ಬಾಲಕಿ ಹಾರಾಡಿದ್ದು ಬಳಿಕ ಸುರಕ್ಷಿತವಾಗಿ ಇಳಿದಿದ್ದಾಳೆ. ಆಕೆಯ ಹೆಸರನ್ನು ಲಿನ್‌ ಎಂದು ಮಾಧ್ಯಮಗಳು ಗುರುತಿಸಿವೆ ಎಂದು ವರದಿ ಹೇಳಿದೆ.

ಸಿಎನ್‌ಎನ್‌ ಕೂಡ ಆಗಸ್ಟ್ 31 2020ರಂದು ಈ ಘಟನೆಯ ವರದಿ ಮಾಡಿದ್ದು, ತೈವಾನ್‌ನ ರಾಜಧಾನಿ ತೈಪೈನ ದಕ್ಷಿಣದಲ್ಲಿರುವ ಹಸಿಂಚು ಎಂಬಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಹೇಳಿದೆ.

ಇದೊಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದ್ದು ನೂರಾರು ಜನ ಈ ವೇಳೆ ನೆರೆದಿದ್ದರು. ಪ್ರಬಲವಾದ ಗಾಳಿ ಈ ವೇಳೆ ಬಂದಿದ್ದು, ಬಾಲಕಿಯನ್ನು ಎತ್ತಿಕೊಂಡು ಗಾಳಿಪಟ ಹಾರಿದೆ. ಈ ವೇಳೆ ಜನರು ಗಾಬರಿಯಿಂದ ಕಿರುಚುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಈ ಘಟನೆ ಬಳಿಕ ಜನರ ಸುರಕ್ಷತೆ ದೃಷ್ಟಿಯಿಂದ ಗಾಳಿಪಟ ಉತ್ಸವವನ್ನೇ ರದ್ದು ಮಾಡಿರುವುದಾಗಿ ಅಲ್ಲಿನ ಮೇಯರ್‌ ಅವರು ಹೇಳಿದ್ದಾಗಿ ವರದಿ ಹೇಳಿದೆ.  

ದಿ ಗಾರ್ಡಿಯನ್‌ ಕೂಡ ಈ ಬಗ್ಗೆ ಆಗಸ್ಟ್‌ 31, 2020ರಂದು ವರದಿ ಮಾಡಿದ್ದು ಹಸಿಂಚು ನಗರದ ಪಕ್ಕದ ನಾನ್‌ಲಿಯೋ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದೆ. ಗಾಳಿಪಟ ಗಾಳಿಯಲ್ಲಿ ಹಾರಾಡುವವರೆಗೆ ಆ ಸ್ಥಳದಲ್ಲಿ  ಮಕ್ಕಳನ್ನು ದೂರದಲ್ಲಿ ಇರಿಸಲಾಗುತ್ತದೆ. ಗಾಳಿಪಟ ಹಾರಿದ ನಂತರವೇ ಹಗ್ಗವನ್ನು ಕೈಗೆ ಕೊಡಲಾಗುತ್ತದೆ ಎಂದು ತೈವಾನ್‌ ಮೂಲದ ಏಷ್ಯನ್‌ ಕೈಟ್‌ ಫೋರಂನ ಚೆನ್‌ ಕೊ ಫೆಂಗ್‌ ಅವರು ಹೇಳಿದ್ದಾರೆ.

ಗಾಳಿಪಟ ಉತ್ಸವದ ಅವಘಡ ಬಗ್ಗೆ ದಿ ಗಾರ್ಡಿಯನ್‌ ವರದಿ

ಘಟನೆ ಹಿನ್ನೆಲೆಯಲ್ಲಿ ಹಸಿಂಚು ನಗರದ ಲಿನ್‌ ಚಿ ಚೈನ್‌ ಅವರು ಸ್ಪಷ್ಟೀಕರಣದೊಂದಿಗೆ ಕ್ಷಮೆ ಕೋರಿದ್ದಾರೆ ಎಂದು ವರದಿ ಹೇಳಿದೆ.

Conclusion

ಸತ್ಯಶೋಧನೆಯ ಪ್ರಕಾರ ಇದು ಅಹಮದಾಬಾದ್‌ನಲ್ಲಿ ನಡೆದ ಘಟನೆ ಅಲ್ಲ, ಬದಲಿಗೆ ತೈವಾನ್‌ನಲ್ಲಿ 2020 ರ ವೇಳೆ ನಡೆದ ಘಟನೆಯಾಗಿದೆ. ಆದ್ದರಿಂದ ಈ ಕ್ಲೇಮ್‌ ತಪ್ಪಾಗಿದೆ.

Result: False

Our Sources:
Report Newyork Times, news report, Dated: Augst 31, 2020
The Guardian news report, Dated: Augst 31, 2020
CNN news report, Dated: Augst 31, 2020

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.