ಕಬಿನಿಯಲ್ಲಿ ಕೃಷ್ಣಮೃಗವನ್ನು ಮೊಸಳೆ ಬೆನ್ನಟ್ಟಿದೆಯೇ?; ಸತ್ಯ ಇಲ್ಲಿದೆ! 

ಮೊಸಳೆ, ಬೆನ್ನಟ್ಟುವಿಕೆ, ಕೃಷ್ಣಮೃಗ, ಜಿಂಕೆ, ಕಬಿನಿ,

ಕಬಿನಿ ಅರಣ್ಯ ವ್ಯಾಪ್ತಿಯಲ್ಲಿ ಕೃಷ್ಣಮೃಗವೊಂದನ್ನು ಮೊಸಳೆ ಬೆನ್ನಟ್ಟುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ನದಿಯಲ್ಲಿ ಮೊಸಳೆ ಕೃಷ್ಣಮೃಗವನ್ನು ಹಿಂಬಾಲಿಸುತ್ತಿದ್ದು, ಬೇಟೆಗೆ ಪ್ರಯತ್ನಿಸುತ್ತದೆ. ಕೊನೆಗೆ ಹೇಗೋ ಕೃಷ್ಣಮೃಗ ಮೊಸಳೆ ಬಾಯಿಗೆ ಆಹಾರವಾಗುವುದರಿಂದ ಪಾರಾಗಿ ದಡ ಸೇರುತ್ತಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ.

ಇನ್‌ಸ್ಟಾ ಗ್ರಾಂನಲ್ಲಿ ಕಂಡು ಬಂದ ಈ ಕ್ಲೇಮ್‌ ಹೀಗಿದೆ. “ಕಬಿನಿ ನದಿಯಲ್ಲಿ ಕಂಡ ಅದ್ಭುತ ದೃಶ್ಯ. ಭೂಮಿ ಮೇಲೆ ಹುಟ್ಟಿದ ಯಾರೇ ಆಗ್ಲಿ ಜೀವಕ್ಕಾಗಿ, ಜೀವನಕ್ಕಾಗಿ ಹೋರಾಟ ಮಾಡ್ಲೇ ಬೇಕು” ಎಂದು ವೀಡಿಯೋದಲ್ಲಿ ಹೇಳಲಾಗಿದೆ. 

ಕಬಿನಿ, ಕೃಷ್ಣಮೃಗ, ಬೆನ್ನಟ್ಟಿದ ಮೊಸಳೆ, ವೈರಲ್‌ ವೀಡಿಯೋ
ಇನ್‌ಸ್ಟ್‌ಗ್ರಾಂನಲ್ಲಿ ಕಂಡು ಬಂದ ಕ್ಲೇಮ್‌

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಈ ಕ್ಲೇಮಿನಲ್ಲಿ ಹೇಳಿದಂತೆ ಮೊಸಳೆ ಕೃಷ್ಣಮೃಗವನ್ನು ಬೆನ್ನಟ್ಟುತ್ತಿರುವ ದೃಶ್ಯ ಕಬಿನಿಯದ್ದಲ್ಲ ಆದ್ದರಿಂದ ಈ ಕ್ಲೇಮ್‌ ತಪ್ಪು ಎಂದು ತಿಳಿದುಬಂದಿದೆ. 

Fact check/ Verification

ವೈರಲ್‌ ವೀಡಿಯೋದ ಸತ್ಯಶೋಧನೆಗಾಗಿ, ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ. 

ಸ್ಕ್ರಾಲ್‌ ವೆಬ್‌ನಲ್ಲಿ ಕಂಡು ಬಂದ ವರದಿ ಪ್ರಕಾರ, ಇದು ಆಫ್ರಿಕಾದ ಬೋಟ್ಸ್ವಾನಾದ ಚೋಬೆ ನದಿಯಲ್ಲಿ ನಡೆದ ಘಟನೆಯಾಗಿದೆ. 

ಮೊಸಳೆಯೊಂದು ಕೃಷ್ಣಮೃಗವನ್ನು ಬೇಟೆಗಾಗಿ ಹಿಂಬಾಲಿಸುತ್ತಿದ್ದ ವೇಳೆ ಪ್ರವಾಸಿಗರೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಈ ವರದಿಯಲ್ಲಿ ಫೆಬ್ರವರಿ 7 2023 ರಂದು ಅಪ್‌ಲೋಡ್‌ ಮಾಡಲಾಗಿದೆ. 

ಈ ಕುರಿತು ಲೇಟೆಸ್ಟ್ ಸೈಟಿಂಗ್ಸ್ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಡಿಯೋ ಕೂಡ ಲಭ್ಯವಾಗಿದ್ದು ಅದು ಜನವರಿ 31, 2023ರಂದು ಅಪ್‌ಲೋಡ್‌ ಮಾಡಲಾಗಿದೆ. “ಮೊಸಳೆಯಿಂದ ಪಾರಾಗಲು ಈಜಿದ ಜಿಂಕೆ” ಎಂಬ ಶೀರ್ಷಿಕೆಯಲ್ಲಿ ಈ ವೀಡಿಯೋ ಇದೆ.

ಯೂಟ್ಯೂಬ್‌ನಲ್ಲಿ ಕಂಡುಬಂದ ವೀಡಿಯೋ

ಲೇಟೆಸ್ಟ್‌ ಸೈಟ್‌ ಸೀಯಿಂಗ್ ಅವರ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರಗಳನ್ನು ಕೊಡಲಾಗಿದ್ದು, ಕೈಟ್ಲಿನ್‌ ಎರ್ ವಾಕರ್‌ ಎಂಬ ಪಶು ನರ್ಸ್, ವನ್ಯಜೀವಿ ಫೋಟೋಗ್ರಾಫರ್‌ ಆಗಿರುವ ಒಬ್ಬರು ತಮ್ಮ ಕುಟುಂಬದವರೊಂದಿಗೆ ಚೋಬೆ ನದಿಯಲ್ಲಿ ದೋಣಿ ವಿಹಾರ ಮಾಡಿದ್ದು ಈ ವೇಳೆ ಮೊಸಳೆ ಕೃಷ್ಣಮೃಗವನ್ನು ಬೇಟೆಯಾಡಲು ಯತ್ನಿಸುವ ದೃಶ್ಯ ಕಂಡಿದೆ. ಅದನ್ನವರು ವೀಡೀಯೋ ಚಿತ್ರೀಕರಿಸಿದ್ದು, ಲೇಟೆಸ್ಟ್‌ ಸೈಟ್‌ ಸೀಯಿಂಗ್‌ ಜೊತೆಗೆ ಹಂಚಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Also Read: ಕರ್ನಾಟಕ ಚುನಾವಣೆ: ಜೆಡಿಎಸ್‌ ಗೆದ್ದರೆ, ಮತ್ತೆ ಹಳೆ ಟ್ರಾಫಿಕ್‌ ದಂಡ ದರ ಜಾರಿ ಎಂದು ಆಶ್ವಾಸನೆ ನೀಡಲಾಗಿದೆಯೇ?

ವೈರಲ್‌ ವೀಡಿಯೋದ ಬಗ್ಗೆ ಇನ್ನಷ್ಟು ಶೋಧನೆಗೆ ಗೂಗಲ್‌ ಕೀವರ್ಡ್‌ ಸರ್ಚ್ ಮಾಡಲಾಗಿದೆ. ಈ ವೇಳೆ ಹಫ್ ಪೋಸ್ಟ್‌ ವರದಿ ಲಭ್ಯವಾಗಿದ್ದು, ಬೋಸ್ಟ್ವಾನಾದ ಚೋಬೆ ನದಿಯಲ್ಲಿ ಕಂಡುಬಂದ ದೃಶ್ಯ ಎಂದು ಬರೆಯಲಾಗಿದೆ.

ಇದರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ವನ್ಯಜೀವಿ ಫೋಟೋಗ್ರಾಫರ್‌ ಕೂಡ ಆಗಿರುವ ಕೈಟ್ಲಿನ್‌ ಎರ್ ವಾಕರ್‌ ಅವರ ಪೇಜ್‌ ಲಭ್ಯವಾಗಿದ್ದು, ಅದರಲ್ಲಿ ತಾವು ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿರುವಾಗ ಕಂಡ ದೃಶ್ಯವನ್ನು ಮತ್ತು ಇದರ ವೀಡಿಯೋವನ್ನು ದೃಶ್ಯೀಕರಿಸಿದ ಬಗ್ಗೆ ಹೇಳಿದ್ದಾರೆ. ಅವರು ಹಂಚಿಕೊಂಡಿರುವ ವೀಡಿಯೋವನ್ನು ಇಲ್ಲಿ ನೋಡಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ ಇದು ಕಬಿನಿಯಲ್ಲಿ ನಡೆದ ಘಟನೆಯಲ್ಲಿ ಬದಲಾಗಿ ಆಫ್ರಿಕಾದ ಬೋಸ್ಟ್ಸ್ವಾನಾದ ಚೋಬೆ ನದಿಯಲ್ಲಿ ನಡೆದ ಘಟನೆಯಾಗಿದೆ. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ. 

Results: False

Our Sources:
Instagram Video by,
YouTube Video by, LatestSighting, Dated: January 31, 2023
Report by, LatestSighting
Report by, Huffpost, Dated: January 31, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.