Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ದಲಿತ ವರನನ್ನು ಮೇಲ್ಜಾತಿಯವರು ಕುದುರೆಯಿಂದ ಇಳಿಸುವ ವೀಡಿಯೋ
ಈ ವೀಡಿಯೋ ಆಂಧ್ರಪ್ರದೇಶದ ಮಡ್ಡಿಕೇರಾ ಗ್ರಾಮದಲ್ಲಿ ಯಾದವ ಸಮುದಾಯದ ಕುಟುಂಬಗಳನ್ನು ಒಳಗೊಂಡ ಸಾಂಪ್ರದಾಯಿಕ ದಸರಾ ಕುದುರೆ ಓಟದ ಸಂದರ್ಭದ ವಿವಾದವಾಗಿದ್ದು, ವೈರಲ್ ಹೇಳಿಕೆ ತಪ್ಪಾಗಿದೆ
ಪೇಟ ಧರಿಸಿ ಕುದುರೆ ಮೇಲೆ ಕುಳಿತ ವ್ಯಕ್ತಿಯೊಬ್ಬನನ್ನು ಇಳಿಸುವ ವೀಡಿಯೋ ಒಂದು ವೈರಲ್ ಆಗಿದ್ದು, ದಲಿತ ವರನನ್ನು ಮೇಲ್ಜಾತಿಯ ಜನರು ಕುದುರೆಯಿಂದ ಇಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಳಕೆದಾರರೊಬ್ಬರು, “ದಲಿತ ವರನೊಬ್ಬ ಕುದುರೆ ಸವಾರಿ ಮಾಡಿದ, ಮತ್ತು ದಬ್ಬಾಳಿಕೆ ನಡೆಸುವ ಜಾತಿ ಹಿಂದೂಗಳು ಭಯಭೀತರಾದರು. ಇದು ಹಿಂದುತ್ವದ ನಿಜವಾದ ಮುಖ – ದಲಿತರು ಘನತೆಯನ್ನು ಪ್ರತಿಪಾದಿಸಿದ ಕ್ಷಣ ಸಿದ್ಧಾಂತ ಕುಸಿಯುತ್ತದೆ” ಎಂದಿದೆ.

ಆದರೆ, ಈ ಹೇಳಿಕೆ ಸುಳ್ಳು ಎಂದು ನಮ್ಮ ತನಿಖೆ ಬಹಿರಂಗಪಡಿಸಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಡ್ಡಿಕೆರಾ ಗ್ರಾಮದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಕುದುರೆ ರೇಸ್ ವೇಳೆ ಎರಡು ತಂಡಗಳ ನಡುವೆ ವಾಗ್ವಾದ ನಡೆದಿದ್ದು, ಇದು ಆ ವೀಡಿಯೋ ಆಗಿದೆ ಎಂದು ಕಂಡುಬಂದಿದೆ.
Also Read: ತೇಜಸ್ ಯುದ್ಧ ವಿಮಾನ ಬಗ್ಗೆ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಟೀಕೆ ಎಂದ ವೀಡಿಯೋ ನಕಲಿ!
ಗೂಗಲ್ ಲೆನ್ಸ್ ಮೂಲಕ ಕೀಫ್ರೇಮಗಳನ್ನುರಿವರ್ಸ್ ಸರ್ಚ್ ಮಾಡಿದ್ದು, ಈ ವೇಳೆ ಅಕ್ಟೋಬರ್ 2025 ರ ಪೋಸ್ಟ್ಗಳು ಕಂಡುಬಂದವು, ಅಲ್ಲಿ ಈ ವೀಡಿಯೋವನ್ನು ಮಡ್ಡಿಕೇರಾದಲ್ಲಿ ನಡೆದ ದಸರಾ ಕುದುರೆ ಓಟದ ಸಮಯದ್ದು ಎಂದು ವಿವರಿಸಲಾಗಿದೆ. ಮಡ್ಡಿಕೇರಾ ಎನ್ನುವುದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಒಂದು ಹಳ್ಳಿ.
ಅಕ್ಟೋಬರ್ 3 ರಂದು “Maddikera”, “horse racing”, “fight”, and “Dussehra” ಎಂಬ ಹ್ಯಾಶ್ಟ್ಯಾಗ್ಗಳೊಂದಿಗೆ VENU ಫಿಲ್ಮ್ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ನಲ್ಲಿ ಉತ್ತಮ ಗುಣಮಟ್ಟದ ಆವೃತ್ತಿ ಕಂಡುಬಂದಿದೆ.

ಅದೇ ಚಾನೆಲ್ ಅಕ್ಟೋಬರ್ 2 ರಂದು ಪೋಸ್ಟ್ ಮಾಡಿದ ಮತ್ತೊಂದು ವೀಡಿಯೋದಲ್ಲಿ ಹಲವಾರು ಸವಾರರು ಹೂಮಾಲೆಗಳು, ಡ್ರಮ್ಸ್ ಮತ್ತು ಸಿಂಬಲ್ಗಳೊಂದಿಗೆ ಮಡ್ಡಿಕೇರಾವನ್ನು ಪ್ರವೇಶಿಸುವುದನ್ನು ತೋರಿಸುತ್ತದೆ.
ವೈರಲ್ ಕ್ಲಿಪ್ನಲ್ಲಿರುವ ಅದೇ ಯುವಕ ಇಲ್ಲೂ ಕಾಣಿಸಿಕೊಳ್ಳುತ್ತಾನೆ. ಅವನು ಬರುತ್ತಿದ್ದಂತೆ, ಚರ್ಚೆ ನಡೆದು ಆತ ತನ್ನ ಪೇಟ ಮತ್ತು ಹಾರವನ್ನು ತೆಗೆದಿಡುತ್ತಾನೆ. ಯಾವುದೇ ದೃಶ್ಯಾವಳಿಯಲ್ಲಿ ಯಾವುದೇ ವಿವಾಹ ಸಮಾರಂಭ ಕಂಡುಬರುವುದಿಲ್ಲ.
ಈ ವೀಡಿಯೊಗಳನ್ನು Venu Ta RRock ಎಂಬ ಅದೇ ಬಳಕೆದಾರರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ನ್ಯೂಸ್ಚೆಕರ್ ವೀಡಿಯೋ ಚಿತ್ರೀಕರಿಸಿದ ವೇಣು ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ವೀಡಿಯೋ ಮದುವೆಗೆ ಸಂಬಂಧಿಸಿದ್ದಲ್ಲ, ಮಡ್ಡಿಕೇರಾದಲ್ಲಿ ನಡೆದ ವಾರ್ಷಿಕ ದಸರಾ ಕುದುರೆ ಓಟದ ಸಂದರ್ಭದಲ್ಲಿ ಇದನ್ನು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಓಟದಲ್ಲಿ ಮೊದಲ ಮತ್ತು ಎರಡನೇ ಸ್ಥಾನಕ್ಕಾಗಿ ಎರಡು ಗುಂಪುಗಳ ನಡುವೆ ವಿವಾದ ನಡೆದಿತ್ತು. ಮಡ್ಡಿಕೇರಾದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಈ ದೃಶ್ಯಗಳನ್ನು ಅವರು ಚಿತ್ರೀಕರಿಸಿದ್ದಾರೆ ಮತ್ತು ವೀಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ VENU ಫಿಲ್ಮ್ ಫ್ಯಾಕ್ಟರಿಯಲ್ಲಿ ಅಪ್ ಲೋಡ್ ಮಾಡಿದ್ದಾಗಿ ವೇಣು ಹೇಳಿದರು.
ಈ ಓಟವು ಗ್ರಾಮದಲ್ಲಿ ವಾರ್ಷಿಕ ಸಂಪ್ರದಾಯವಾಗಿದ್ದು, ಯಾದವ ಸಮುದಾಯದ ಮೂರು ಕುಟುಂಬಗಳು ಸುಮಾರು ಮೂರು ಕಿಲೋಮೀಟರ್ ದೂರವನ್ನು ಕ್ರಮಿಸುತ್ತವೆ ಎಂದು ಅವರು ವಿವರಿಸಿದರು. ಅವರ ಪ್ರಕಾರ, ವೈರಲ್ ವೀಡಿಯೋದಲ್ಲಿ ಕಂಡುಬರುವ ಚರ್ಚೆ ಎರಡು ಕುಟುಂಬಗಳ ನಡುವಿನ ಚರ್ಚೆಯಾಗಿದೆ.
ಮಡ್ಡಿಕೇರಾ ದಸರಾ ಕುದುರೆ ರೇಸ್ ಗೆ ಸಂಬಂಧಿಸಿದಂತೆ ವೇಣು ಅವರ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪುಟ ಮತ್ತು ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಲವಾರು ರೀತಿಯ ವೀಡಿಯೋಗಳು ನಮಗೆ ಕಂಡುಬಂದಿವೆ. ಈ ವೀಡಿಯೋಗಳನ್ನು ಹಲವು ವರ್ಷಗಳಿಂದ ಪೋಸ್ಟ್ ಮಾಡಲಾಗಿದೆ. ಅವುಗಳನ್ನು ನೀವು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು .
ಜಾರಿ ಆಧರಿತವಾದ ವೈರಲ್ ಹೇಳಿಕೆಯನ್ನು ಮಡ್ಡಿಕೇರಾ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಜಯ್ ನಿರಾಕರಿಸಿದ್ದಾರೆ. ಈ ವೀಡಿಯೋ ಸಾಂಪ್ರದಾಯಿಕ ದಸರಾ ಕುದುರೆ ಓಟದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ವಿವಾದ ಯಾದವ ಸಮುದಾಯದ ಎರಡು ಕುಟುಂಬಗಳ ನಡುವಿನ ಸಣ್ಣ ವಿವಾದವಾಗಿದ್ದು, ಹಿರಿಯರು ಅದನ್ನು ಬಗೆಹರಿಸಿದ್ದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಹಲವು ತೆಲುಗು ಮಾಧ್ಯಮ ವರದಿಗಳು ನಮಗೆ ಲಭ್ಯವಾಗಿವೆ. ದಸರಾ ಕುದುರೆ ಓಟದ ಬಗ್ಗೆ ಈಟಿವಿ ಆಂಧ್ರಪ್ರದೇಶ ವರದಿ ಮಾಡಿದೆ. ಜೊತೆಗೆ, ಎಬಿಎನ್ ತೆಲುಗು (ಸೆಪ್ಟೆಂಬರ್ 29, 2025) ಮತ್ತು ಆರ್ಟಿವಿ ಕರ್ನೂಲ್ (ಅಕ್ಟೋಬರ್ 13, 2024) ವರದಿಗಳು ಸಹ ಈ ಕಾರ್ಯಕ್ರಮವನ್ನು ವರದಿ ಮಾಡಿದ್ದವು.
ಹೆಚ್ಚುವರಿಯಾಗಿ, 2021 , 2022 , 2023 ರಲ್ಲಿಯೂ ಹಲವಾರು ಯೂಟ್ಯೂಬ್ ಮತ್ತು ಫೇಸ್ಬುಕ್ ಪೋಸ್ಟ್ಗಳು ಮಡ್ಡಿಕೇರಾದ ಇದೇ ರೀತಿಯ ಕುದುರೆ ಓಟದ ವೀಡಿಯೊಗಳನ್ನು ಸಹ ಒಳಗೊಂಡಿವೆ.
ಅಕ್ಟೋಬರ್ 1, 2025 ರ ಹ್ಯಾನ್ಸ್ ಇಂಡಿಯಾ ವರದಿಯ ಪ್ರಕಾರ, ಈ ಘಟನೆಯು ಯಾದವ ರಾಜ ವಂಶಸ್ಥರು ಆಚರಿಸುವ ಪರುವೇತ ಎಂಬ ಶತಮಾನಗಳಷ್ಟು ಹಳೆಯ ರಾಜ ಸಂಪ್ರದಾಯದ ಭಾಗವಾಗಿದೆ.
ಮೇಲ್ಜಾತಿಯ ಜನರು ದಲಿತ ವರನನ್ನು ಕುದುರೆಯಿಂದ ಬಲವಂತವಾಗಿ ಇಳಿಸುವುದನ್ನು ತೋರಿಸಲಾಗಿಲ್ಲ. ಇದು ಆಂಧ್ರಪ್ರದೇಶದ ಮಡ್ಡಿಕೇರಾ ಗ್ರಾಮದಲ್ಲಿ ಯಾದವ ಸಮುದಾಯದ ಕುಟುಂಬಗಳನ್ನು ಒಳಗೊಂಡ ಸಾಂಪ್ರದಾಯಿಕ ದಸರಾ ಕುದುರೆ ಓಟದ ಸಂದರ್ಭದ ವಿವಾದವಾಗಿದೆ ಎಂದು ಕಂಡುಬಂದಿದೆ.
Also Read: ಸುಳ್ಯ ಸಂಪಾಜೆಯಲ್ಲಿ ಕಾಲು ಜಾರಿ ಆನೆ ರಸ್ತೆಗೆ ಬಿದ್ದಿದೆಯೇ?
FAQ ಗಳು
Q 1. ವೈರಲ್ ಆಗಿರುವ ವಿಡಿಯೋ ದಲಿತ ವರನ ಮದುವೆಯದ್ದೇ?
ಇಲ್ಲ. ಇದು ಮಡ್ಡಿಕೇರಾದಲ್ಲಿ ನಡೆದ ದಸರಾ ಕುದುರೆ ಓಟದ ಸ್ಪರ್ಧೆಯದ್ದಾಗಿದೆ
Q 2. ಆ ವ್ಯಕ್ತಿ ವಿಡಿಯೋದಲ್ಲಿ ತನ್ನ ಪೇಟವನ್ನು ಏಕೆ ತೆಗೆದಿದ್ದಾನೆ?
ಕುದುರೆ ಓಟಕ್ಕೆ ಸಂಬಂಧಿಸಿದ ವಿವಾದದ ಸಮಯದಲ್ಲಿ ಅವನು ಅದನ್ನು ತೆಗೆದಿದ್ದಾನೆ, ಜಾತಿ ಕಿರುಕುಳದಿಂದಾಗಿ ಅಲ್ಲ.
Q 3. ವಿವಾದದಲ್ಲಿ ಭಾಗಿಯಾಗಿರುವ ಜನರು ಯಾರು?
ಅವರು ಯಾದವ್ ಸಮುದಾಯದ ಸದಸ್ಯರು, ವಾರ್ಷಿಕ ಓಟದಲ್ಲಿ ಭಾಗವಹಿಸುವ ಎರಡು ಕುಟುಂಬಗಳಿಂದ ಬಂದವರು.
Q 4. ಪೊಲೀಸರು ಯಾವುದೇ ಜಾತಿ ಆಧಾರಿತ ಹಿಂಸಾಚಾರವನ್ನು ದೃಢಪಡಿಸಿದ್ದಾರೆಯೇ?
ಇಲ್ಲ. ಇದು ಜಾತಿಗೆ ಸಂಬಂಧಿಸಿದ್ದಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.
Q 5. ಈ ಕುದುರೆ ಓಟವು ವಾರ್ಷಿಕ ಸಂಪ್ರದಾಯವೇ?
ಹೌದು. ಈ ಓಟವನ್ನು ಪ್ರತಿ ವರ್ಷ ದಸರಾ ಸಮಯದಲ್ಲಿ ನಡೆಸಲಾಗುತ್ತದೆ ಮತ್ತು ಮಾಧ್ಯಮ ವರದಿಗಳಿವೆ.
Our Sources
YouTube Shorts by VENU Film Factory, October 2, 2025
YouTube Shorts by VENU Film Factory, October 3, 2025
YouTube Shorts by VENU Film Factory, October 23, 2025
Facebook post by Venu Ta RRock, October 3, 2025
Facebook post by Venu Ta RRock, October 16, 2021
Instagram post by Venu Ta RRock, October 3, 2025
YouTube video by ETV Andhra Pradesh, October 3, 2025
YouTube video by ABN Telugu, September 29, 2025
YouTube video by RTV Kurnool, October 13, 2024
Report by The Hans India, October 1, 2025
YouTube videos by VENU Film Factory, dated 2023 and 2022
Telephonic conversation with Maddikera PS SHO Vijay
Telephonic conversation with Venu
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
December 7, 2024
Ishwarachandra B G
July 19, 2023
Ishwarachandra B G
May 2, 2023