Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸಾಂಪ್ರದಾಯಿಕ ಸಮರ ಕಲೆ ಅಭ್ಯಾಸ ಮಾಡುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಆಕೆ ನಟಿ!
ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಸಮರಕಲೆ ಅಭ್ಯಾಸ ಮಾಡುತ್ತಿರುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಆಕೆ ಮರಾಠಿ ನಟಿ ಪಾಯಲ್ ಜಾಧವ್
ಮಹಿಳೆಯೊಬ್ಬರು ಸಾಂಪ್ರದಾಯಿಕ ಸಮರ ಕಲೆ ಅಭ್ಯಾಸ ಮಾಡುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ. ಆ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 20, 2025 ರಂದು ಬಿಜೆಪಿ ಶಾಸಕಿ ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾದರು.
ಏತನ್ಮಧ್ಯೆ ಮಹಿಳೆಯೊಬ್ಬರ ವೀಡಿಯೋವನ್ನು ಅವರು ರೇಖಾ ಗುಪ್ತಾ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಸಮರ ಕಲೆ ಅಭ್ಯಾಸ ಮಾಡುವುದನ್ನು ನೋಡಬಹುದು. “ಈಗ ದೆಹಲಿಯ ಮುಖ್ಯಮಂತ್ರಿಯಾಗಿರುವ ಆರ್ಎಸ್ಎಸ್ ಕಾರ್ಯಕರ್ತೆ ಶ್ರೀಮತಿ ರೇಖಾ ಗುಪ್ತಾ ಅವರ ಹಳೆಯ ವಿಡಿಯೋ” ಎಂದು ಇದರಲ್ಲಿದೆ.

ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರದ್ದು ಎಂದು ಹೇಳಿಕೊಳ್ಳುವ ವೈರಲ್ ವೀಡಿಯೊವನ್ನು ತನಿಖೆ ಮಾಡಲು, ನಾವು ಅದರ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದ್ದೇವೆ. ಈ ವೇಳೆ ವೀಡಿಯೊವನ್ನು ಪಾಯಲ್ ಜಾಧವ್ ಎಂಬ ಮಹಿಳೆ ಫೆಬ್ರವರಿ 19, 2025 ರಂದು ಇನ್ಸ್ಟಾಗ್ರಾಮ್ ( ಆರ್ಕೈವ್ ) ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.

ಬಳಿಕ ಪಾಯಲ್ ಜಾಧವ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹುಡುಕಿದ್ದು, ಅವರು ಮರಾಠಿ ನಟಿ ಎಂದು ಗೊತ್ತಾಗಿದೆ. ಜೊತೆಗೆ ಅಂತಹ ಹಲವು ವೀಡಿಯೋಗಳನ್ನು ಅವರ ಖಾತೆಯಿಂದ ಈಗಾಗಲೇ ಪೋಸ್ಟ್ ಮಾಡಲಾಗಿದೆ . ನಮ್ಮ ತನಿಖೆ ಸಂದರ್ಭ ಜನವರಿ 5, 2023 ರಂದು ವೈರಲ್ ಕ್ಲಿಪ್ನಲ್ಲಿ ಧರಿಸಿದ ಉಡುಪಿನಲ್ಲೇ ಇದ್ದ ವೀಡಿಯೋವನ್ನು ಇನ್ನೊಂದು ಪೋಸ್ಟ್ ನಲ್ಲೂ ಹಂಚಿಕೊಂಡಿದ್ದಾರೆ.

ಫೆಬ್ರವರಿ 19, 2025 ರಂದು ಪೋಸ್ಟ್ ಮಾಡಲಾದ ವೀಡಿಯೋದಲ್ಲಿ ಮರಾಠಿ ಶೀರ್ಷಿಕೆಯಲ್ಲಿ, “ಛತ್ರಪತಿ ಶಿವಾಜಿ ಮಹಾರಾಜರ ಮಹಾನ್ ಕಾರ್ಯಗಳಿಗೆ ನಮನಗಳು. “ಇದು ನನ್ನ ಸಣ್ಣ ಪ್ರಯತ್ನ, ಶಸ್ತ್ರಾಸ್ತ್ರಗಳಲ್ಲಿ ಪರಿಣಿತರಾಗಿದ್ದ ಮಹಾರಾಜ ಪ್ರತಾಪಪುರಂದರರಿಂದ ಸ್ಫೂರ್ತಿ ಪಡೆದಿದೆ.” ಶೀರ್ಷಿಕೆಯು ಈ ತರಬೇತಿಯನ್ನು ಸವ್ಯಸಾಚಿ ಗುರುಕುಲಕ್ಕೆ ಸಮರ್ಪಿಸುವುದಾಗಿ ಇದೆ .

ನಮ್ಮ ತನಿಖೆ ವೇಳೆ ಕೊಲ್ಲಾಪುರದಲ್ಲಿರುವ ಸರ್ವೋದಯ ಮರ್ದಾನಿ ಕ್ರೀಡಾ ತರಬೇತಿ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿದ್ದೇವೆ , ಅಲ್ಲಿ ನಾವು ಲಖನ್ ಜಾಧವ್ ಎಂಬವರೊಂದಿಗೆ ಮಾತನಾಡಿದ್ದೇವೆ. ಈ ವೇಳೆ ಅವರು ವೈರಲ್ ವೀಡಿಯೊದಲ್ಲಿ ಕಾಣುವ ಮಹಿಳೆ ಮರಾಠಿ ನಟಿ ಪಾಯಲ್ ಜಾಧವ್ ಎಂದು ಸ್ಪಷ್ಟಪಡಿಸಿದ್ದಾರೆ. ಲಖನ್ ಜಾಧವ್ ಅವರು ಪಾಯಲ್ ಜಾಧವ್ ಅವರಿಗೆ ಸಾಂಪ್ರದಾಯಿಕ ಸಮರ ಕಲೆಗಳಲ್ಲಿ ತರಬೇತಿ ನೀಡಿರುವುದಾಗಿ ತಿಳಿಸಿದ್ದಾರೆ.
ನ್ಯೂಸ್ಚೆಕರ್ ನಟಿ ಪಾಯಲ್ ಜಾಧವ್ ಅವರನ್ನು ಸಂಪರ್ಕಿಸಿದಾಗ, ವೈರಲ್ ವೀಡಿಯೋದಲ್ಲಿರುವುದು ದೆಹಲಿ ಮುಖ್ಯಮಂತ್ರಿಯಲ್ಲ ಅದು ನಾನು ಎಂದು ಪಾಯಲ್ ಜಾಧವ್ ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋವನ್ನು ಶಿವಾಜಿ ಮಹಾರಾಜ ಜಯಂತಿಯ ಸಂದರ್ಭದಲ್ಲಿ ಪೋಸ್ಟ್ ಮಾಡಲಾಗಿದೆ. ಅದು ವೈರಲ್ ಆದಾಗ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಆ ವೀಡಿಯೋದಲ್ಲಿರುವುದು ನಾನೇ ಹೊರತು ಬೇರಾರೂ ಅಲ್ಲ ಎಂದವರು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಸಮರಕಲೆ ಅಭ್ಯಾಸ ಮಾಡುತ್ತಿರುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಬದಲಾಗಿ ಮರಾಠಿ ನಟಿ ಪಾಯಲ್ ಜಾಧವ್ ಎಂದು ತನಿಖೆಯಿಂದ ತೀರ್ಮಾನಿಸಲಾಗಿದೆ.
Our Sources
Instagram Post by Payal Jadhav, Dated: February 19, 2025
Conversation with Trainer Lakhan Jadhav
Conversation with Marathi actress Payal Jadhav
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)