Authors
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಘೋಷಣೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ವೇಳಾಪಟ್ಟಿಯೊಂದನ್ನು ಶೇರ್ ಮಾಡಲಾಗಿದೆ.
ಈ ಕ್ಲೇಮಿನ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 12ರಂದು ಮತದಾನ ನಡೆದು ಮೇ 15ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಪ್ರಕ್ರಿಯೆ ಕುರಿತ ಎಲ್ಲ ಅಂಶಗಳನ್ನು ದಿನಾಂಕದೊಂದಿಗೆ ಹಂಚಿಕೊಳ್ಳಲಾಗಿದೆ. ಈ ಕ್ಲೇಮ್ ಇಲ್ಲಿದೆ.
ಈ ಕ್ಲೇಮಿನ ಕುರಿತು ನ್ಯೂಸ್‌ಚೆಕರ್ ಸತ್ಯ ಪರಿಶೀಲನೆ ನಡೆಸಿದ್ದು, ಇದೊಂದು ತಪ್ಪಾದ ಕ್ಲೇಮ್ ಎಂದು ತಿಳಿದುಬಂದಿದೆ.
Fact check/ Verification
ಈ ಕ್ಲೇಮಿನ ಕುರಿತಂತೆ ಸತ್ಯ ಪರಿಶೀಲನೆ ನಡೆಸಲು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಲಾಯಿತು. ಈ ವೇಳೆ ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ನಡೆಯಲಿದೆ ಎನ್ನುವ ಮಾಹಿತಿ ತಿಳಿದುಬಂದರೂ, ಈ ಕುರಿತಂತೆ ಚುನಾವಣೆ ಆಯೋಗ ಹೊರಡಿಸಿದ ಯಾವುದೇ ಘೋಷಣೆಗಳು, ಪತ್ರಿಕಾ ವರದಿಗಳಾಗಲಿ ಲಭ್ಯವಾಗಿಲ್ಲ.
ಚುನಾವಣೆ ಕುರಿತಾಗಿ, ಚುನಾವಣಾ ಆಯೋಗದ ವೆಬ್‌ಸೈಟ್ ಶೋಧಿಸಲಾಗಿದ್ದು ಇಲ್ಲೂ ಯಾವುದೇ ಚುನಾವಣೆ ಘೋಷಣೆ ಕುರಿತ ಅಂಶಗಳು ಕಂಡುಬಂದಿರುವುದಿಲ್ಲ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿರುವುದಿಲ್ಲ.
Also Read: 2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಭಾರತದ ನಕಾಶೆ ಇತ್ತೀಚಿನದ್ದು ಎಂದು ವೈರಲ್
ಕ್ಲೇಮಿನಲ್ಲಿರುವ ದಿನಾಂಕಗಳನ್ನು ಗಮನಿಸಿ, ಮತ್ತಷ್ಟು ಶೋಧನೆ ನಡೆಸಿದಾಗ ತಿಳಿದುಬಂದ ಅಂಶವೇನೆಂದರೆ, ಇದು ಹಿಂದಿನ 2018ರ ಚುನಾವಣೆ ವೇಳಾಪಟ್ಟಿಯನ್ನೇ ಹೋಲುವಂತೆ ಇದೆ. ಈ ಕುರಿತು ಗೂಗಲ್ ನಲ್ಲಿ ಸರ್ಚ್ ನಡೆಸಿದಾಗ, ಕ್ಲೇಮಿನಲ್ಲಿ ಹೇಳಿರುವ ಎಲ್ಲ ದಿನಾಂಕಗಳೂ ಹಳೆಯ ವೇಳಾಪಟ್ಟಿಯನ್ನೇ ಹೋಲುವಂತೆ ಇರುವುದು ಸಾಬೀತಾಗಿದೆ.
ಈ ಕುರಿತು ದಿ ಹಿಂದೂ ಮಾರ್ಚ್ 27 2018ರಂದು ಮಾಡಿದ ವರದಿಯಲ್ಲಿ ಕ್ಲೇಮಿನಲ್ಲಿ ಹೇಳಿದ ರೀತಿಯೇ ಮತದಾನ ಮೇ 2 ರಂದು ಮತ್ತು ಫಲಿತಾಂಶ ಮೇ 15ರಂದು ಎಂದು ಬರೆಯಲಾಗಿರುವುದು ಕಂಡುಬಂದಿದೆ.
ಅಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯ ಘೋಷಣೆ ಮಾಡಿದ್ದು, ಎಪ್ರಿಲ್ 17ರಂದು ಚುನಾವಣೆ ಕುರಿತ ಗೆಜೆಟ್ ಅಧಿಸೂಚನೆ ಹೊರಡಿಸುವುದಾಗಿ ಹೇಳಿದ್ದರು. ಎಪ್ರಿಲ್ 24ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಎಪ್ರಿಲ್ 25ರಂದು ನಾಮಪತ್ರಗಳ ಪರಿಶೀಲನೆ, ಎಪ್ರಿಲ್ 27ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನ, ಮೇ 12ರಂದು ಮತದಾನ ಮತ್ತು ಮೇ 15ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಮಾಡುವುದಾಗಿ ಹೇಳಿದ್ದರು.
ರಾವತ್ ಅವರು ಅಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಎಲ್ಲ ಅಂಶಗಳೂ ಯಥಾವತ್ತಾಗಿ ಕ್ಲೇಮಿನಲ್ಲಿ ಕಂಡುಬಂದಿದೆ.
ಬ್ಯುಸಿನೆಸ್ಟ್ ಸ್ಟಾಂಡರ್ಡ್‌ನ ಮಾರ್ಚ್ 27, 2018ರ ವರದಿಯಲ್ಲಿ ರಾವತ್ ಅವರ ಪತ್ರಿಕಾಗೋಷ್ಠಿಯನ್ನು ಉಲ್ಲೇಖಿಸಲಾಗಿದ್ದು, ಅದೇ ದಿನಾಂಕಗಳನ್ನು ಪ್ರಕಟಿಸಲಾಗಿದೆ.
ಇಂಡಿಯಾ ಡಾಟ್ ಕಾಮ್ ಮಾರ್ಚ್ 27, 2018ರಂದು ಪ್ರಕಟಿಸಿದ ವರದಿಯಲ್ಲೂ ಇದೇ ದಿನಾಂಕಗಳನ್ನು ಚುನಾವಣಾ ಆಯೋಗ ಘೋಷಿಸಿದ್ದಾಗಿ ವರದಿಯಲ್ಲಿ ಹೇಳಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಕ್ಲೇಮಿನಲ್ಲಿ ಕಂಡುಬಂದಿರುವ ದಿನಾಂಕಗಳು, ಈ ಬಾರಿಯ ಚುನಾವಣೆಯ ದಿನಾಂಕಗಳಲ್ಲ. ಅದು 2018ರ ದಿನಾಂಕಗಳಾಗಿದ್ದು, ವರ್ಷವನ್ನು ಮಾತ್ರ ಬದಲಾಯಿಸಿ, ಹೊಸದು ಎಂಬಂತೆ ಹಂಚಿಕೊಳ್ಳಲಾಗಿದೆ. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ.
Result: False
Our Sources
Election Commission of India (eci.gov.in)
Report by The Hindu, Dated: March 27, 2018
Report by Business Standard, Dated: March 27, 2018
Report by India.com, Dated: March 27, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.