Friday, December 5, 2025

Fact Check

Fact Check: ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ‘ಹೊಡೆದು ವಿಚಾರಣೆ’ ಎನ್ನುವ ವೀಡಿಯೋಕ್ಕೂ, ಪ್ರಕರಣಕ್ಕೂ ಸಂಬಂಧವಿಲ್ಲ!

Written By Vasudha Beri, Translated By Ishwarachandra B G, Edited By Pankaj Menon
Jun 24, 2023
banner_image

Claim
ಒಡಿಶಾ ರೈಲು ದುರಂತದ ಪ್ರಮುಖ ಆರೋಪಿ, ಮದರಸಾದಲ್ಲಿ ತಲೆಮರೆಸಿಕೊಂಡಿದ್ದ ಸ್ಟೇಷನ್ ಮಾಸ್ಟರ್ ಷರೀಫ್ ನನ್ನು ಬಂಧಿಸಲಾಗಿದ್ದು, ಪೊಲೀಸರು ಆತನ ವಿಚಾರಣೆ ನಡೆಸುವ ವೀಡಿಯೋ

Fact
ಇದು ಸ್ಟೇಷನ್‌ ಮಾಸ್ಟರ್ ಶರೀಫ್‌ ಗೆ ಬಡಿದು ವಿಚಾರಣೆ ನಡೆಸುವ ವೀಡಿಯೋ ಅಲ್ಲ. ಈ ವೀಡಿಯೋ 2021ರದ್ದಾಗಿದ್ದು ಮೆಕ್ಸಿಕೋ ಮೂಲದ್ದು.

ಕೈಗಳಿಗೆ ಕೋಳ ಹಾಕಿ ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಮಲಗಿಸಿ, ಮರದ ಹಲಗೆಯಿಂದ ಹೊಡೆಯುತ್ತ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಹಲವು ಬಳಕೆದಾರರು ಇತ್ತೀಚಿನ ಒಡಿಶಾ ರೈಲು ದುರಂತದೊಂದಿಗೆ ಸಂಬಂಧ ಕಲ್ಪಿಸಿದ್ದು, ಬಾಲಾಸೋರ್ ರೈಲು ದುರಂತದ ಪ್ರಮುಖ ಆರೋಪಿ, ಮದರಸಾದಲ್ಲಿ ಅಡಗಿಕೊಂಡಿದ್ದ ಸ್ಟೇಷನ್ ಮಾಸ್ಟರ್ ಶರೀಫ್ ಅವರನ್ನು ಪೊಲೀಸರು ಬಂಧಿಸಿ ಥಳಿಸುತ್ತಿದ್ದಾರೆ ಎಂದು ವೀಡಿಯೋವನ್ನು ಹಂಚಿಕೊಂಡವರು ಆರೋಪಿಸಿದ್ದಾರೆ.

ಆದರೆ ಈ ದೃಶ್ಯಾವಳಿಗಳು ಒಡಿಶಾ ರೈಲು ಅಪಘಾತಕ್ಕೆ ಸಂಬಂಧಿಸಿದ್ದಲ್ಲ ಮತ್ತು ಕಟ್ಟುಕಥೆ ಹೆಣೆಯಲು ಈ ವೀಡಿಯೋವನ್ನು ಬಳಸಿಕೊಳ್ಳಲಾಗಿದೆ ಎಂದು ನ್ಯೂಸ್‌ಚೆಕರ್‌ ಕಂಡುಕೊಂಡಿದೆ.

ಸೂಚನೆ: ಈ ವೀಡಿಯೋಗಳು ಹಿಂಸೆಯ ದೃಶ್ಯಗಳನ್ನು ಹೊಂದಿವೆ.

ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ವೀಡಿಯೋದ ಸತ್ಯಶೋಧನೆ ನಡೆಸುವಂತೆ ನಮ್ಮ ನ್ಯೂಸ್ ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91-999949904) ಗೂ ಅನೇಕ ಬಾರಿ ಮನವಿಗಳು ಬಂದಿದ್ದು, ಅದರಂತೆ ವೀಡಿಯೋದ ಸತ್ಯಶೋಧನೆ ಮಾಡಲಾಗಿದೆ.  

ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ಹೊಡೆದು ವಿಚಾರಣೆ  ಎನ್ನುವ ವೀಡಿಯೋ ಸತ್ಯವಲ್ಲ, ಇದು ಸುಳ್ಳು!

Fact Check/Verification

ವೈರಲ್ ತುಣುಕನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಇದರಲ್ಲಿರುವ ಧ್ವನಿ ವಿದೇಶಿ ಭಾಷೆಯಲ್ಲಿರುವುದು ಕಂಡುಬಂದಿದೆ. ವ್ಯಕ್ತಿಯ ಮೇಲೆ ಮರದ ಹಲಗೆಯಲ್ಲಿ ಹಲ್ಲೆ ನಡೆಸುತ್ತಿರುವ ಈ ದೃಶ್ಯವನ್ನು ಗಮನಿಸಿ ನಾವು, ನಾವು ಗೂಗಲ್ನಲ್ಲಿ  “naked man,” “handcuffed,” “thrashed” ಮತ್ತು “wooden bat” ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನವೆಂಬರ್ 3, 2022ರಂದು ಪೋಸ್ಟ್‌ ಮಾಡಲಾದ ವೀಡಿಯೋ ಒಂದು KrudPlug.net ವೆಬ್‌ ಸೈಟ್‌ನಲ್ಲಿ ಕಂಡುಬಂದಿದೆ.

ಈ ವೀಡಿಯೋಕ್ಕೆ ” Man stripped naked and handcuffed gets beaten with a wooden plank by Cartel” ಎಂಬ ಶೀರ್ಷಿಕೆ ಕೊಡಲಾಗಿದ್ದು, ವೈರಲ್ ವೀಡಿಯೋದ ಸ್ವಲ್ಪ ಉದ್ದವಾದ ಮತ್ತು ಸ್ಪಷ್ಟವಾದ ಆವೃತ್ತಿಯ ವೀಡಿಯೋ ಇದೆ. ಸ್ಥಳವನ್ನು ಮೆಕ್ಸಿಕೋ ಎಂದು ಗುರುತಿಸಲಾಗಿದೆ.

ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ಹೊಡೆದು ವಿಚಾರಣೆ  ಎನ್ನುವ ವೀಡಿಯೋ ಸತ್ಯವಲ್ಲ, ಇದು ಸುಳ್ಳು!

ಆ ನಂತರ ನಾವು ವೈರಲ್‌ ವೀಡಿಯೋದ ಸ್ಪಷ್ಟ ಆವೃತ್ತಿಯ ಕೀಫ್ರೇಮ್‌ಗಳನ್ನು ತೆಗೆದು, ಗೂಗಲ್ ಲೆನ್ಸ್ನಲ್ಲಿ ಹುಡುಕಾಟ ನಡೆಸಿದ್ದು, ಜೂನ್ 9, 2022 ರ ರೆಡ್ಡಿಟ್ ಪೋಸ್ಟ್ ಲಭ್ಯವಾಗಿದೆ. ಇದು ವೈರಲ್ ಕ್ಲಿಪ್ ಅನ್ನು ಹೊಂದಿದ್ದು, “.. ಕದ್ದಿದ್ದಕ್ಕಾಗಿ ಒಬ್ಬ ಕಳ್ಳನನ್ನು ಹೊಡೆಯಲಾಯಿತು” ಎಂಬ ಕ್ಯಾಪ್ಷನ್‌ ಕೊಡಲಾಗಿದೆ.

ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ಹೊಡೆದು ವಿಚಾರಣೆ  ಎನ್ನುವ ವೀಡಿಯೋ ಸತ್ಯವಲ್ಲ, ಇದು ಸುಳ್ಳು!

ಅಕ್ಟೋಬರ್ 30, 2021ರ ಇನ್ನೊಂದು ರೆಡ್ಡಿಟ್ ಪೋಸ್ಟ್ ಅನ್ನೂ ನಾವು  ಕಂಡುಕೊಂಡಿದ್ದು ಇದೇ ವೀಡಿಯೋ ಮತ್ತು ಕ್ಯಾಪ್ಷನ್‌ ಅನ್ನು ಹೊಂದಿದೆ.

ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ಹೊಡೆದು ವಿಚಾರಣೆ  ಎನ್ನುವ ವೀಡಿಯೋ ಸತ್ಯವಲ್ಲ, ಇದು ಸುಳ್ಳು!

ಇದೇ ರೀತಿಯಾಗಿ ಮತ್ತು ವೆಬ್‌ಸೈಟ್‌ಗಳು ವೀಡಿಯೋವನ್ನು ಹಂಚಿಕೊಂಡಿದ್ದು, ಇದು ಮೆಕ್ಸಿಕೊದಿಂದ ಬಂದಿವೆ ಎಂದು ಪ್ರತಿಪಾದಿಸಲಾಗಿದೆ. ಆದರೂ ಇದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಇದಲ್ಲದೆ, “ತಲೆಮರೆಸಿಕೊಂಡಿರುವ ಸ್ಟೇಷನ್ ಮಾಸ್ಟರ್ ಶರೀಫ್” ಬಗ್ಗೆ ಸುಳ್ಳು ನಿರೂಪಣೆಯನ್ನು ನ್ಯೂಸ್ಚೆಕರ್ ಈಗಾಗಲೇ ಬಯಲಿಗೆಳೆದಿದೆ. ಇದನ್ನು ಇಲ್ಲಿ ನೋಡಬಹುದು.

ಇದರೊಂದಿಗೆ, ಆಗ್ನೇಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಬಹನಾಗ ಬಜಾರ್ ರೈಲ್ವೆ ನಿಲ್ದಾಣದ ಯಾವುದೇ ಸಿಬ್ಬಂದಿ ಪರಾರಿಯಾಗಿಲ್ಲ ಅಥವಾ ಕಾಣೆಯಾಗಿದ್ದಾರೆ ಎಂಬುದನ್ನು ಈಗಾಗಲೇ ಅಲ್ಲಗೆಳೆದಿದ್ದಾರೆ.  ಒಡಿಶಾ ತ್ರಿವಳಿ ರೈಲು ಅಪಘಾತದ ತನಿಖೆಗೆ ಎಲ್ಲರೂ ಸಹಕರಿಸುತ್ತಿದ್ದಾರೆ ಎಂದವರು ಸ್ಪಷ್ಟಪಡಿಸಿದ್ದಾರೆ.

“ಜೂನಿಯರ್ ಎಂಜಿನಿಯರ್‌ ಅಮೀರ್ ಖಾನ್‌ ತಲೆಮರೆಸಿಕೊಂಡಿದ್ದಾರೆ” ಎಂಬ ಹೇಳಿಕೆ ಕುರಿತೂ ಸತ್ಯಶೋಧನೆಯನ್ನು ನ್ಯೂಸ್‌ಚೆಕರ್‌ ನಡೆಸಿದ್ದು, ಅದನ್ನು ಇಲ್ಲಿ ನೋಡಬಹುದು.

Conclusion

ಸ್ಟೇಷನ್‌ ಮಾಸ್ಟರ್‌ ಶರೀಫ್‌ ತಲೆಮರೆಸಿಕೊಂಡಿದ್ದಾರೆ ಎಂಬ ಸುಳ್ಳು ನಿರೂಪಣೆಯನ್ನು ಇನ್ನಷ್ಟು ಮುಂದುವರಿಸಲು ಸುಮಾರು ಒಂದು ವರ್ಷಕ್ಕೂ ಹಳೆಯ, ಸಂಬಂಧವೇ ಇಲ್ಲದ ಮೆಕ್ಸಿಕೋದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ನಾವು ತೀರ್ಮಾನಿಸಬಹುದು.

Result: False

Our Sources

Post By KrudPlug.net, Dated November 3, 2022

Reddit Post, Dated June 9, 2022

Reddit Post, Dated October 30, 2021

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,439

Fact checks done

FOLLOW US
imageimageimageimageimageimageimage