Authors
Claim
ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರು
Fact
2019ರಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ರೈಲ್ವೇ ನಿಲ್ದಾಣವನ್ನು ಧ್ವಂಸ ಮಾಡಿದ ಪ್ರಕರಣ ಇದಾಗಿದೆ
ಗುಂಪೊಂದು, ರೈಲ್ವೇ ನಿಲ್ದಾಣವನ್ನು ಪುಡಿಗಟ್ಟುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ, “ರೈಲಿನ ಶಿಳ್ಳೆ ಶಬ್ದ ತಮ್ಮ ನಮಾಜ್‌ಗೆ ಭಂಗ* ತರುತ್ತಿದೆಯೊಂದು ಆಕ್ರೋಶಗೊಂಡು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ರೈಲು ನಿಲ್ದಾಣವನ್ನು ಧ್ವಂಸಗೊಳಿಸುತ್ತಿರುವ ದೃಶ್ಯ. ಅವನ್ಯಾವನೋ *ಹಿಂದುಗಳು ಹಿಂಸಾಚಾರಿಗಳು* ಅಂತ ಬೋಗಳುತ್ತಿದ್ದ… ಅಂತವನಿಗೆ ಲಕ್ಷಾಂತರ ಘಟನೆಗಳ ನಡುವೆ ಈ ಘಟನೆಯೂ ಸಮರ್ಪಣೆ… ಭಾರತದ ಭವಿಷ್ಯ ನಮ್ಮ ಕಣ್ಣ ಮುಂದೆ ಕಾಣುತ್ತಿದೆ.. ಇವರಿಗೆ ರೈಲಿನ ಶಿಳ್ಳೆ ಶಬ್ದ ಇಷ್ಟು ಕೋಪ ಬಂದ್ರೇ ನಾವು ಡೈಲಿ ನೋಮಾಜ್ ಮಾಡುವ ಶಬ್ದ ಏಗಿರುತ್ತೆ. ನಾವು ಏನು ಮಾಡಬೇಕು?” ಎಂದಿದೆ.
ಇದೇ ರೀತಿಯ ಪೋಸ್ಟ್ ಗಳನ್ನು ನಾವು ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಸಿಎಎ ಕುರಿತ ನಡೆದ ಪ್ರತಿಭಟನೆಯಾಗಿದೆ. ಈ ವಿದ್ಯಮಾನಕ್ಕೆ ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫೇಸ್ಬುಕ್ ನಲ್ಲಿರುವ ಫ್ರಾಂಕ್ಲಿ ಸ್ಪೀಕ್ ಎಂಬ ಬಳಕೆದಾರರ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋವನ್ನು ಡಿಸೆಂಬರ್ 16, 2019ರಂದು ಅಪ್ಲೋಡ್ ಮಾಡಲಾಗಿದೆ. ಜೊತೆಗೆ ಸಿಎಎ ವಿರುದ್ಧ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ.
ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಎಕ್ಸ್ ನಲ್ಲಿ ಅಭಿಜಿತ್ ಮಜುಂದಾರ್ ಎಂಬ ಎಕ್ಸ್ ಖಾತೆಯಿಂದ ಡಿಸೆಂಬರ್ 15, 2019ರಂದು ಮಾಡಿದ ಪೋಸ್ಟ್ ಲಭ್ಯವಾಗಿದೆ.
ಡಿಸೆಂಬರ್ 14, 2019ರ ಎಮ್‌ಡಿ ಇಜಾಜ್ ಅಹ್ಮದ್ ಯೂಟ್ಯೂಬ್ ವೀಡಿಯೋದಲ್ಲಿ, ಸಿಎಬಿ, ಎನ್ಆರ್ಸಿ ವಿರುದ್ಧ ಸಾಗರ್ದಿಗಿಯಲ್ಲಿರುವ ನಯೋಪಾರಾ ಮಹಿಷಾಸುರ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ (ಅನುವಾದಿಸಲಾಗಿದೆ) ಎಂದಿರುವುದನ್ನು ನೋಡಿದ್ದೇವೆ.
ಈ ಪೋಸ್ಟ್ ಗಳಲ್ಲಿ ವೈರಲ್ ವೀಡಿಯೋಕ್ಕೆ ಇವುಗಳಲ್ಲಿ ಸಾಮ್ಯತೆಯನ್ನು ನಾವು ಕಂಡುಕೊಂಡಿದ್ದೇವೆ.
ಇವುಗಳ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಮಾಧ್ಯಮ ವರದಿಗಳನ್ನು ನೋಡಿದ್ದೇವೆ. ಡಿಸೆಂಬರ್ 13, 2019ರ ಎನ್ ಡಿಟಿವಿ ವರದಿಯಲ್ಲಿ, ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಬಂಗಾಳದ ಮುರ್ಷಿದಾಬಾದ್ ನ ರೈಲ್ವೇ ಸ್ಟೇಷನ್‌ಗೆ ಬೆಂಕಿ ಎಂದಿದೆ.
ಡಿಸೆಂಬರ್ 13, 2019ರ ಬ್ಯುಸಿನೆಸ್ ಸ್ಟಾಂಡರ್ಡ್ ವರದಿಯಲ್ಲಿ ಸಿಎಎ ವಿರುದ್ಧ ಬಂಗಾಳದಲ್ಲಿ ಪ್ರತಿಭಟನೆ, ರೈಲ್ವೇ ನಿಲ್ದಾಣ ಧ್ವಂಸ, ರೈಲು ಚಾಲಕನಿಗೆ ಗಾಯ ಎಂದು ವರದಿಯಲ್ಲಿದೆ.
ಸಿಎಎ ಕಾಯ್ದೆ ಪ್ರತಿಭಟನೆಗೆ ಸಂಬಂಧಿಸಿ ಇದೇ ರೀತಿಯ ಮಾಧ್ಯಮ ವರದಿಗಳನ್ನು ವರದಿಗಳನ್ನುನಾವು ಇಲ್ಲಿ, ಇಲ್ಲಿ ನೋಡಿದ್ದೇವೆ.
Conclusion
ಈ ಸಾಕ್ಷ್ಯಗಳಪ್ರಕಾರ, ಇದು 2019ರ ಸಿಎಎ ವಿರುದ್ಧದ ಪ್ರತಿಭಟನೆ ಸಮಯದ್ದಾಗಿದ್ದು, ರೈಲಿನ ಹಾರ್ನ್ ನಿಂದ ನಮಾಜ್ ಗೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ನಡೆಸಿದ ಕೃತ್ಯವಲ್ಲ ಎಂದು ಕಂಡುಬಂದಿದೆ.
Result: Missing Context
Our Sources
Facebook Post By Frankly speak, Dated: December 16, 2019
X Post By Abhijit Majumder, Dated: December 15, 2019
YouTube Video By Md Ijaj Ahmed, Dated: December 14, 2019
Report By NDTV, Dated: December 13, 2019
Report By Business standard, December 13, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.