Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಷ್ಟ್ರಗೀತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಗೌರವ
2023ರ ಈ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ, ಅವರು ರಾಷ್ಟ್ರಗೀತೆಯ ಸಮಯದಲ್ಲಿ ವೇದಿಕೆಯಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು.

ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಎಡಿಟ್ ಮಾಡಿದ ವೀಡಿಯೋ ಎಂದು ಕಂಡುಕೊಂಡಿದೆ.
ವೀಡಿಯೋ ಪರಿಶೀಲನೆ ವೇಳೆ, ವೈರಲ್ ಕ್ಲಿಪ್ನ ಒಂದು ಫ್ರೇಮ್ನಲ್ಲಿ ಬಂಗಾಳಿ ಪಠ್ಯದೊಂದಿಗೆ ಹಿನ್ನೆಲೆ ಪರದೆಯನ್ನು ತೋರಿಸುತ್ತದೆ: “ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇತಾಜಿ ಒಳಾಂಗಣ ಕ್ರೀಡಾಂಗಣದಿಂದ ಹೊಸ ಅರ್ಜಿದಾರರಿಗೆ ವಿಧವಾ ಪಿಂಚಣಿಗಳನ್ನು ವಿತರಿಸಲು ಪ್ರಾರಂಭಿಸುತ್ತಾರೆ. ದಿನಾಂಕ: ಮಾರ್ಚ್ 23, 2022. ಸಮಯ: ಮಧ್ಯಾಹ್ನ 1 ಗಂಟೆ.” ಜೊತೆಗೆ ಗೆಟ್ಟಿ ಇಮೇಜಸ್ ವಾಟರ್ಮಾರ್ಕ್ ಸಹ ವೀಡಿಯೋದಲ್ಲಿ ಗೋಚರಿಸುತ್ತದೆ.

“ ಗೆಟ್ಟಿ ಇಮೇಜಸ್, ಮಮತಾ ಬ್ಯಾನರ್ಜಿ, ವಿಧವಾ ಭತ್ಯೆ “ ನಂತಹ ಕೀವರ್ಡ್ಗಳನ್ನು ಬಳಸಿಕೊಂಡು , ಮೂಲ ವೀಡಿಯೊವನ್ನು ಗೆಟ್ಟಿ ಇಮೇಜಸ್ನಲ್ಲಿ ಪತ್ತೆಹಚ್ಚಲಾಗಿದ್ದು , ಇದನ್ನು ಮಾರ್ಚ್ 23, 2022 ರಂದು ಅಪ್ಲೋಡ್ ಮಾಡಲಾಗಿದೆ . ಈ ಕ್ಲಿಪ್ನಲ್ಲಿ ರಾಷ್ಟ್ರಗೀತೆ ನುಡಿಸುವಾಗ ಮಮತಾ ಬ್ಯಾನರ್ಜಿ ಎದ್ದು ನಿಂತು, ಅದು ಮುಗಿದ ನಂತರವೇ ವೇದಿಕೆಯಿಂದ ನಿರ್ಗಮಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ವಿಧವಾ ಪಿಂಚಣಿ ಯೋಜನೆಯ ಭಾಗವಾಗಿ ನಡೆದ ಕಾರ್ಯಕ್ರಮವನ್ನು ದೃಷ್ಟಿ ಭೋಂಗಿ ಮತ್ತು ಈಟಿವಿ ಭಾರತ್ ಪಶ್ಚಿಮ ಬಂಗಾಳ ನೇರ ಪ್ರಸಾರ ಮಾಡಿತ್ತು. ಎರಡೂ ವೀಡಿಯೋಗಳು ಬ್ಯಾನರ್ಜಿ ಅವರು ರಾಷ್ಟ್ರಗೀತೆ ಮಧ್ಯದಲ್ಲಿ ಎದ್ದುಹೋಗಿಲ್ಲ ಎನ್ನುವುದನ್ನು ದೃಢಪಡಿಸಿವೆ.

ಈ ಸತ್ಯ ಶೋಧನೆಯ ಪ್ರಕಾರ, ವೈರಲ್ ಆಗಿರುವ ಈ ಹೇಳಿಕೆ ನಕಲಿ ಮತ್ತು ವೀಡಿಯೋ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
FAQಗಳು
ಪ್ರಶ್ನೆ 1. ರಾಷ್ಟ್ರಗೀತೆ ಮುಗಿಯುವ ಮೊದಲು ಮಮತಾ ಬ್ಯಾನರ್ಜಿ ವೇದಿಕೆಯಿಂದ ಹೊರಟರೇ?
ಇಲ್ಲ. ಅವರು ಗೀತೆ ಮುಗಿಯುವವರೆಗೂ ವೇದಿಕೆಯ ಮೇಲೆ ನಿಂತು ನಂತರವೇ ಹೊರಟುಹೋದರು.
ಪ್ರಶ್ನೆ 2. ಕಾರ್ಯಕ್ರಮ ಎಲ್ಲಿ ಮತ್ತು ಯಾವಾಗ ನಡೆಯಿತು?
ಈ ಕಾರ್ಯಕ್ರಮವು ಮಾರ್ಚ್ 23, 2022 ರಂದು ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ವಿಧವಾ ಪಿಂಚಣಿ ವಿತರಣಾ ಕಾರ್ಯಕ್ರಮದ ಸಮಯದಲ್ಲಿ ನಡೆಯಿತು
ಪ್ರಶ್ನೆ 3. ವೈರಲ್ ವೀಡಿಯೊವನ್ನು ಹೇಗೆ ಬದಲಾಯಿಸಲಾಯಿತು?ಕೊನೆಯಲ್ಲಿ ವೀಡಿಯೋ ಎಡಿಟ್ ಮಾಡಲಾಗಿದ್ದು, ಮಧ್ಯದಲ್ಲಿ ಹೊರ ನಡೆದಿದ್ದಾರೆ ಎಂಬಂತೆ ಬಿಂಬಿಸಲಾಗಿದೆ.
Our Sources
Video by the Getty Images, Dated: March 23, 2022
Video by Dristhi Bhongi Dated: March 23, 2022
Video by ETV Bharath West Bengal, Dated: March 23, 2022
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 22, 2025
Tanujit Das
November 17, 2025
Kushel Madhusoodan
November 15, 2025