Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆ, ಇದರಿಂದ ಸಾವಿನ ಪ್ರಮಾಣ ಹೆಚ್ಚು
Fact
ಅಪಾಯಕಾರಿ ವೈರಸ್ ಇದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ
ಪಾರಾಸಿಟಮಲ್ ಮಾತ್ರೆ ಅತ್ಯಂತ ಅಪಾಯಕಾರಿ. ಅದರಲ್ಲೊಂಡು ಅತಿ ಅಪಾಯಕಾರಿ ವೈರಸ್ ಇದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶೇಷವಾಗಿ ಪಿ-500 ಎಂಬ ಪಾರಾಸಿಟಮಲ್ ಮಾತ್ರೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ.
ಈ ವೈರಲ್ ಮೆಸೇಜ್‌ನ ಪ್ರಕಾರ, “ಅತ್ಯಂತ ಬಿಳಿ ಮತ್ತು ಹೊಳೆಯುವ ರೀತಿಯ” ಪಾರಾಸಿಟಮಲ್ ಮಾತ್ರೆಯಲ್ಲಿ ಮಚುಪೊ ವೈರಸ್ ಇದೆ ಎಂದು ಹೇಳಲಾಗಿದ್ದು ಇದರಿಂದ ಸಾವಿನ ಪ್ರಮಾಣ ಅಧಿಕವಾಗಿದೆ ಎಂದು ಹೇಳಿದೆ.
Also Read: ಮಣಿಪುರದಲ್ಲಿ ಪ್ರಪಾತಕ್ಕೆ ಬಸ್ ಬಿದ್ದ ಬಸ್, ವೈರಲ್ ವೀಡಿಯೋ ನಿಜವೇ?
ಇದೇ ಮೆಸೇಜ್ ಬಗ್ಗೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91-9999499044)ಗೆ ದೂರು ಕೂಡ ಬಂದಿದ್ದು ಸತ್ಯಶೋಧನೆಗಾಗಿ ಅದನ್ನು ನಾವು ಅಂಗೀಕರಿಸಿದ್ದೇವೆ.
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಆರಂಭದಲ್ಲಿ ಪಾರಾಸಿಟಮಲ್ ಮಚುಪೊ ವೈರಸ್ ಎಂದು ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಸಿಂಗಾಪುರ ಸರ್ಕಾರ ಹೊರಡಿಸಿದ ಸೂಚನೆಯೊಂದು ನಮಗೆ ಲಭ್ಯವಾಗಿದೆ. ಆಗಸ್ಟ್ 2, 2017ರಂದು ಹೊರಡಿಸಿದ ಈ ಸೂಚನೆಯಲ್ಲಿ, ಇದೊಂದು “ಸುಳ್ಳು” ಹೇಳಿಕೆಯಾಗಿದ್ದು, ಪಾರಾಸಿಟಮಲ್ ಪಿ-500 ಮಾತ್ರೆಯಲ್ಲಿ ಮಚುಪೊ ವೈರಸ್ ಇದೆ ಎನ್ನುವುದು ಸರಿಯಲ್ಲಿ ಮತ್ತು ಇದು “ಗಾಬರಿ ಪಡಬೇಕಾದ” ವಿಚಾರವಲ್ಲ ಎಂದು ಹೇಳಲಾಗಿದೆ.
ಈ ಸೂಚನೆಯ ಪ್ರಕಾರ, ಮಚುಪೊ ವೈರಸ್ ಅಥವಾ ಬೊಲಿವಿಯನ್ ಹೆಮರಾಜಿಕ್ ಜ್ವರ (ಬಿಎಚ್ಎಫ್) ವೈರಸ್ ಜ್ವರ, ಸ್ನಾಯು ನೋವು, ಒಸಡುಗಳಲ್ಲಿ ರಕ್ತಸ್ರಾವ ಮತ್ತು ಸೆಳೆತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಮ್ಯಾಚುಪೊ ವೈರಸ್ ಸೋಂಕು ವೈರಸ್ನೊಂದಿಗೆ ನೇರ ಸಂಪರ್ಕದಿಂದ ಹರಡುತ್ತದೆ, ಇದು ಮುಖ್ಯವಾಗಿ ಲಾಲಾರಸ, ಮಲ ಮತ್ತು ಮೂತ್ರದಿಂದ ಹರಡುತ್ತದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೆ, ಮಚುಪೊ ವೈರಸ್ ಸೋಂಕುಗಳನ್ನು ದಕ್ಷಿಣ ಅಮೆರಿಕಾದಲ್ಲಿ ಮಾತ್ರ ಕಂಡುಬಂದಿದ್ದನ್ನು ದಾಖಲಿಸಲಾಗಿದೆ.
Also Read: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ “ಹೇಳಿದಂತೆ ಕೇಳಬೇಕು” ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?
ಥೈಲ್ಯಾಂಡ್ ಮೂಲದ ದಿ ನೇಷನ್ ನವೆಂಬರ್ 4, 2020 ರ ಸುದ್ದಿ ವರದಿಯಲ್ಲಿ, ದೇಶದ ಡಿಜಿಟಲ್ ಆರ್ಥಿಕತೆ ಮತ್ತು ಸಮಾಜ ಸಚಿವಾಲಯವೂ ಈ ಎಚ್ಚರಿಕೆಯನ್ನು ತಳ್ಳಿಹಾಕಿದೆ ಎಂದು ಹೇಳಿದೆ. “ಇದಲ್ಲದೆ, ಮಚುಪೊ ವೈರಸ್ ಶುಷ್ಕ ಸ್ಥಳದಲ್ಲಿ ಬೆಳೆಯಲು ಸಾಧ್ಯವಿಲ್ಲ, ಆದ್ದರಿಂದ ಅದು ಮಾತ್ರೆಯನ್ನು ಆವರಿಸುವ ಸಾಧ್ಯತೆ ತುಂಬಾ ಕಡಿಮೆ” ಎಂದು ವರದಿ ಹೇಳಿದೆ.
ಈ ಕುರಿತ ಹೆಚ್ಚಿನ ಮಾಹಿತಿಗೆ ನಾವು ದೆಹಲಿಯ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ದಿಪಿನ್ ಸುಧಾಕರನ್ ಅವರನ್ನು ಸಂಪರ್ಕಿಸಿದ್ದು, ಅವರು ವೈರಲ್ ಎಚ್ಚರಿಕೆ ಹುಸಿ ಮತ್ತು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಎಂದು ದೃಢಪಡಿಸಿದ್ದಾರೆ. “ವೈರಸ್ ಬದುಕುಳಿಯಲು ಪೂರಕ ಅಂಶದ ಅಗತ್ಯವಿದೆ. ಅದಿಲ್ಲದೆ, ಇದು ಪ್ಯಾರಸಿಟಮಾಲ್ ಮಾತ್ರೆಯಂತಹ ನಿರ್ಜೀವ ವಸ್ತುವಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಈ ಸುಳ್ಳು ಸುದ್ದಿ ಕೆಲವು ಸಮಯದಿಂದ ಎಲ್ಲೆಡೆ ಹರಿದಾಡುತ್ತಿದೆ ಎಂದು ಹೇಳಿದ್ದಾರೆ.
Also Read: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಭ್ರಮ, ಸತ್ಯ ಏನು?
ಈ ಸತ್ಯಶೋಧನೆಯ ಪ್ರಕಾರ ಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆ ಎನ್ನುವುದು ಸುಳ್ಳಾಗಿದೆ ಮತ್ತು ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ.
Our Sources
Singapore government advisory, Dated: August 2, 2017
Report By The Nation, Dated: November 4, 2020
Conversation with Dr.Dipin Sudhakaran
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.