Fact Check: ಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನವಿದೆಯೇ? ವೈರಲ್‌ ಕ್ಲೇಮ್‌ ಹಿಂದಿನ ಸತ್ಯ ಏನು?

ಬಿಯರ್‌, ಆರೋಗ್ಯ, ಹೃದಯ, ಮೂತ್ರಪಿಂಡದ ಕಲ್ಲು ನಿವಾರಣೆ, ಮೂಳೆಗಳ ಬಲವರ್ಧನೆ, ಕೆಟ್ಟ ಕೊಲೆಸ್ಟರಾಲ್‌ ನಿವಾರಣೆ

Claim
ಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನಗಳಿವೆ, ಇದು ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡಲು ಒಳ್ಳೆಯದು


Fact
ಬಿಯರ್‌ ಕುಡಿಯುವುದರಿಂದ ವಿವಿಧ ಪ್ರಯೋಜನಗಳಿವೆ, ಆರೋಗ್ಯಕ್ಕೆ ಒಳ್ಳೆಯದು ಎನ್ನುವುದಕ್ಕೆ ಸಂಶೋಧನಾ ಸಾಕ್ಷ್ಯಗಳು ಲಭ್ಯವಿಲ್ಲ

ಬಿಯರ್‌ ಕುಡಿಯುವುದರಿಂದ ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡಲು ಒಳ್ಳೆಯದು ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಈ ವೀಡಿಯೋ ಕ್ಲೇಮ್‌ನಲ್ಲಿ ಹೀಗೆ ಹೇಳಲಾಗಿದೆ. “ಬಿಯರ್‌ನ ಪ್ರಯೋಜನಗಳು: ಹೃದಯಕ್ಕೆ ಒಳ್ಳೆಯದು, ಕಿಡ್ನಿ ಕಲ್ಲುಗಳು ಬರುವುದಿಲ್ಲ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮೂಳೆಗಳಿಗೆ ಒಳ್ಳೆಯದು” ಎಂದು ಹೇಳಲಾಗಿದೆ.

ಬಿಯರ್‌, ಆರೋಗ್ಯ, ಪ್ರಯೋಜನಕಾರಿ, ವೈರಲ್‌ ಕ್ಲೇಮ್‌

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆಯನ್ನು ಮಾಡಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

Fact Check/ Verification

ಲಭ್ಯವಿರುವ ಕೆಲವೊಂದು ಪುರಾವೆಗಳು, ಮಿತವಾದ ಬಿಯರ್‌ ಸೇವೆನಯಿಂದ ಕೆಲವೊಂದು ಸಂಭಾವ್ಯ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತೋರಿಸುತ್ತದೆ.  

  1. ಹೃದಯದ ಆರೋಗ್ಯಕ್ಕೆ: ಕೆಲವೊಂದು ಅಧ್ಯಯನಗಳು ಹೇಳುವ ಪ್ರಕಾರ, ಮಿತವಾಗಿ ಬಿಯರ್‌ ಕುಡಿಯುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ, ರಕ್ತದ ಹರಿವನ್ನು ಸುಧಾರಿಸುವ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
  2. ಮೂತ್ರಪಿಂಡದ ಕಲ್ಲು: ಬಿಯರ್ ನಲ್ಲಿರುವ ಸಂಯುಕ್ತಗಳು ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಸಹಾಯ ಮಾಡುವ ಸಾಧ್ಯತೆಗಳಿವೆ
  3. ಕೊಲೆಸ್ಟ್ರಾಲ್: ಮಧ್ಯಮ ಪ್ರಮಾಣದಲ್ಲಿ ಬಿಯರ್ ಸೇವನೆಯು ಎಚ್‌ಡಿಎಲ್ (ಉತ್ತಮ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.
  4. ಮೂಳೆ ಆರೋಗ್ಯ: ಬಿಯರ್ ಸಿಲಿಕಾನ್ ಅನ್ನು ಹೊಂದಿರುತ್ತದೆ, ಇದು ಮೂಳೆಯ ಸಾಂದ್ರತೆಯನ್ನು ಸುಧಾರಿಸಲು ಮತ್ತು ಆಸ್ಟಿಯೊಪೊರೋಸಿಸ್ (ಮೂಳೆಗಳು ದುರ್ಬಲಗೊಳ್ಳುವಿಕೆ) ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆದಾಗ್ಯೂ ಸಾಕ್ಷ್ಯಗಳ ಪ್ರಕಾರ, ಹೆಚ್ಚು ಮದ್ಯವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಮತ್ತು ಬಿಯರ್ ಸೇವನೆಯ ಯಾವುದೇ ಸಂಭಾವ್ಯ ಪ್ರಯೋಜನಗಳನ್ನು ಸಂಭಾವ್ಯ ಅಪಾಯಗಳ ವಿರುದ್ಧವಾಗಿ ನೋಡಬೇಕಾಗುತ್ತದೆ.

Also Read: ರೋಸ್‌ಮೆರಿ ಎಲೆ ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತಾ?

ಮುಂಬೈನಲ್ಲಿರುವ ವೈದ್ಯರಾದ ಡಾ.ಕಶ್ಯಪ್‌ ದಕ್ಷಿಣಿ ಅವರು ಹೇಳುವಂತೆ “ಬಿಯರ್‌ ಕುಡಿವುದರಿಂದ ಹೃದಯದ ಆರೋಗ್ಯಕ್ಕೆ, ಮೂತ್ರಪಿಂಡದ ಕಲ್ಲು, ಕೊಲೆಸ್ಟರಾಲ್‌ ಮತ್ತು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವರದಿಗಳಿವೆ. ಆದಾಗ್ಯೂ ಬಿಯರ್‌ ಕುಡಿಯದವರಲ್ಲಿ ಹೃದಯದ ಆರೋಗ್ಯ, ಕೆಟ್ಟ ಕೊಲೆಸ್ಟರಾಲ್‌, ಮೂಳೆಗಳ ಸಮಸ್ಯೆ, ಮೂತ್ರಪಿಂಡದ ಕಲ್ಲಿನ ಸಮಸ್ಯೆ ಹೆಚ್ಚು ಎನ್ನುವುದಕ್ಕೆ  ಪ್ರಖ್ಯಾತವಾದ ಯಾವುದೇ ವೈದ್ಯಕೀಯ ನಿಯತಕಾಲಿಕೆಗಳಲ್ಲಾಗಲಿ, ಸಂಶೋಧನಾ ಪತ್ರಿಕೆಗಳಲ್ಲಾಗಲಿ ಸಂಶೋಧನ ಲೇಖನಗಳು ಬಂದ ದಾಖಲೆಗಳಿಲ್ಲ.  

ಹೃದಯ/ಮೂಳೆ ಆರೋಗ್ಯ, ಮೂತ್ರಪಿಂಡದ ಕಲ್ಲುಗಳಾಗುವ ಸಾಧ್ಯತೆಗಳು, ಕೆಟ್ಟ ಕೊಲೆಸ್ಟರಾಲ್‌, ಇತ್ಯಾದಿಗಳು ಜನಾಂಗ, ಜನಾಂಗೀಯತೆ, ಜೀವನಶೈಲಿ, ಅಭ್ಯಾಸಗಳು, ನೀರು ಕುಡಿಯುವುದ ಕಡಿಮೆಯಾಗುವಿಕೆ, ಪೋಷಣೆ, ಚಟುವಟಿಕೆಯ ಮಟ್ಟ, ಆನುವಂಶಿಕತೆಯಂತವ ವಿವಿಧ ಕಾರಣಗಳನ್ನು ಹೊಂದಿವೆ. ಇದಲ್ಲದೆ, ಬಿಯರ್‌ನ ಅತಿಯಾದ ಸೇವನೆಯು ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದೆ, ಡಿಸ್ಲಿಪಿಡೆಮಿಯಾ, ಬೊಜ್ಜು, ಅಧಿಕ ರಕ್ತದೊತ್ತಡ, ಮತ್ತು ಹೃದ್ರೋಗ ಮತ್ತು ಕಡಿಮೆ ಮೂಳೆ ಖನಿಜ ಸಾಂದ್ರತೆಯಂತ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ” ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆಯು, ಬಿಯರ್‌ ಕುಡಿಯುವುದರಿಂದ ಹೃದಯಕ್ಕೆ, ಎಲುಬಿನ ಆರೋಗ್ಯ, ಕಿಡ್ನಿ ಕಲ್ಲು ನಿವಾರಣೆ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕಡಿಮೆ ಮಾಡುವುದಕ್ಕೆ ನೆರವಾಗುತ್ತದೆ ಎನ್ನುವುದು ತಪ್ಪಾದ ಸಂದರ್ಭ ಎಂಬುದನ್ನು ಕಂಡುಕೊಂಡಿದೆ.

Result: Missing Contex

Our Sources:
Beer and Cardiovascular Disease – Beer and Health
Effects of moderate beer consumption on health and disease: A consensus document – Nutrition, Metabolism and Cardiovascular Diseases (nmcd-journal.com)
Moderate Consumption of Beer and Its Effects on Cardiovascular and Metabolic Health: An Updated Review of Recent Scientific Evidence – PMC (nih.gov)
Nutrient Intake and Use of Beverages and the Risk of Kidney Stones among Male Smokers | American Journal of Epidemiology | Oxford Academic (oup.com)
Consumption of beer for kidney stones – Myths vs Facts | Fortis Health Connect Blogs (fortishealthcare.com)
Moderate consumption of beer reduces liver triglycerides and aortic cholesterol deposit in LDLr-/- apoB100/100 mice – PubMed (nih.gov)
To beer or not to beer: A meta-analysis of the effects of beer consumption on cardiovascular health – PubMed (nih.gov)
Moderate Beer Intake and Cardiovascular Health in Overweight Individuals – PubMed (nih.gov)
Silicon in beer and brewing – Casey – 2010 – Journal of the Science of Food and Agriculture – Wiley Online Library
Drinking too much alcohol can harm your health. Learn the facts | CDC

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.