Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಯುರೋಪ್ ನಲ್ಲಿ ಚಿನ್ನದ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಜೊತೆಗೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಿರುಚಿದ ಫೋಟೋ ಎಂದು ಕಂಡುಕೊಂಡಿದೆ.
Also Read: ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್ ಅಳವಡಿಸಲಾಗಿದೆಯೇ, ನಿಜಾಂಶ ಏನು?
ಮುಖ, ಕುತ್ತಿಗೆ ಮತ್ತು ಕೈಗಳನ್ನು ಬಟ್ಟೆಯೊಂದಿಗೆ ಹೋಲಿಸುವಾಗ ಚಿತ್ರದಲ್ಲಿ ವ್ಯತ್ಯಾಸಗಳನ್ನು ನಾವು ಕಂಡುಕೊಂಡಿದ್ದೇವೆ. ಇದು ತಿರುಚಲಾದ ಚಿತ್ರ ಎಂಬುದನ್ನು ಸೂಚಿಸುತ್ತದೆ. ಇದಲ್ಲದೆ, ನಾವು “Anant Ambani Radhika Merchant gold clothes” ಎಂದು ಕೀವರ್ಡ್ ಸರ್ಚ್ ನಡೆಸಿದ ವೇಳೆ ಆ ಕುರಿತು ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು, ಫೋಟೋಗಳು ಕಂಡುಬಂದಿಲ್ಲ.
ನಂತರ ನಾವು ಚಿತ್ರವನ್ನು ಟ್ರೂಮೀಡಿಯಾ ಮತ್ತು ಹೈವ್ ಮಾಡರೇಟರ್ ಎಂಬ ಎರಡು ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದ್ದೇವೆ. ಇವೆರಡೂ ತಿರುಚಲಾದ ಮತ್ತು ಎಐ ಮೂಲಕ ರಚಿಸಲಾದ ಚಿತ್ರವಾಗಿರುವ 99.99% ಸಾಧ್ಯತೆಯನ್ನು ಪತ್ತೆಹಚ್ಚಿವೆ. ಇದರೊಂದಿಗೆ ಜೂನ್ 1, 2024 ರಂದು ಇನ್ಸ್ಟಾಗ್ರಾಮ್ನಲ್ಲಿ “ಬ್ಯೂಟಿ ಆಫ್ ಎಐ” ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಪೋಸ್ಟ್ ಮಾಡಿದ ಉದಾಹರಣೆಯನ್ನು ನಾವು ನೋಡಿದ್ದೇವೆ.
ಅಕ್ಟೋಬರ್ 31, 2023 ರ ಇಂಡಿಯಾ ಟುಡೇ ವರದಿಯಲ್ಲಿ “ಜಿಯೋ ವರ್ಲ್ಡ್ ಪ್ಲಾಜಾದ ಭವ್ಯ ಉದ್ಘಾಟನೆಯಲ್ಲಿ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ” ಎಂಬ ಶೀರ್ಷಿಕೆಯೊಂದಿಗೆ ಕಾಣಿಸಿಕೊಂಡ ಫೋಟೋ ನಮಗೆ ಲಭ್ಯವಾಗಿದ್ದು, ಈ ಫೋಟೋವನ್ನು ವೈರಲ್ ಚಿತ್ರದೊಂದಿಗೆ ಹೋಲಿಸಿದಾಗ, ವೈರಲ್ ಫೋಟೋವನ್ನು ತಿರುಚಲಾಗಿದೆ ಎಂದು ದೃಢಪಡಿಸಿದೆ.
ಈ ಸತ್ಯಶೋಧನೆಯ ಪ್ರಕಾರ, ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟ ಫೋಟೋ ಎನ್ನುವುದು ತಿರುಚಿದ ಚಿತ್ರವಾಗಿದೆ.
Also Read: ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರೇ, ನಿಜ ಏನು?
Our Sources
Report By India Today, Dated: October 31, 2023
Hive Moderator
TrueMedia tool
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
July 20, 2024
Ishwarachandra B G
July 19, 2024
Ishwarachandra B G
July 18, 2024