Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಈ ವಾರ ಅಂಬಾನಿ ಮದುವೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ವಿವಾಹದ ಕುರಿತು ಹೇಳಿಕೆಗಳು ಹರಿದಾಡಿದ್ದವು. ಅಂಬಾನಿ ಜೋಡಿ ಮದುವೆಗೆ ಮುನ್ನ ಚಿನ್ನದ ಬಟ್ಟೆ ತೊಟ್ಟು ಫೊಟೋ ತೆಗೆಸುಕೊಂಡಿದ್ದರು, ಅಂಬಾನಿ ಮದುವೆ ವೀಡಿಯೋಗಳನ್ನು ಅವರ ನಿವಾಸ ಆಂಟಿಲಿಯಾ ಮೇಲೆ ಪ್ರದರ್ಶಿಸಲಾಗಿದೆ, ಅಂಬಾನಿ ಮದುವೆಗೆ ಹೋಗದ್ದಕ್ಕೆ ನಟ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ ಎಂಬುದು ಪ್ರಮುಖವಾಗಿತ್ತು. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ ಇದು ತಪ್ಪು ಎಂದು ಕಂಡುಬಂದಿದೆ. ಇದರೊಂದಿಗೆ ನಟ ದರ್ಶನ್ ಅಭಿನಯದ ಶಾಸ್ತ್ರಿ ಸಿನೆಮಾ ಟಿಕೆಟ್ ತೆಗೆದುಕೊಳ್ಳುವುದಕ್ಕೆ ನೂಕುನುಗ್ಗಲು, ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದ ದೃಶ್ಯ, ಐಸ್ ನೀರಿನಲ್ಲಿ ಕೈಗಳನ್ನು ಇಡುವುದರಿಂದ ತಲೆನೋವು ಕಡಿಮೆಯಾಗುತ್ತದೆ ಎಂಬ ಹೇಳಿಕೆಗಳು ಇದ್ದವು. ನ್ಯೂಸ್‌ಚೆಕರ್ ಇವುಗಳ ಬಗ್ಗೆಯೂ ಸತ್ಯಶೋಧನೆ ನಡೆಸಿದ್ದು ಸತ್ಯ ಏನು ಎಂಬುದನ್ನು ತೆರೆದಿಟ್ಟಿದೆ.

ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆಗೆ ಮುನ್ನ ಯುರೋಪ್ ನಲ್ಲಿ ಚಿನ್ನದ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಜೊತೆಗೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ತಿರುಚಿದ ಫೋಟೋ ಎಂದು ತನಿಖೆಯಲ್ಲಿ ಕಂಡುಬಂದಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ

ಅಂಬಾನಿ ಮನೆ ಆಂಟಿಲಿಯಾ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನಿಖೆಯಲ್ಲಿ ಕಂಡುಬಂದಂತೆ ಅಂಬಾನಿ ನಿವಾಸದ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದಿರುವುದು ತಪ್ಪಾಗಿದೆ. ಇದು ವಿಎಫ್ ಎಕ್ಸ್ ಮೂಲಕ ಮಾಡಿದ್ದಾಗಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ

ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಅವರ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್ ಅವರು ಸ್ಪಷ್ಟನೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ. ಸತ್ಯಶೋಧನೆಯ ಪ್ರಕಾರ, ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್ ಸ್ಪಷ್ಟನೆಯ ವೀಡಿಯೋ ಹಳೆಯದಾಗಿದ್ದು ಅದು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದ್ದಾಗಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ

ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅಭಿನಯದ ಸಿನೆಮಾ “ಶಾಸ್ತ್ರಿ” ಮರು ಬಿಡುಗಡೆ ಆಗಿದ್ದು, ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ತನಿಖೆಯಲ್ಲಿ ‘ಶಾಸ್ತ್ರಿ’ ಸಿನೆಮಾ ಟಿಕೆಟ್ ಗೆ ಆದ ನೂಕುನುಗ್ಗಲು ಇದಲ್ಲ, ಗುಜರಾತಿನ ಭರೂಚ್ ನಲ್ಲಿರುವ ಹೋಟೆಲ್ ಒಂದರಲ್ಲಿ ಕಂಪೆನಿಯೊಂದರ ಉದ್ಯೋಗ ಸಂದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ರೈಲಿಂಗ್ ಗೆ ಹಾನಿಯಾದ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ

ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವರ ಯೌವನದ ಸಮಯದ ಚಿತ್ರ ಇದು ಎಂಬಂತೆ ಹೇಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಕೈಯಲ್ಲಿ ಸಿಗರೇಟ್ ಹಿಡಿದಿರುವ ಮಹಿಳೆ ಸೋನಿಯಾ ಗಾಂಧಿ ಅಲ್ಲ ಎಂದು ಗೊತ್ತಾಗಿದೆ. ಎಐ ಉಪಕರಣಗಳ ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ವಾಸ್ತವವಾಗಿ, ಈ ಫೊಟೋ ಘಝಾಲೆ ಎಂಬ ಮಹಿಳೆಯದ್ದಾಗಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ

ಐಸ್ ನೀರಿನಲ್ಲಿ ಕೈಗಳನ್ನು ಇಟ್ಟರೆ ತಕ್ಷಣವೇ ತಲೆನೋವು ನಿವಾರಣೆಯಾಗುತ್ತದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗಿದೆ. ಈ ಕುರಿತ ಶೋಧನೆಯಲ್ಲಿ ಕಂಡುಬಂದಂತೆ ಐಸ್ ನೀರಿನಲ್ಲಿ ಕೈಗಳನ್ನು ಇಟ್ಟರೆ ತಕ್ಷಣವೇ ತಲೆನೋವು ನಿವಾರಣೆ ಎಲ್ಲರಿಗೂ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಬೇರೆ ಬೇರೆ ಕಾರಣಗಳಿಗೆ ಆಗುವ ತಲೆನೋವಿಗೆ ಇದನ್ನು ಅನ್ವಯಿಸುವುದು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
September 6, 2025
Vasudha Beri
September 4, 2025
Newschecker and THIP Media
July 4, 2025