Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜೋಡಿಗಳ ವೀಡಿಯೋ, ದಾಳಿಯ 20 ನಿಮಿಷಗಳ ಮೊದಲು
ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜೋಡಿಗಳ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡ ದಂಪತಿ ಮೃಪಟ್ಟಿಲ್ಲ. ಅವರು ದಾಳಿಗೆ ಮುನ್ನವೇ ಪಹಲ್ಗಾಮ್ ನಿಂದ ಬಂದಿದ್ದರು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜೋಡಿಯ ವೀಡಿಯೋ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಅಟ್ಯಾಕ್ ಮಾಡುವ 20 ನಿಮಿಷ ಮೊದಲು.. 3 ದಿನ ಆಯ್ತು ಅಷ್ಟೇ ಸಪ್ತಪದಿ ತುಳಿದ ನವ ಜೋಡಿ” ಎಂದಿದೆ.
(ಆರ್ಕೈವ್ ಆವೃತ್ತಿ ಇಲ್ಲಿದೆ)
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು. ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಈ ದಂಪತಿ ಸಿಲುಕಿಲ್ಲ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದ್ದೇವೆ. ಈ ವೇಳೆ ಏಪ್ರಿಲ್ 24, 2025ರಂದು @brownlady01 ಎಂಬ ಬಳಕೆದಾರರು ವೈರಲ್ ವೀಡಿಯೋಕ್ಕೆ ಉತ್ತರವಾಗಿ ಇದು ನಕಲಿ ವೀಡಿಯೋ ಎಂದು ಪ್ರತಿಕ್ರಿಯೆ ನೀಡಿದ್ದನ್ನು ನೋಡಿದ್ದೇವೆ.
ಆ ಬಳಿಕ ನಾವು ಗೂಗಲ್ ನಲ್ಲಿ ಇನ್ನಷ್ಟು ಸರ್ಚ್ ಮಾಡಿದ್ದು ಇನ್ಸ್ಟಾಗ್ರಾಂನಲ್ಲಿ queenpriyaprasad ಎಂಬ ಬಳಕೆದಾರರನ್ನು ನೋಡಿದ್ದೇವೆ. ಈ ಬಳಕೆದಾರರು ವೈರಲ್ ಆಗಿರುವ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ಕಾಶ್ಮೀರ, ಪಹಲ್ಗಾಮ್ ಎಂಬ ಟ್ಯಾಗ್ ಕೂಡ ಇದಕ್ಕೆ ನೀಡಲಾಗಿದೆ. ಇದೇ ಖಾತೆಯಲ್ಲಿ ಇನ್ನೊಂದು ವೀಡಿಯೋವನ್ನು ಶೇರ್ ಮಾಡಲಾಗಿದೆ. ಅದರಲ್ಲಿ ದಂಪತಿ ನಾವು “ಬದುಕಿದ್ದೇವೆ” ಎಂದು ಹೇಳುತ್ತಿದ್ದಾರೆ. ಪಹಲ್ಗಾಮ್ ದಾಳಿಯಾಗುವ 20 ನಿಮಿಷದ ಮೊದಲು ತಾವು ಅಲ್ಲಿಂದ ಬಂದಿದ್ದಾಗಿ, ಸುರಕ್ಷಿತವಾಗಿ ಮನೆ ಸೇರಿರುವುದಾಗಿ ಅವರು ವೀಡಿಯೋದಲ್ಲಿ ಹೇಳಿದ್ದಾರೆ.
ಇದೇ ಬಳಕೆದಾರರು ಪಹಲ್ಗಾಮ್ ದಾಳಿಗೆ ಮೊದಲು ಎಂಬ ವೀಡಿಯೋವನ್ನೂ ಹಂಚಿಕೊಂಡಿರುವುದು ಕಂಡುಬಂದಿದೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯಿಂದ ಸಾಯುವ 20 ನಿಮಿಷ ಮೊದಲು ದಂಪತಿ ತೆಗೆದ ವೀಡಿಯೋ ಎನ್ನುವುದು ತಪ್ಪಾಗಿದೆ. ದಾಳಿಗೂ ಮೊದಲೇ ಈ ದಂಪತಿ ಅಲ್ಲಿಂದ ವಾಪಾಸಾಗಿದ್ದಾರೆ ಎಂದು ತಿಳಿದುಬಂದಿದೆ.
Our Sources
X post By brownlady01, Dated: April 24, 2025
Instagram Post By queenpriyaprasad, Dated: April 24, 2025
Instagram Post By queenpriyaprasad, Dated: April 26, 2024
(Inputs from Runjay Kumar, Newschecker Hindi)
Ishwarachandra B G
June 26, 2025
Runjay Kumar
June 19, 2025
Ishwarachandra B G
May 26, 2025