Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಡಿಎಂಕೆ ಆಡಳಿತಕ್ಕೆ ಬುದ್ಧಿ ಕಲಿಸಿದ ಆನೆ, ಪುಟಿನ್ ಭಾರತಕ್ಕೆ ಆಗಮನ ವೇಳೆ ವಾಯುಪಡೆ ಯುದ್ಧ ವಿಮಾನಗಳ ಬೆಂಗಾವಲು, ಇಂಡಿಗೋ ಬಿಕ್ಕಟ್ಟಿನ ವೇಳೆ ನೆಲದಲ್ಲೇ ಕುಳಿತ ಪ್ರಯಾಣಿಕರು, ವಿಮಾನದಲ್ಲಿ ಭಗವದ್ಗೀತೆ ಓದಿದ ಪುಟಿನ್, ಇಂಡಿಗೋ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡ್ಯಾನ್ಸ್ ಮಾಡಿದ ಪ್ರಯಾಣಿಕರು, ಪಾಕಿಸ್ತಾನ ಸಂಸತ್ತಿಗೆ ಪ್ರವೇಶಿಸಿದ ಕತ್ತೆ, ಹೂಡಿಕೆಗೆ ಕ್ವಾಂಟಮ್ ಎಐ ಬೆಂಬಲಿಸುವಂತೆ ಕರೆ ನೀಡಿದ ಸುಧಾಮೂರ್ತಿ ಎಂಬ ಹೇಳಿಕೆಗಳು ಈ ವಾರ ವೈರಲ್ ಆಗಿದ್ದವು. ಈ ವಾರದ ಕ್ಲೇಮ್ ಗಳಲ್ಲಿ ಎಐ ವೀಡಿಯೋಗಳು ಹೆಚ್ಚಿದ್ದು, ಅವುಗಳು ಸುಳ್ಳು ಎಂಬುದನ್ನು ಸಾಕ್ಷ್ಯ ಸಮೇತ ನ್ಯೂಸ್ಚೆಕರ್ ನಿರೂಪಿಸಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಡಿಎಂಕೆ ಆಡಳಿತಕ್ಕೆ ಬುದ್ಧಿ ಕಲಿಸಿದ ಆನೆ ಎಂಬರ್ಥದಲ್ಲಿ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಈ ಹೇಳಿಕೆ ತಪ್ಪಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಂಡಿ ಉತ್ಸವದಲ್ಲಿ ಮಕ್ಕಳೊಂದಿಗೆ ಆನೆ ಆಟವಾಡುತ್ತಿದ್ದು ಮಧ್ಯೆ ಬಂದು ಮಕ್ಕಳನ್ನು ತಡೆದ ಪೊಲೀಸ್ ಒಬ್ಬರನ್ನು ಆನೆ ತಳ್ಳಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಆಗಮಿಸುತ್ತಿದ್ದ ವೇಳೆ ಭಾರತೀಯ ವಾಯು ಸರಹದ್ದು ಪ್ರವೇಶಿಸಿದ ಬಳಿಕ ವಾಯುಪಡೆ ಯುದ್ಧ ವಿಮಾನಗಳು ಬೆಂಗಾವಲಾಗಿದ್ದವು ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, 2017ರಲ್ಲಿ ಪುಟಿನ್ ಅವರು ಸಿರಿಯಾಕ್ಕೆ ಭೇಟಿ ನೀಡುವ ವೇಳೆ ಯುದ್ಧ ವಿಮಾನಗಳು ಬೆಂಗಾವಲು ನೀಡಿದ್ದನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಇಂಡಿಗೋ ಏರ್ ಲೈನ್ಸ್ ಬಿಕ್ಕಟ್ಟಿನ ಮಧ್ಯೆ, ವಿಮಾನ ನಿಲ್ದಾಣದ ಡಾಂಬರಿನ ಮೇಲೆ ಪ್ರಯಾಣಿಕರು ಕುಳಿತಿರುವುದನ್ನು ತೋರಿಸುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ 2018ರಲ್ಲಿ ದೆಹಲಿಯಲ್ಲಿ ವಿಮಾನ ವಿಳಂಬದ ವೇಳೆ ತೆಗೆದ ಫೋಟೋ ಇದು ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಸುದ್ದಿಯ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಮಾನದೊಳಗೆ ಓದುತ್ತಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪರಿಶೀಲನೆ ನಡೆಸಿದಾಗ, ಇದು ಎಐ ಸೃಷ್ಟಿ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಪಾಕಿಸ್ತಾನದ ಸಂಸತ್ತಿಗೆ ಕತ್ತೆ ಪ್ರವೇಶಿಸಿ ಓಡಾಡುತ್ತಿರುವ ದೃಶ್ಯ ಎಂದು ಹೇಳಲಾದ ವೀಡಿಯೋ ಒಂದು ಕನ್ನಡದ ಮಾಧ್ಯಮ ಜಾಲತಾಣಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನ ಪ್ರತಿನಿಧಿಗಳು ಕುಳಿತಿದ್ದಾಗಲೇ ಮಧ್ಯೆ ಕತ್ತೆ ಓಡಿಬರುತ್ತಿರುವುದು ಕಾಣಿಸುತ್ತಿದೆ. ಆದರೆ ಇದು ಎಐ ವೀಡಿಯೋ ಎಂದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ವರದಿ ಇಲ್ಲಿ ಓದಿ

ಇಂಡಿಗೋ ಬಿಕ್ಕಟ್ಟಿನ ನಡುವೆ, ವಿಮಾನ ವಿಳಂಬ ಹಿನ್ನೆಲೆಯಲ್ಲಿ ಪ್ರಯಾಣಿಕರು ಗೋವಾ ವಿಮಾನ ನಿಲ್ದಾಣದಲ್ಲಿ ಡ್ಯಾನ್ಸ್ ಮಾಡಿದರು ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ ಪಾಕಿಸ್ತಾನದ ಸಂಸತ್ತಿಗೆ ಕತ್ತೆ ಪ್ರವೇಶ ಎಂದ ವೀಡಿಯೋ ಎಐನಿಂದ ಮಾಡಿದ್ದಾಗಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಆದಾಯದ ಭರವಸೆ ನೀಡುವ “ಸರ್ಕಾರ-ಅನುಮೋದಿತ” ಎಐ ಆಧಾರಿತ ಹಣಕಾಸು ವೇದಿಕೆ ಕ್ವಾಂಟಮ್ ಎಐ (ಅಪ್ಲಿಕೇಶನ್) ಬೆಂಬಲಿಸಿ ಮಾತನಾಡಿದ್ದಾರೆ ಎಂದು ವೀಡಿಯೋ ಒಂದು ವೈರಲ್ ಆಗಿದೆ. ಆದರೆ ಇದು ಎಐ ವೀಡಿಯೋ ಎಂದು ಸತ್ಯಶೋಧನೆಯಲ್ಲಿ ಬಯಲಾಗಿದೆ. ಈ ವರದಿ ಇಲ್ಲಿ ಓದಿ
Vasudha Beri
December 12, 2025
Vasudha Beri
December 10, 2025
Runjay Kumar
December 9, 2025