Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನೇಪಾಳ ಪ್ರವಾಸದ ವೇಳೆ ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡಲಾಗಿದೆ ಎಂಬಂತೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ನಮ್ಮ ಬಂಧುಗಳು ತಮ್ಮ ನೇಪಾಳ ಪ್ರವಾಸದಲ್ಲಿ ಕಂಡ ಅಚ್ಚರಿ. ನೀವೂ “ಕೇಳರಿಯದ” ಅಚ್ಚರಿ” ಎಂದಿದೆ.
ಇದೇ ರೀತಿಯ ಪೋಸ್ಟ್ ಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Also Read: ಕಂಗನಾ ರಾಣಾವತ್ ಕೆನ್ನೆಯಲ್ಲಿ ಏಟಿನ ಗುರುತು ಇದೆ ಎಂದು ವೈರಲ್ ಆಗಿರುವ ಫೋಟೋದ ಸತ್ಯಾಂಶ ಏನು?
ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ (+91-9999499044) ಮೂಲಕವೂ ನಮಗೆ ಮನವಿ ಬಂದಿದ್ದು, ಅದನ್ನು ಸಂಶೋಧನೆಗಾಗಿ ಸ್ವೀಕರಿಸಲಾಗಿದೆ.
ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ನಿಜವಾದ್ದಲ್ಲ, ವಿಮಾನದ ವೀಡಿಯೋಕ್ಕೆ ಸಂಸ್ಕೃತದಲ್ಲಿ ವಾಯ್ಸ್ ಓವರ್ ಕೊಡಲಾಗಿದೆ ಎಂದು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ವೀಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಇದು ಹೊರತಾಗಿ ವೈರಲ್ ಆಗಿರುವ ವೀಡಿಯೋಕ್ಕೆ ಸಂಬಂಧಿಸಿದಂತೆ ಯಾವುದೇ ಫಲಿತಾಂಶಗಳು ನಮಗೆ ಕಂಡುಬಂದಿಲ್ಲ.
ಆ ಬಳಿಕ ವೈರಲ್ ವೀಡಿಯೋದಲ್ಲಿರುವ ವಾಟರ್ ಮಾರ್ಕ್ ಒಂದನ್ನು ನಾವು ಗುರುತಿಸಿದ್ದೇವೆ. ಅದರಲ್ಲಿ sanskritsparrow ಎಂದು ಇನ್‌ಸ್ಟಾ ಗ್ರಾಂ ಖಾತೆಯ ವಾಟರ್ ಮಾರ್ಕ್ ಅನ್ನು ಗುರುತಿಸಲಾಗಿದೆ. ಬಳಿಕ ಇನ್‌ಸ್ಟಾಗ್ರಾಂನಲ್ಲಿ ಆ ಖಾತೆಯನ್ನು ಶೋಧಿಸಿದ್ದು ವೈರಲ್ ವೀಡಿಯೋ ಹೋಲುವ ವೀಡಿಯೋ ಲಭ್ಯವಾಗಿದೆ.
ಈ ವೀಡಿಯೋದ ಕಮೆಂಟ್ ನಲ್ಲಿ ಈ ದೃಶ್ಯಾವಳಿಗೆ ಧ್ವನಿಯನ್ನು ಡಬ್ಬಿಂಗ್ ಮಾಡಲಾಗಿದ್ದು, ಯಾವುದೇ ವಿಮಾನದಲ್ಲಿ ಸೂಚನೆ ಕೊಡಲು ಬಳಸಲಾಗಿಲ್ಲ ಎಂದಿದೆ. ಅಲ್ಲದೇ ಇದು ಆಕಾಸಾ ಏರ್ ಆಡಳಿತಕ್ಕೆ ಸಂಬಂಧಪಟ್ಟಿಲ್ಲ” ಎಂದು ಹೇಳಲಾಗಿದೆ.
ಅದರ ನಂತರದ ಕಮೆಂಟ್ ನಲ್ಲಿ “ನಾವು ಸಂಸ್ಕೃತವನ್ನು ಕೇವಲ ಧಾರ್ಮಿಕ ಭಾಷೆ ಎಂದು ಭಾವಿಸುತ್ತೇವೆ ಆದರೆ ಇದು ನಿಜವಾಗಿಯೂ ಎಲ್ಲಾ ಸಂದರ್ಭಗಳಲ್ಲಿ ಸೂಕ್ತವಾಗಿದೆ. ಇದು ವೃತ್ತಿಪರವಾಗಿಯೂ ಇದೆ ಎಂಬಂತೆ ಭಾಸವಾಗುತ್ತದೆ.” ಎಂದಿದೆ.
ಇನ್ ಸ್ಟಾಗ್ರಾಂನಲ್ಲಿರುವ ವೀಡಿಯೋ ಮತ್ತು ವೈರಲ್ ವೀಡಿಯೋವನ್ನು ತುಲನೆ ಮಾಡಿದ ವೇಳೆ ದೃಶ್ಯ ಮತ್ತು ಧ್ವನಿಗಳು ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿರುವುದನ್ನು ಗುರುತಿಸಿದ್ದೇವೆ.
Also Read: ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆಯೇ?
ಈ ತನಿಖೆಯ ಪ್ರಕಾರ, ನೇಪಾಳ ಪ್ರವಾಸದ ವೇಳೆ ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡಲಾಗಿದೆ ಎನ್ನುವುದು ತಪ್ಪಾಗಿದೆ.
Our Sources
Instagram Post By sanskritsparrow, Dated: June 8, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.