Authors
Claim
ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಒಂದು ಸ್ಫೋಟಗೊಂಡಿದೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಕೊಂಡಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಹಿತಿಗಳು ಲಭ್ಯವಾಗಿವೆ. ಜುಲೈ 4, 2024ರ ಉಪುಕ್‌ನ್ಯೂಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬ್ರೆಜಿಲ್‌ನ ಪ್ಯಾರಾ ಭಾಗದಲ್ಲಿ ಟ್ಯಾಂಕರ್ ಸ್ಫೋಟಗೊಂಡ ಲೈವ್ ದೃಶ್ಯಾವಳಿ ಎಂದಿದೆ.
ಆ ಬಳಿಕ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಬಗ್ಗೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಜುಲೈ 4, 2024ರ ಎಲ್ ಡೈರಿಯೋಮ್ಯಾಕ್ಸ್ ವರದಿ ಪ್ರಕಾರ ಬ್ರೆಜಿಲ್‌ನ ಪ್ಯಾರಾ ರಾಜ್ಯದಲ್ಲಿ ಪ್ಯಾರಾಗೊಮಿನಾಸ್ ಮತ್ತು ಉಲಿಯಾನೊಪೊಲಿಸ್ ನಡುವಿನ ಹೆದ್ದಾರಿಯಲ್ಲಿ ಅನಿಲ ಸಾಗಿಸುವ ಟ್ಯಾಂಕರ್ ಸ್ಫೋಟಗೊಂಡಿದ್ದು , ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕ್ಯಾಮರಾಮನ್, ವರದಿಗಾರ ಮತ್ತು ತಂತ್ರಜ್ಞರು ಘಟನೆಯನ್ನು ವರದಿ ಮಾಡಲು ಬಂದಿದ್ದರು. ಸ್ಫೋಟಕ್ಕೆ ಕೆಲವೇ ಕ್ಷಣಗಳ ಮೊದಲು , ವಾಹನವು ಅಪಘಾತಕ್ಕೀಡಾಗಿತ್ತು (ಗೂಗಲ್ ಮೂಲಕ ಅನುವಾದಿಸಲಾಗಿದೆ)
ಜುಲೈ 4, 2024ರ ರಿಯಲಿಡೇಡ್ಸ್ ವರದಿ ಪ್ರಕಾರ, ಹೆದ್ದಾರಿಯಲ್ಲಿ ಟ್ಯಾಂಕರ್ ಟ್ರಕ್ ಸ್ಫೋಟವು ಮೂವರು ಮಾಧ್ಯಮ ಮಂದಿ, ಮತ್ತು ಮೂರು ಮಿಲಿಟರಿ ಅಗ್ನಿಶಾಮಕ ಸಿಬ್ಬಂದಿಗೆ ಸುಟ್ಟಗಾಯಗಳಾಗಿವೆ. ಉತ್ತರ ಬ್ರೆಜಿಲ್‌ನ ಪ್ಯಾರಾದಲ್ಲಿ ಹೆದ್ದಾರಿಯಲ್ಲಿ ಅನಿಲ ಸಾಗಿಸುವ ಟ್ಯಾಂಕರ್ ಅಪಘಾತಕ್ಕೀಡಾದ ಸಂದರ್ಭ, ಘಟನೆ ವರದಿ ಮಾಡಲುಬಂದ ಕ್ಯಾಮರಾಮನ್, ವರದಿಗಾರ ಮತ್ತು ತಂತ್ರಜ್ಞ ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದಿದೆ. (ಗೂಗಲ್ ಮೂಲಕ ಅನುವಾದಿಸಲಾಗಿದೆ)
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಸಾಕ್ಷ್ಯಗಳ ಪ್ರಕಾರ, ಗೋವಾ-ಮಂಗಳೂರು ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಒಂದು ಸ್ಫೋಟಗೊಂಡಿದೆ ಎಂಬ ಹೇಳಿಕೆ ತಪ್ಪಾಗಿದೆ.
Also Read: ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿದೆ ಎಂಬ ಸುಳ್ಳು ಹೇಳಿಕೆ ವೈರಲ್
Result: False
Our Sources
Report By Realidades, Dated: July 4, 2024
Report By Eldiariomx, Dated: July 4, 2024
Tweet By upuknews, Dated: July 4, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.