Authors
Claim
ಮಣಿಪುರದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ
Fact
ವೈರಲ್ ವೀಡಿಯೋ 2020ರದ್ದಾಗಿದ್ದು, ಆಗ ಬ್ರೆಜಿಲ್ನಲ್ಲಿ 23 ವರ್ಷದ ಮಹಿಳೆಯನ್ನು ಕ್ರಿಮಿನಲ್ ಗಳ ಗುಂಪು ಅಪಹರಿಸಿ ಕೊಲೆ ಮಾಡಿತ್ತು
ಮಣಿಪುರದಲ್ಲಿ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗಳ ಮಧ್ಯೆ ಯುವತಿಯೊಬ್ಬಳನ್ನು ಕಡಿದು ಕೊಲ್ಲುವ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾವು ಈ ವೀಡಿಯೋವನ್ನು ನಾವು ನಮ್ಮ ವಾಟ್ಸಾಪ್ ಟಿಪ್ಲೈನ್ (+91999949904) ನಲ್ಲಿ ಸ್ವೀಕರಿಸಿದ್ದೇವೆ, ಇದನ್ನು ಸತ್ಯಶೋಧನೆ ಮಾಡುವಂತೆ ವಿನಂತಿಸಲಾಗಿತ್ತು.
Also Read: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ
Fact Check/Verification
ನ್ಯೂಸ್ಚೆಕರ್ ವೀಡಿಯೋದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ವೇಳೆ ಸೆಪ್ಟೆಂಬರ್ 17, 2020 ರ ಈ ಟ್ವೀಟ್ ಪತ್ತೆಯಾಗಿದೆ. ಬೋಸ್ನಿಯನ್ ಭಾಷೆಯಲ್ಲಿ ಬರೆಯಲಾದ ಶೀರ್ಷಿಕೆಯಲ್ಲಿ, “ದುರದೃಷ್ಟವಶಾತ್, ಈ ಪ್ರಕರಣದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆದ್ದರಿಂದ ನಾನು ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಬ್ರೆಜಿಲ್ ಮೂಲದ ಥಾಲಿಯಾ ಟೊರೆಸ್ ಡಿ ಸೋಜಾ ಎಂಬ 23 ವರ್ಷದ ಯುವತಿಯನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.” ಎಂದು ಇದರಲ್ಲಿದೆ.
ಅನಂತರ ನಾವು ಡಾಕ್ಯುಮೆಂಟಿಂಗ್ ರಿಯಾಲಿಟಿ ಎಂಬ ವೆಬ್ಸೈಟ್ನಲ್ಲಿ ವೀಡಿಯೋವನ್ನು ನೋಡಿದ್ದು, ಇದರಲ್ಲಿ ವೀಡಿಯೋ ಬ್ರೆಜಿಲ್‌ನದ್ದಾಗಿದ್ದು, ಅದನ್ನು ಸೆಪ್ಟೆಂಬರ್ 8, 2020 ರಂದು ಅಪ್ಲೋಡ್ ಮಾಡಲಾಗಿದೆ ಎಂದು ಗೊತ್ತಾಗಿದೆ.
ನಾವು ಹೆಚ್ಚಿನ ಮಾಹಿತಿಗೆ ಕೀವರ್ಡ್ ಸರ್ಚ್ ನಡೆಸಿದ್ದು, ಪೋರ್ಚುಗೀಸ್ ಸುದ್ದಿ ಸಂಸ್ಥೆ ಸಿಎನ್ 1 ನ ರ ಸೆಪ್ಟೆಂಬರ್ 2020, 7 ರ ವರದಿ ಲಭ್ಯವಾಗಿದೆ. ಇದರಲ್ಲಿ ಬ್ರೆಜಿಲ್ ರಾಜ್ಯ ಸಿಯಾರಾದಲ್ಲಿರುವ ಫೋರ್ಟಲೆಜಾದಲ್ಲಿ ಥಾಲಿಯಾ ಟೊರೆಸ್ ಡಿ ಸೋಜಾ ಅವರನ್ನು ಕ್ರಿಮಿನಲ್ ಗುಂಪಿನ ಸದಸ್ಯರು ಅಪಹರಿಸಿ ಕೊಂದಿದ್ದಾರೆ ಎಂದು ವರದಿ ಹೇಳಿದೆ. ಆಗಸ್ಟ್ ನಲ್ಲಿ ಸಿಯಾರಾದಲ್ಲಿ 17 ಮಹಿಳೆಯರು ಕೊಲ್ಲಲ್ಪಟ್ಟಿದ್ದು ಮತ್ತು ಆ ವರ್ಷ 226 ಮಹಿಳೆಯರನ್ನು ಕೊಲ್ಲಲಾಗಿದೆ ಎಂದು ಲೇಖನ ಹೇಳಿದೆ. ಸೆಪ್ಟೆಂಬರ್ 2, 2020 ರಂದು ಮತ್ತೊಂದು ಮಾಧ್ಯಮ ಸಂಸ್ಥೆಯ ಇದೇ ರೀತಿಯ ವರದಿ ಸಂತ್ರಸ್ತೆಯ ಫೋಟೋವನ್ನು ತೋರಿಸಿದೆ.
Also Read: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿದ್ದ ಫೋಟೋ ನಿಜವೇ?
Conclusion
ಬ್ರೆಜಿಲ್ ಮೂಲದ ಮಹಿಳೆಯನ್ನು ಕ್ರಿಮಿನಲ್ ಗುಂಪು ಕ್ರೂರವಾಗಿ ಕೊಂದಿರುವ ಹಳೆಯ ವೀಡಿಯೋವನ್ನು ಮಣಿಪುರದಲ್ಲಿ ನಡೆದಿದ್ದು ಎಂದು ಸುಳ್ಳು ಕ್ಲೇಮಿನೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
Also Read: ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್ ವೀಡಿಯೋ ಸತ್ಯವೇ?
Result: False
Our Sources
Tweet by Fallen Angel Dated: September 17,2020
Video in Documenting Reality Dated: September 8,2020
News report in Cn7 Dated: September 1,2020
News report in Sobralagora Dated: September 2,2020
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.