Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಷ್ಯಾ-ಜಪಾನ್ ಸುನಾಮಿ ವೀಡಿಯೋ
ರಷ್ಯಾ-ಜಪಾನ್ ಸುನಾಮಿ ವೀಡಿಯೋ ಎಂದು ಹಂಚಿಕೊಳ್ಳಲಾಗಿರುವ ವೀಡಿಯೋ ಇತ್ತೀಚಿನದ್ದಲ್ಲ, ಇದು 2017ರ ಗ್ರೀನ್ ಲ್ಯಾಂಡ್ ಸುನಾಮಿಯದ್ದು
ರಷ್ಯಾದ ಪೂರ್ವ ಪ್ರದೇಶವಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ತೀವ್ರವಾಗಿ ಭೂಮಿ ಕಂಪಿಸಿದ ಬೆನ್ನಲ್ಲೇ ರಷ್ಯಾ-ಜಪಾನ್ ಸುನಾಮಿ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
0.33 ಸೆಕೆಂಡ್ ಗಳ ವೀಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಬಳಕೆದಾರರು ಪೋಸ್ಟ್ ಮಾಡಿದ್ದು, ಸಮುದ್ರದಲ್ಲಿ ದೊಡ್ಡ ಅಲೆ ಬರುವುದು ಮತ್ತು ದೋಣಿಗಳು ನೀರುಪಾಲಾಗುವುದು ಹಾಗೂ ಇಬ್ಬರು ವ್ಯಕ್ತಿಗಳು ಇದರಿಂದ ತಪ್ಪಿಸಿಕೊಳ್ಳುವುದು ಕಾಣಿಸುತ್ತದೆ.

ಈ ವೀಡಿಯೋದ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ರಷ್ಯಾ-ಜಪಾನ್ ಸುನಾಮಿ ಕುರಿತಾದ ವೀಡಿಯೋದ್ದಲ್ಲ, ಇದು ನಾಲ್ಕು ವರ್ಷಗಳ ಹಿಂದೆ ಗ್ರೀನ್ ಲ್ಯಾಂಡ್ ಗೆ ಅಪ್ಪಳಿಸಿದ ಸುನಾಮಿಯದ್ದು ಎಂದು ಗೊತ್ತಾಗಿದೆ.
Also Read: ಜಪಾನ್ ಭೂಕಂಪದ ದೃಶ್ಯ ಎಂದು ಮ್ಯಾನ್ಮಾರ್ ಅಂಗಡಿಯ ಹಳೆಯ ವೀಡಿಯೋ ತಪ್ಪಾಗಿ ಹಂಚಿಕೆ
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ರೆಡಿಟ್ ತಾಣದಲ್ಲಿ r/natureismetal ಎಂಬ ಬಳಕೆದಾರರು ನಾಲ್ಕು ವರ್ಷಗಳ ಹಿಂದೆ ಮಾಡಿರುವ ಪೋಸ್ಟ್ ಕಂಡುಬಂದಿದೆ. ಈ ಫೋಟೋಕ್ಕೆ ನೀಡಿದ ವಿವರಣೆಯಲ್ಲಿ “ಮೆಗಾ-ಸುನಾಮಿಯ ಅವಶೇಷಗಳಿಂದ ತಪ್ಪಿಸಿಕೊಳ್ಳುತ್ತಿರುವ ಗ್ರೀನ್ಲ್ಯಾಂಡ್ ಮೀನುಗಾರರು” ಎಂದಿದೆ.
ಇದರನ್ವಯ ನಾವು ಇನ್ನಷ್ಟು ಹುಡುಕಾಟ ನಡೆಸಿದ್ದೇವೆ. ಈ ವೇಳೆ Licet Studios ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಏಪ್ರಿಲ್ 9, 2021ರಂದು ಪ್ರಕಟಿಸಿದ ವೀಡಿಯೋ ಗಮನಿಸಿದ್ದೇವೆ. ‘ಗ್ರೀನ್ ಲ್ಯಾಂಡ್ ಸುನಾಮಿ; ಜೀವ ಉಳಿಸಲು ಓಡುತ್ತಿರುವ ಮೀನುಗಾರರು’ ಶೀರ್ಷಿಕೆಯಡಿ ಈ ವೀಡಿಯೋ ಇದೆ. ಇದರ ವಿವರಣೆಯಲ್ಲಿ ಜೂನ್ 17, 2017ರಲ್ಲಿ ಗ್ರೀನ್ ಲ್ಯಾಂಡ್ ನಲ್ಲಿ ಸಂಭವಿಸಿದ ಕಂಪನದಿಂದಾಗಿ ಸುನಾಮಿ ಎದ್ದಿದ್ದು, ಈ ವೀಡಿಯೋ ಆಗಿನ ಘಟನೆಗೆ ಸಂಬಂಧಿಸಿದ್ದು ಎಂದು ವಿವರಣೆಯಿದೆ.

Newsflare ಹೆಸರಿನ ಇನ್ನೊಂದು ಯೂಟ್ಯೂಬ್ ಚಾನೆಲ್ ನಲ್ಲೂ ಮೇ 10, 2021ರಂದು ‘ಗ್ರೀನ್ ಲ್ಯಾಂಡ್ ಗೆ ಸುನಾಮಿ ಬಡಿದಾಗ, ಮೀನುಗಾರರು ಅದೃಷ್ಟವಶಾತ್ ಪಾರು’ ಎಂಬ ಶೀರ್ಷಿಕೆಯಡಿ ವೀಡಿಯೋ ಪ್ರಕಟಿಸಲಾಗಿದೆ. ಇಲ್ಲೂ ಜೂನ್ 17, 2017ರಂದು ಗ್ರೀನ್ ಲ್ಯಾಂಡ್ ನಲ್ಲಿ ಸುನಾಮಿ ಉಂಟಾದ ಸಂದರ್ಭದ್ದು ಎಂದು ವಿವರಣೆಯಲ್ಲಿದೆ.

Issuk-_- ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಸೆಪ್ಟೆಂಬರ್ 8, 2017 ರಂದು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಗಮನಿಸಿದ್ದೇವೆ. ಇದರೊಂದಿಗೆ, ಜೂನ್ 18, 2017ರಂದು ಬಿಬಿಸಿ ಪ್ರಕಟಿಸಿದ ವರದಿಯಲ್ಲೂ ಗ್ರೀನ್ ಲ್ಯಾಂಡ್ ಗೆ ಸುನಾಮಿ ಅಪ್ಪಳಿಸಿದ್ದು, ನಾಲ್ವರು ಮೀನುಗಾರರು ನಾಪತ್ತೆಯಾಗಿರುವುದಾಗಿ ಹೇಳಿದೆ.

ಈ ಸಾಕ್ಷ್ಯಗಳ ಅನ್ವಯ ವೈರಲ್ ವೀಡಿಯೋ ಗ್ರೀನ್ ಲ್ಯಾಂಡ್ ಸುನಾಮಿಯ ಸಂದರ್ಭದ್ದಾಗಿದ್ದು ಇತ್ತೀಚಿನ ರಷ್ಯಾ-ಜಪಾನ್ ಭೂಕಂಪ, ಸುನಾಮಿಗೆ ಸಂಬಂಧಿಸಿದ್ದಲ್ಲ ಎಂದು ಕಂಡುಬಂದಿದೆ.
Our Sources
YouTube Video By Licet Studios, Dated April 9, 2021
YouTube Video By Newsflare, Dated: May 10, 2021
Report By BBC News, Dated: June 18, 2017