Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಹಂಚಿಕೊಂಡ ವೀಡಿಯೋ ಬಾಂಗ್ಲಾದೇಶದ್ದಾಗಿದ್ದು, ಹಿಂದೂ ವ್ಯಕ್ತಿಯೊಬ್ಬರ ಸಾಮಾಜಿಕ ಮಾಧ್ಯಮ ಕಮೆಂಟ್ ಗೆ ಸಂಬಂಧಿಸಿದ ದಾಳಿಯಾಗಿದೆ
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಪಶ್ಚಿಮ ಬಂಗಾಳದಲ್ಲಿ ಹಿಂದೂ ಮನೆ ಮಠಗಳು ಮೇಲೆ ಹೆಣ್ಣುಮಕ್ಕಳ.ಮೇಲೆ ದಾಳಿ ಮಾಡುತ್ತಿರುವ ಶಾಂತಿ ದೂತರು ಇವರ ಜನ ಸಂಖ್ಯೆ ಎಲ್ಲಿ ಜಾಸ್ತಿ ಆಗುತ್ತೋ ಅಲ್ಲಿ ಹಿಂದೂಗಳ ಪರಿಸ್ಥಿತಿ ಹೀಗೆ” ಎಂದಿದೆ.

ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಈ ವಿದ್ಯಮಾನ ಬಾಂಗ್ಲಾದೇಶದಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಾಡಿದೆ ಕಾಮೆಂಟ್ ಗೆ ಸಂಬಂಧಿಸಿ ವ್ಯಕ್ತಿಯೊಬ್ಬನ ಮನೆಯನ್ನು ಪುಡಿಗಟ್ಟಲಾಗಿದೆ ಎಂದು ತಿಳಿದುಬಂದಿದೆ.
Also Read: ಸಹರಾನ್ ಪುರದಲ್ಲಿ ಕನ್ವರ್ ಯಾತ್ರೆ ಅಪಘಾತದ ಹಳೆ ವೀಡಿಯೋ ಇತ್ತೀಚಿನದ್ದೆಂದು ವೈರಲ್
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಇದು ಹ್ಯೂಮನ್ ರೈಟ್ಸ್ ಸೆಂಟರ್ ಫಾರ್ ಬಾಂಗ್ಲಾದೇಶ್ ಎಂಬ ವೆಬ್ ಸೈಟ್ ನತ್ತ ನಮ್ಮನ್ನು ಕರೆದೊಯ್ದಿದೆ. ಮಾರ್ಚ್ 30, 2025ರಂದು ಪ್ರಕಟಿಸಲಾದ ಒಂದು ವರದಿಯಲ್ಲಿ, ‘ಫೇಸ್ಬುಕ್ ಹ್ಯಾಕ್, ಹಿಂದೂ ಸಹಾ ಮನೆ ಧ್ವಂಸ, ಲಕ್ಷ್ಮಿ ದೇವಿ ಅಪವಿತ್ರ’ ಎಂಬ ಶೀರ್ಷಿಕೆಯೊಂದಿಗೆ, “ಬಲಿಪಶು ಶಂಕರ್ ಸಹಾ ಅವರು ತಂಗೈಲ್ ಜಿಲ್ಲೆಯ ಸಖಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲಿಖಿತ ಮತ್ತು ಸಹಿ ಮಾಡಿದ ದೂರನ್ನು ಸಲ್ಲಿಸಿದರು. ಧರ್ಮದಿಂದ ಹಿಂದೂ ಆಗಿರುವ ಶ್ರೀ ಸಹಾ, ಕೆಲವು ಅಪರಿಚಿತ ವ್ಯಕ್ತಿಗಳು ಸಂಜೆ 7:30 ರ ಸುಮಾರಿಗೆ ತಮ್ಮ ಫೇಸ್ಬುಕ್ ಪ್ರೊಫೈಲ್ ಅನ್ನು ಹ್ಯಾಕ್ ಮಾಡಿ ತಮ್ಮ ಪ್ರೊಫೈಲ್ ಬಳಸಿ ಕೆಲವು ಆಕ್ಷೇಪಾರ್ಹ ಪೋಸ್ಟ್ಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಹಾ ಹ್ಯಾಕರ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಯನ್ನು ವಿನಂತಿಸಿದರು.” ಎಂದಿದೆ.
ಇದೇ ರೀತಿ ಸೇವ್ ಬಾಂಗ್ಲಾದೇಶ್ ಹಿಂದೂಸ್ ಎಂಬ ಎಕ್ಸ್ ಪೋಸ್ಟ್ ಬಳಕೆದಾರರು ಮಾರ್ಚ್ 30, 2025ರಂದು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ “ಮೂಲಭೂತವಾದಿ ಮುಸ್ಲಿಮರು ದೇವದೂಷಣೆಯ ವದಂತಿಗಳನ್ನು ಹರಡುತ್ತಿದ್ದಾರೆ, ತಂಗೈಲ್ನ ಸಖಿಪುರ ಉಪಜಿಲ್ಲಾದಲ್ಲಿರುವ ಶಂಕರ್ ಸಹಾ ಅವರ ಮನೆಯ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂ ದೇವತೆ ಲಕ್ಷ್ಮೀ ಪ್ರತಿಮೆಗೆ ಬೆಂಕಿ ಹಚ್ಚಿ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದಾರೆ” ಎಂದಿದೆ. (ಅನುವಾದಿಸಲಾಗಿದೆ)

ಈ ಬಗ್ಗೆ ನಾವು ಮಾಧ್ಯಮ ವರದಿಗಳ ಬಗ್ಗೆ ಶೋಧ ನಡೆಸಿದ್ದೇವೆ. ಈ ವೇಳೆ ವಿವಿಧ ಫಲಿತಾಂಶಗಳು ಲಭ್ಯವಾಗಿವೆ.
ಮಾರ್ಚ್ 30, 2025ರ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, “ಮುಸ್ಲಿಮರ ವಿರುದ್ಧ ಫೇಸ್ಬುಕ್ನಲ್ಲಿ ಕಾಮೆಂಟ್ ಮಾಡಿದ ಆರೋಪದ ಮೇಲೆ ನಿನ್ನೆ ರಾತ್ರಿ ತಂಗೈಲ್ನ ಸಖಿಪುರ ಉಪಜಿಲ್ಲಾದಲ್ಲಿ ಹಿಂದೂ ವ್ಯಕ್ತಿಯೊಬ್ಬರ ಮನೆಯನ್ನು ಧ್ವಂಸಗೊಳಿಸಲಾಗಿದೆ.ಸ್ಥಳೀಯರು ಮತ್ತು ಪೊಲೀಸರ ಪ್ರಕಾರ, ಬರಚೌನಾ ಪ್ರದೇಶದ ಅಂಗಡಿಯವ ಶಂಕರ್ ಸಹಾ (44) ಅವರ ಹೇಳಿಕೆಯಿಂದ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ರಾತ್ರಿ 9:30 ರ ಸುಮಾರಿಗೆ ಉದ್ರಿಕ್ತ ಜನರ ಗುಂಪೊಂದು ಶಂಕರ್ ಅವರ ಮನೆಯನ್ನು ಧ್ವಂಸಗೊಳಿಸಿತು ಎಂದು ಅವರು ಹೇಳಿದರು. ಈ ಸಂಬಂಧ ನಿನ್ನೆ ರಾತ್ರಿ ಸಖಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಶಂಕರ್ ದಿ ಡೈಲಿ ಸ್ಟಾರ್ಗೆ ತಿಳಿಸಿದ್ದಾರೆ. ಅನಾಮಿಕ ವ್ಯಕ್ತಿಗಳು ತಮ್ಮ ಫೇಸ್ಬುಕ್ ಐಡಿಯನ್ನು ಹ್ಯಾಕ್ ಮಾಡಿ ವಿವಿಧ ಪೋಸ್ಟ್ಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡುವ ಮೂಲಕ ತಮ್ಮ ಸಾಮಾಜಿಕ ಖ್ಯಾತಿಗೆ ಹಾನಿ ಮಾಡಿದ್ದಾರೆ ಎಂದು ಅವರು ತಮ್ಮ ಲಿಖಿತ ದೂರಿನಲ್ಲಿ ಹೇಳಿದ್ದಾರೆ.” ಎಂದಿದೆ.

ಮಾರ್ಚ್ 30, 2025ರ ಬಿಬಿಸಿ ನ್ಯೂಸ್ ಬಾಂಗ್ಲಾದ ವರದಿಯ ಪ್ರಕಾರ, “ಫೇಸ್ಬುಕ್ನಲ್ಲಿ ಮಾಡಿದ ಕಾಮೆಂಟ್ಗೆ ಸಂಬಂಧಿಸಿದಂತೆ ತಂಗೈಲ್ ಜಿಲ್ಲೆಯ ಸಖಿಪುರದಲ್ಲಿ ಹಿಂದೂ ಮನೆಯ ಮೇಲೆ ನಡೆದ ದಾಳಿ ಮತ್ತು ಧ್ವಂಸ ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶನಿವಾರ ರಾತ್ರಿ ನಡೆದ ಘಟನೆಯ ಕುರಿತು ದಾಳಿಗೊಳಗಾದ ವ್ಯಕ್ತಿಯ ಮನೆ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರೊಬ್ಬರು ಭಾನುವಾರ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ವ್ಯಕ್ತಿಯೊಬ್ಬರ ಫೇಸ್ಬುಕ್ ಐಡಿಯಿಂದ ಕಾಮೆಂಟ್ ಬಂದ ನಂತರ, ಆ ವ್ಯಕ್ತಿ ಶನಿವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ಜಿಡಿ ದಾಖಲಿಸಿ, ತನ್ನ ಫೇಸ್ಬುಕ್ ಐಡಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ” ಎಂದು ತಂಗೈಲ್ನ ಸಖಿಪುರ ಪೊಲೀಸ್ ಠಾಣಾಧಿಕಾರಿ (ಒಸಿ) ಮೊಹಮ್ಮದ್ ಜಾಕಿರ್ ಹೊಸೇನ್ ಬಿಬಿಸಿ ಬಾಂಗ್ಲಾಗೆ ತಿಳಿಸಿದರು.” ಎಂದಿದೆ. (ಅನುವಾದಿಸಲಾಗಿದೆ)

ಈ ಸತ್ಯಶೋಧನೆಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಹಂಚಿಕೊಂಡ ವೀಡಿಯೋ ಬಾಂಗ್ಲಾದೇಶದ್ದಾಗಿದ್ದು, ಹಿಂದೂ ವ್ಯಕ್ತಿಯೊಬ್ಬರ ಸಾಮಾಜಿಕ ಮಾಧ್ಯಮ ಕಮೆಂಟ್ ಗೆ ಸಂಬಂಧಿಸಿದ ದಾಳಿಯಾಗಿದೆ ಎಂದು ಗೊತ್ತಾಗಿದೆ.
Also Read: ರಷ್ಯಾ ವಿಮಾನ ಪತನ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೆ
Our Sources
X post By SBHPage, Dated: March 30, 2025
Report By HCRB, Dated: March 30, 2025
Report By The Daily Star, Dated: March 30, 2025
Report By BBC News Bangla, Dated: March 30, 2025
Ishwarachandra B G
November 22, 2025
Tanujit Das
November 17, 2025
Tanujit Das
November 13, 2025