Authors
Claim
ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆಯಾಗಿದೆ ಎಂದು ಹತ್ರಾಸ್ ವೀಡಿಯೋ ಹಂಚಿಕೆ!
Fact
ವೈರಲ್ ವೀಡಿಯೋ ಬಾಂಗ್ಲಾದೇಶದದ್ದಲ್ಲ, ಜುಲೈ ತಿಂಗಳಲ್ಲಿ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಿಂದ ಸುಮಾರು 122 ಜನರು ಸಾವನ್ನಪ್ಪಿದ ಘಟನೆಯದ್ದಾಗಿದೆ
ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಹತ್ಯೆಯಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಾಂಗ್ಲಾದೇಶ ನಲ್ಲಿ ಅಲ್ಲಿನ ಮುಸ್ಲಿಂ ರಿಂದ ಹಿಂದುಗಳ ಮರಣ ಹೋಮ. ಇಂದು ನೀವು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ನಿಮ್ಮ ದೇಶದಿಂದ ಓಡಿಸದಿದ್ದರೆ, ನಾಳೆ ನಿಮಗೂ, ನಿಮ್ಮ ಮಕ್ಕಳಿಗೂ ಮತ್ತು ನಿಮ್ಮ ದೇಶಕ್ಕೂ ಇದೇ ಗತಿ…” ಎಂದಿದೆ.
ಈ ವೀಡಿಯೋ ಕುರಿತು ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ (9999499044) ಮೂಲಕ ನಮಗೆ ಮನವಿ ಬಂದಿದ್ದು, ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.
ಆದರೆ, ನಮ್ಮ ತನಿಖೆಯಲ್ಲಿ ಈ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ. ಕಳೆದ ಜುಲೈ ತಿಂಗಳಿನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 122 ಜನರು ಸಾವನ್ನಪ್ಪಿದ್ದು ಅದರ ವೀಡಿಯೋ ಇದಾಗಿದೆ.
ವೈರಲ್ ವೀಡಿಯೋ ಸುಮಾರು 1 ನಿಮಿಷದ್ದಾಗಿದ್ದು, ಇದರಲ್ಲಿ ಹಲವಾರು ಮಹಿಳೆಯರ ಮೃತ ದೇಹಗಳು ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಅವರ ಕುಟುಂಬ ಸದಸ್ಯರು ಕೆಲವು ಮೃತ ದೇಹಗಳ ಪಕ್ಕದಲ್ಲಿ ಕುಳಿತಿರುವುದು ಕಂಡುಬರುತ್ತದೆ.
Fact Check/Verification
ವೈರಲ್ ವೀಡಿಯೊವನ್ನು ತನಿಖೆ ಮಾಡಲು, ನ್ಯೂಸ್‌ಚೆಕರ್ ಅದರ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಈ ವೇಳೆ ಜುಲೈ 3, 2024 ರಂದು ಯೂಟ್ಯೂಬ್ ಚಾನೆಲ್ ನಿಂದ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ . ವೈರಲ್ ವಿಡಿಯೋದ ದೃಶ್ಯಗಳು ಈ ವೀಡಿಯೋದಲ್ಲಿರುವುದನ್ನು ನಾವು ಗುರುತಿಸಿದ್ದೇವೆ.
ವೀಡಿಯೋ ಜೊತೆ ನೀಡಲಾಗಿರುವ ಶೀರ್ಷಿಕೆ ಮತ್ತು ವಿವರಣೆಯಲ್ಲಿ, ಇದು ಉತ್ತರ ಪ್ರದೇಶದ ಹತ್ರಾಸ್‌ನವರೆಂದು ಹೇಳಲಾಗಿದೆ, ಅಲ್ಲಿ ಭೋಲೆ ಬಾಬಾರ ಸತ್ಸಂಗದ ನಂತರ ಉಂಟಾದ ಕಾಲ್ತುಳಿತದಿಂದಾಗಿ ಸುಮಾರು 122 ಜನರು ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯಿಂದ 27 ಕಿಲೋಮೀಟರ್ ದೂರದಲ್ಲಿರುವ ಫುಲ್ರೈ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವಿವರಣೆಯಲ್ಲಿದೆ.
ನಂತರ, ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ನಾವು ಹುಡುಕಾಟ ನಡೆಸಿದಾಗ, 3 ಜುಲೈ 2024 ರಂದು ಪ್ರಕಟಿಸಲಾದ ದೈನಿಕ್ ಭಾಸ್ಕರ್ ವರದಿಯನ್ನು ಕಂಡುಕೊಂಡಿದ್ದೇವೆ . ವೈರಲ್ ವೀಡಿಯೋವನ್ನು ಹೋಲುವ ದೃಶ್ಯಗಳು ಈ ವರದಿಯಲ್ಲಿಯೂ ಇದ್ದವು.
ಜುಲೈ 2, 2024 ರಂದು ಹತ್ರಾಸ್‌ನ ಫುಲ್ರೈ ಗ್ರಾಮದಲ್ಲಿ ಸೂರಜ್ ಪಾಲ್ ಅಲಿಯಾಸ್ ಭೋಲೆ ಬಾಬಾರ ಸತ್ಸಂಗವನ್ನು ಆಯೋಜಿಸಲಾಗಿತ್ತು ಎಂದು ವರದಿಯಲ್ಲಿದೆ. ಸತ್ಸಂಗದ ನಂತರ, ಸೂರಜ್ ಪಾಲ್ ಅವರ ಪಾದಗಳಿಂದ ಧೂಳನ್ನು ತೆಗೆದುಕೊಳ್ಳುವಾಗ, ಕಾಲ್ತುಳಿತ ಸಂಭವಿಸಿತು ಮತ್ತು ಜನರು ಒಬ್ಬರನ್ನೊಬ್ಬರು ತುಳಿಯಲು ಪ್ರಾರಂಭಿಸಿದರು. ಸುಮಾರು 122 ಜನರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ 10 ನಿಮಿಷಗಳಲ್ಲಿ ಸಮೀಪದ ಸಿಕಂದರಾವ್ ಸಿಎಚ್‌ಸಿಯಲ್ಲಿ ಮೃತದೇಹಗಳ ರಾಶಿ ನಿರ್ಮಾಣವಾಯಿತು.
ಇದಲ್ಲದೆ, ಇಂಡಿಯಾ ಟುಡೇ ವರದಿಯಲ್ಲಿ ಈ ಘಟನೆಯ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿಗೆ ಆದೇಶಿಸಿದೆ ಎಂದು ಈ ವರದಿಯಲ್ಲಿದೆ. ಈ ಘಟನೆಯ ಬಗ್ಗೆ ಸಂಘಟಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿರುವ ಚಿತ್ರವನ್ನು ನಾವು ಎಚ್ಚರಿಕೆಯಿಂದ ಗಮನಿಸಿದ್ದು, ವೈರಲ್ ವೀಡಿಯೋಗಳಿಗೆ ಸಾಮ್ಯತೆ ಹೊಂದಿರುವುದನ್ನು ಗಮನಿಸಬಹುದು. ನೋಡಿದರೆ, ವೈರಲ್ ವೀಡಿಯೊದ ದೃಶ್ಯಗಳನ್ನು ಸಹ ನಾವು ನೋಡಬಹುದು, ಅದನ್ನು ಕೆಳಗಿನ ಚಿತ್ರದಿಂದ ಅರ್ಥಮಾಡಿಕೊಳ್ಳಬಹುದು.
Conclusion
ವೈರಲ್ ವೀಡಿಯೋ ಬಾಂಗ್ಲಾದೇಶದದ್ದಲ್ಲ, ಜುಲೈ ತಿಂಗಳಲ್ಲಿ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಿಂದ ಸುಮಾರು 122 ಜನರು ಸಾವನ್ನಪ್ಪಿದ ಘಟನೆಯದ್ದಾಗಿದೆ ಎಂದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ.
Also read: ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ ಎಂದ ಈ ವೀಡಿಯೋ ನಿಜಕ್ಕೂ ಭಾರತದ್ದು!
Result: False
Our Sources
Video uploaded by a YouTube channel Dated: 3rd July 2024
Article Published by Dainik Bhaskar Dated: 3rd July 2024
Article Published by India Today Dated: 3rd July 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.