Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ್ನು ಮದುವೆಯಾದ್ದಕ್ಕೆ ಈಗ ಅನುಭವಿಸುತ್ತಿದ್ದಾಳೆ, ಇದು ಲವ್ ಜಿಹಾದ್ ನಿಂದಾಗಿ ನಡೆದಿದೆ
ಬಾಂಗ್ಲಾದೇಶದ ಸಿನೆಮಾ ನಟಿಯೊಬ್ಬರ ಪೋಸ್ಟ್ ಗಳನ್ನು ಕೋಮು ಹೇಳಿಕೆಗಳೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ್ನು ಮದುವೆಯಾದ್ದಕ್ಕೆ ಈಗ ಅನುಭವಿಸುತ್ತಿದ್ದಾಳೆ, ಇದು ಲವ್ ಜಿಹಾದ್ ನಿಂದಾಗಿ ನಡೆದಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ವಿದ್ಯೆ, ಹಣ, ಆಸ್ತಿ, ಸೌಂದರ್ಯ ಎಲ್ಲವೂ ಇತ್ತು, ಸೆಂಟ್ ವಾಸನೆ ಹಿಂದೆ ಬಿದ್ದಳು, ಇವಳ ಫಾಲೋವರ್ಸ್ ಎಷ್ಟೇ ಬುದ್ದಿವಾದ ಹೇಳಿದ್ರು ಕೇಳಲಿಲ್ಲ, ಅವರಿಗೆ ಧಮಕಿ ಹಾಕಿದ್ಲು, ನನ್ನವನು ಅಂತವನಲ್ಲ ಎಲ್ಲರಂತಲ್ಲ ಎಂದು ಮತಾಂತರ ಮದುವೆಯಾದಳು. ಎರಡು ವರ್ಷ ಅವಳನ್ನು, ಅವಳ ಎಲ್ಲವನ್ನು ಅನುಭವಿಸಿ, ಈ ಗತಿಗೆ ತಂದಿದ್ದಾನೆ. ಇಂತಹ ಸಾವಿರಾರು ಘಟನೆಗಳು ಕಣ್ ಮುಂದೆ ಇದ್ದರು, ನಮ್ಮ ಹೆಣ್ಣುಮಕ್ಕಳಿಗೆ ಬುದ್ದಿ ಬರಲ್ಲ, ಇವಳ ಅದೃಷ್ಟ ಚನ್ನಾಗಿತ್ತು, ಇವಳು ಸೂಟ್ಕೇಸ್/ ಫ್ರಿಡ್ಜ್ ಅಲ್ಲಿ ಪಾರ್ಸಲ್ ಆಗಲಿಲ್ಲ!! ಬದಲಾಗಿ ಸಹೋದರಿಯರೇ ಇಂತಹ ಘಟನೆಗಳನ್ನಾದ್ರೂ ನೋಡಿ ಬದಲಾಗಿ” ಎಂದಿದೆ.

ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

ಸತ್ಯಶೋಧನೆಯ ವೇಳೆ ನಾವು ಪೋಸ್ಟ್ ನಲ್ಲಿರುವ ಎರಡೂ ಫೋಟೋಗಳನ್ನು ಗಮನಿಸಿದ್ದೇವೆ. ಇದರಲ್ಲಿ ಒಂದನೇ ಫೋಟೋದಲ್ಲಿ ಜೋಡಿಗಳನ್ನು ಕಾಣಬಹುದಾಗಿದ್ದು, ಎರಡನೇ ಫೋಟೋದಲ್ಲಿ ಯುವತಿಯೊಬ್ಬಳ ಮುಖದಲ್ಲಿ ಸುಟ್ಟ ಕಲೆಗಳಿರುವುದನ್ನು ಕಾಣಬಹುದು.
ಜೋಡಿ ಕಾಣಿಸಿಕೊಂಡಿರುವ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು ಈ ವೇಳೆ ಜ್ಯೋತಿ ಇಸ್ಲಾಂ ಎಂಬವರ ಇನ್ಸ್ಟಾಗ್ರಾಂ ಪೋಸ್ಟ್ ಒಂದು ಲಭ್ಯವಾಗಿದೆ. ಇದು ಸಿನೆಮಾ ಒಂದರ ಪೋಸ್ಟ್ ರೀತಿ ಇದ್ದು ಡಿಸೆಂಬರ್ 28, 2024ರಂದು ಪೋಸ್ಟ್ ಮಾಡಲಾಗಿದೆ.

ಜ್ಯೋತಿ ಇಸ್ಲಾಂ ಅವರ ಅವರ ಇನ್ಸ್ಟಾಗ್ರಾಂ ಖಾತೆಯ ಪರಿಶೀಲನೆ ವೇಳೆ ಅವರೊಬ್ಬರು ನಟಿಯಾಗಿದ್ದು ವಿವಿಧ ಸಿನೆಮಾಗಳ ಪೋಸ್ಟರ್ ಗಳು, ತಮ್ಮ ಪೋಟ್ರೈಟ್ ಗಳನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಇದರೊಂದಿಗೆ ನವೆಂಬರ್ 3, 2025ರಂದು ಅವರು ಇನ್ಸ್ಟಾಗ್ರಾಂನಲ್ಲಿ ಇನ್ನೊಂದು ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿರುವ ಕೋಮು ಹೇಳಿಕೆಗೆ ಪ್ರತಿಕ್ರಿಯೆನ್ನು ನೀಡಿದ್ದಾರೆ. ಅದರಲ್ಲಿ “ದಯವಿಟ್ಟು ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಿ ಮತ್ತು ಧರ್ಮದ ಬಗ್ಗೆ ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ತಪ್ಪಿಸಿ. ಗೌರವದಿಂದ ವರ್ತಿಸೋಣ.” ಎಂದಿದ್ದಾರೆ. ಈ ಹೇಳಿಕೆಯೊಂದಿಗೆ ಅವರು ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಲಗತ್ತಿಸಿದ್ದಾರೆ.

ಇದೇ ಪೋಸ್ಟ್ ಅನ್ನು ಅವರು ನವೆಂಬರ್ 3, 2025ರಂದು ಫೇಸ್ಬುಕ್ ನಲ್ಲಿ ಕೂಡ ಹಂಚಿಕೊಂಡಿದ್ದಾರೆ.
ಜ್ಯೋತಿ ಇಸ್ಲಾಂ ಅವರ ಫೇಸ್ಬುಕ್ ಪೇಜ್ ಪರಿಶೀಲನೆ ನಡೆಸಿದಾಗ, ಅಕ್ಟೋಬರ್ 26, 2025ರಂದು ಪೋಸ್ಟ್ ಮಾಡಿರುವ ರೀಲ್ಸ್ ಅನ್ನು ನೋಡಿದ್ದೇವೆ. ಅದರಲ್ಲಿ ಸುಟ್ಟ ಗಾಯದ ರೀತಿಯ ಮೇಕಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದೇ ಪೋಸ್ಟ್ ನಲ್ಲಿ “ಜೀವನದಲ್ಲಿ ಎಲ್ಲದರ ಹಿಂದೆಯೂ ಒಂದು ಅಪರಿಚಿತ ಕಥೆ ಇರುತ್ತದೆ, ಯಾರೂ ಆ ಕಥೆಯನ್ನು ತಿಳಿದುಕೊಳ್ಳಲು ಅಥವಾ ಅರ್ಥಮಾಡಿಕೊಳ್ಳಲು ಬಯಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. (ಬಂಗಾಳಿಯಿಂದ ಅನುವಾದಿಸಲಾಗಿದೆ)

ಇದೇ ರೀಲ್ಸ್ ಅನ್ನು ಅವರು ಇನ್ಸ್ಟಾಗ್ರಾಂ ಪೋಸ್ಟ್ ಗಳಲ್ಲಿಯೂ ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಪೋಸ್ಟ್ ಗಳ ಪ್ರಕಾರ, ಜ್ಯೋತಿ ಇಸ್ಲಾಂ ಅವರು ನಟಿಯಾಗಿದ್ದು, ಸಿನೆಮಾ ಪೋಸ್ಟರ್ ಮತ್ತು ತಮ್ಮ ಪಾತ್ರವೊಂದರ ಬಗ್ಗೆ ಪೋಸ್ಟ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಈ ಸಾಕ್ಷ್ಯಗಳ ಪ್ರಕಾರ, ಬಾಂಗ್ಲಾದೇಶದ ಸಿನೆಮಾ ನಟಿಯೊಬ್ಬರ ಪೋಸ್ಟ್ ಗಳನ್ನು ಕೋಮು ಹೇಳಿಕೆಗಳೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಮುಸ್ಲಿಂ ಲೀಗ್ ಧ್ವಜ ಕಿತ್ತರು ಎಂದು ಮೂಡಬಿದ್ರೆಯ ಹಳೆಯ ವೀಡಿಯೋ ಕೇರಳದಲ್ಲಿ ವೈರಲ್
Our Sources
Instagram post by Joutyislamm, Dated: December 28, 2024
Facebook post by Joutyislamm, Dated: October 26, 2025
Ishwarachandra B G
November 22, 2025
Tanujit Das
November 17, 2025
Vasudha Beri
August 18, 2025