Fact Check: ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎನ್ನುವುದು ನಿಜವೇ?

ವಾನರ ಸೇನೆ, ರಾಮ ಮಂದಿರ, ಅಯೋಧ್ಯೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲೇ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಹರಿದಾಡಿದೆ.

Fact Check: ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎನ್ನುವುದು ನಿಜವೇ
ಫೇಸ್‌ಬುಕ್‌ ನಲ್ಲಿ ಕಂಡುಬಂದಿರುವ ಕ್ಲೇಮ್‌

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಥೈಲ್ಯಾಂಡ್ ವೀಡಿಯೋ, ಅಯೋಧ್ಯೆಯದ್ದಲ್ಲ ಎಂದು ಪತ್ತೆ ಮಾಡಿದೆ.

Also Read: ಅಯೋಧ್ಯೆ ಆಗಸದಲ್ಲಿ ಡ್ರೋನ್‌ ಮೂಲಕ ರಾಮನ ಚಿತ್ರವನ್ನು ಸೃಷ್ಟಿಸಲಾಗಿದೆಯೇ?

Fact

ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ. 

ಮಾರ್ಚ್ 11, 2020 ರಂದು ಥಾಯ್ಲೆಂಡ್ನ ನೇಷನ್‌ ಟಿವಿ ವರದಿ ಪ್ರಕಾರ, “ಫಾರಾ ಕನ್ ದೇಗುಲ ಮತ್ತು ಫರಾ ಪ್ರಾಂಗ್ ಸಾಮ್‌ ಯೋಟ್ ನಲ್ಲಿ ಸಾಗುತ್ತಿದ್ದ ವಾಹನ ಚಾಲಕರಿಗೆ ಅಚ್ಚರಿ ಕಾದಿತ್ತು. ಈ ದೇಗುಲ ಸುತ್ತ ಇದ್ದ ದೊಡ್ಡ ಸಂಖ್ಯೆಯ ಮಂಗಗಳು ರಸ್ತೆಗೆ ಬಂದಿದ್ದು , ನೋಡಲು ಭಯ ಹುಟ್ಟಿಸುವಂತಿತ್ತು.” (ಗೂಗಲ್‌ ಮೂಲಕ ಭಾಷಾಂತರಿಸಲಾಗಿದೆ.) ಎಂದಿದೆ. 

Fact Check: ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎನ್ನುವುದು ನಿಜವೇ
ನೇಷನ್‌ ಟಿವಿ ವರದಿ

ಮಾರ್ಚ್ 11, 2020ರ ಖಾಸೋದ್‌ ವರದಿ ಪ್ರಕಾರ, “ಚಾವೊ ಚೀಲೋಪಬರಿ ಎಂಬಲ್ಲಿ ಜನರನ್ನು ಲೆಕ್ಕಿಸದ ಸಾವಿರಕ್ಕೂ ಹೆಚ್ಚು ಕಪಿಗಳು ರಸ್ತೆ ಮಧ್ಯದಲ್ಲೇ ಜಗಳ ಮಾಡಿದವು” (ಗೂಗಲ್ ಮೂಲಕ ಭಾಷಾಂತರಿಸಲಾಗಿದೆ) ಎಂದಿದೆ.

ಈ ಬಗ್ಗೆ ನಾವು ಇನ್ನೂ ಹೆಚ್ಚಿನ ಶೋಧನೆ ನಡೆಸಿದ್ದು ಯೂಟ್ಯೂಬ್‌ ವೀಡಿಯೋ  ಲಭ್ಯವಾಗಿವೆ. ಮಾರ್ಚ್ 13, 2020 ರಂದು ಪ್ರಕಟಿಸಿದ  ಗಾರ್ಡಿಯನ್‌ ನ್ಯೂಸ್‌ ಯೂಟ್ಯೂಬ್ ವರದಿ ಪ್ರಕಾರ,  ಈ ವೀಡಿಯೊ ಥೈಲ್ಯಾಂಡ್ನ ಚಿಲೋಪಬರಿ ಎಂಬ ಸ್ಥಳದಿಂದ ಬಂದಿದೆ, ಇದು ಪ್ರವಾಸಿಗರಿಂದ ತುಂಬಿರುತ್ತದೆ, ಅವರು ವಿವಿಧ ಆಹಾರಗಳನ್ನು ಕಪಿಗಳಿಗೆ ನೀಡುತ್ತಾರೆ. ಆದರೆ ಕೋವಿಡ್ ಕಾರಣಕ್ಕೆ ಜನಸಂದಣಿ ಕಡಿಮೆ ಇದ್ದ ಕಾರಣ ಕಪಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಇದು ಈಶಾನ್ಯ ಬ್ಯಾಂಕಾಕ್ ನಲ್ಲಿ ಪ್ರವಾಸಿಗರು ಚಿತ್ರೀಕರಿಸಿದ ವೀಡಿಯೋವಾಗಿದ್ದು ಕಪಿಗಳು ರಸ್ತೆಯಲ್ಲಿ ಸಂಚರಿಸಿ ಕಾದಾಡುವ ದೃಶ್ಯ ಇದೆ. ಈ ಎಲ್ಲ ವರದಿಗಳಲ್ಲಿರುವ ಫೋಟೋ, ವೀಡಿಯೋಗಳು ವೈರಲ್‌ ವೀಡಿಯೋವನ್ನು ಹೋಲುವುದುನ್ನು ನಾವು ಕಂಡುಕೊಂಡಿದ್ದೇವೆ.

ಗಾರ್ಡಿಯನ್‌ ನ್ಯೂಸ್‌ ವರದಿ

ಆದ್ದರಿಂದ ಸತ್ಯಶೋಧನೆಯ ಪ್ರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲೇ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎನ್ನುವುದು ತಪ್ಪಾಗಿದೆ..

Also Read: ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಎನ್ನುವುದು ನಿಜವೇ?

Result: False

Our Sources
Report By Nationtv.tv, Dated: March 11, 2020

Report By Khaosad, Dated: March 11, 2020

YouTube Video By Gardian News, Dated: March 13, 2020


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.