Fact Check: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?

ಹಿಂದೂ ದಂಪತಿಗೆ ಮುಸ್ಲಿಂ ಕಿರುಕುಳ, ಪಶ್ಚಿಮ ಬಂಗಾಳ

Authors

Claim
ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆ

Fact
ಮಹಿಳೆಯೊಬ್ಬರು ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಅವರಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ವಿದ್ಯಮಾನ ಬಿಹಾರದ ಸರನ್‌ ನಲ್ಲಿ 2021ರಲ್ಲಿ ನಡೆದಿದ್ದು ಪ್ರಕರಣದಲ್ಲಿ ಬಂಧಿತರಾದವರು ಒಂದೇ ಕೋಮಿಗೆ ಸೇರಿದವರು ಎಂದು ತಿಳಿದುಬಂದಿದೆ.

ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ಪಶ್ಚಿಮ ಬಂಗಾಳದ ಮುಸ್ಲಿಮರು ,ಹಿಂದೂ ದಂಪತಿಗಳು ಹೊಲಗದ್ದೆ ತೋಟಗಳ ಕಡೆ ಹೋದಾಗ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಯೋಗಿ ಇರುವಾಗಲೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇನ್ನು ಒಂದು ವೇಳೆ ಇವರು ಇಲ್ಲ ಅಂದ್ರೆ ಯಾವ ರೀತಿ ನಮ್ಮ ದೇಶ ಇರುತ್ತೆ ಅನ್ನೋದನ್ನ ಯೋಚನೆ ಮಾಡಿ, ನರೇಂದ್ರ ಮೋದಿ ಜಿ ಆದಿತ್ಯನಾಥ್ ನಮ್ಮ ದೇಶದಲ್ಲಿ ಇಲ್ಲದಿದ್ದರೆ, ಮುಂದೆ ಇದೇ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಕೂಡ ಬರುವ ಸಾಧ್ಯತೆಗಳು ಹೆಚ್ಚು ನೀವೇ ಯೋಚಿಸಿ ನೋಡಿ.” ಎಂದಿದೆ.

Fact Check: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಈ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಪಶ್ಚಿಮ ಬಂಗಾಳದ್ದಲ್ಲ ಮತ್ತು ಇದರಲ್ಲಿ ಮುಸ್ಲಿಂ ಸಮುದಾಯದ ಮಂದಿ ಇರಲಿಲ್ಲ ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಅಕ್ಟೋಬರ್ 11, 2021ರ ಹಿಂದೂಸ್ತಾನ್‌ ಟೈಮ್ಸ್‌ ವರದಿ ಪ್ರಕಾರ, “ಬಿಹಾರದ ಸರನ್‌ನಲ್ಲಿ ನಡೆದ ಮಹಿಳೆ ಮೇಲಿನ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಸರನ್‌ ಜಿಲ್ಲೆಯ ದಾರಿಯಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಲಕ್ಷ್ಮಣ್‌ ಚಾಕ್‌ ಪ್ರದೇಶದಿಂದ ಸೆ.27ರಂದು ಬಂಧಿಸಲಾಗಿದೆ” ಎಂದಿದೆ. ಈ ವರದಿಯಲ್ಲಿ ಘಟನೆ ಅಕ್ಟೋಬರ್ 5ರಂದು ಬೆಳಕಿಗೆ ಬಂದಿದ್ದು, ಆರೋಪಿಗಳು ಕಿರುಕುಳದ ವೀಡಿಯೋವನ್ನುಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರು. ಬಳಿಕ ಸರನ್‌ ಎಸ್ಪಿ ಸಂತೋಷ್ ಕುಮಾರ್ ಅವರು ವಿಶೇಷ ತನಿಖಾ ತಂಡವನ್ನು ನೇಮಿಸಿದ್ದು, ಅವರು ನಾಲ್ಕು ಮಂದಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಅವರು ಮತ್ತಿಬ್ಬರು ಪ್ರಮುಖ ಆರೋಪಿಗಳ ಹೆಸರನ್ನು ಹೇಳಿದ್ದಾರೆ ಎಂದಿದೆ. ಈ ವರದಿ ಪ್ರಕಾರ ಆರೋಪಿಗಳೆಲ್ಲ ಹಿಂದೂಗಳಾಗಿದ್ದಾರೆ.

Fact Check: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
ಹಿಂದೂಸ್ತಾನ್‌ ಟೈಮ್ಸ್ ವರದಿ

ಅಕ್ಟೋಬರ್ 6, 2021ರ ದೈನಿಕ್‌ ಭಾಸ್ಕರ್ ವರದಿ ಪ್ರಕಾರ, “ಮಹಿಳೆ ಕಿರುಚುತ್ತಲೇ ಇದ್ದರೂ ಆಕೆಗೆ ಲೈಂಗಿಕ ಕಿರುಕುಳ ನೀಡಿದ ವೀಡಿಯೋ ವೈರಲ್‌ ಆದ ಬಳಿಕ ಪೊಲೀಸರು ಎಚ್ಚೆತ್ತಿದ್ದು, ದರಿಯಾಪುರ ಪ್ರದೇಶದಿಂದ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಇನ್ನೂ ತಪ್ಪಿಸಿಕೊಂಡಿದ್ದಾರೆ” ಎಂದಿದೆ. ಈ ವರದಿಯಲ್ಲಿ ವೈರಲ್‌ ವೀಡಿಯೋದಲ್ಲಿ ಕಂಡುಬಂದಿರು ಸಂತ್ರಸ್ತೆಯ ಫೋಟೋವನ್ನು ಲಗತ್ತಿಸಲಾಗಿರುವುದನ್ನು ನಾವು ಗಮನಿಸಿದ್ದೇವೆ. 

Fact Check: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
ದೈನಿಕ್ ಭಾಸ್ಕರ್ ವರದಿ

ಈ ಬಗ್ಗೆ ಇನ್ನಷ್ಟು ಶೋಧ ನಡೆಸಲಾಗಿದ್ದು, ಅಕ್ಟೋಬರ್ 6, 2021ರ ಲೈವ್ ಹಿಂದೂಸ್ತಾನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ “ಬಿಹಾರದ ಚಾಪ್ರಾದಲ್ಲಿ ಮಹಿಳೆ ಕೂಗಾಡುತ್ತಲೇ ಇದ್ದರು, ದುಷ್ಕರ್ಮಿಗಳು ಸೀರೆ ಎಳೆಯುತ್ತಲೇ ಇದ್ದರು ವೀಡಿಯೋ ವೈರಲ್‌ ಆದ ನಂತರ ನಾಲ್ವರ ಬಂಧನ” ಎಂದಿದೆ.

ಲೈವ್ ಹಿಂದೂಸ್ತಾನ್‌ ವರದಿ

Conclusion

ಈ ಸಾಕ್ಷ್ಯಗಳ ಪ್ರಕಾರ, ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯಲ್ಲ, ಮತ್ತು ಮಹಿಳೆ ಮೇಲೆ ಲೈಂಗಿಕ ಕಿರುಕುಳ, ಹಲ್ಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಮುಸ್ಲಿಮರಲ್ಲ, ಅವರು ಒಂದೇ ಕೋಮಿಗೆ ಸೇರಿದವರು ಎಂದು ಕಂಡುಬಂದಿದೆ.

Result: False

Our Sources:
Report By Hindustan Times, Dated: October 11, 2021

Report By Dainik Bhaskar, Dated: October 6, 2021

YouTube Video By Live Hindustan, Dated: October 6, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors