Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉಚಿತ ವಿದ್ಯುತ್ ಪಡೆಯುತ್ತಿದ್ದ ಕಾಶ್ಮೀರಿ ಮುಸ್ಲಿಮರಿಂದ ಈಗ ಸ್ಮಾರ್ಟ್ ಮೀಟರ್ ವಿರುದ್ಧ ಪ್ರತಿಭಟನೆ
ವೈರಲ್ ವೀಡಿಯೋ ಪ್ರಸ್ತಾವಿತ ವಿದ್ಯುತ್ ದರ ಏರಿಕೆ ವಿರುದ್ಧ ಪಿಡಿಪಿ ಮಹಿಳಾ ಮೋರ್ಚಾ ನಡೆಸಿದ ಪ್ರತಿಭಟನೆಯದ್ದಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 200 ಯುನಿಟ್ ಉಚಿತ ವಿದ್ಯುತ್ ಅಂತ್ಯೋದಯ ಫಲಾನುಭವಿಗಳಿಗೆ ಸೀಮಿತವಾಗಿದೆ
ಉಚಿತ ವಿದ್ಯುತ್ ಪಡೆಯುತ್ತಿದ್ದ ಕಾಶ್ಮೀರಿ ಮುಸ್ಲಿಮರು ಈಗ ಸ್ಮಾರ್ಟ್ ಮೀಟರ್ ಅಳವಡಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಕಾಶ್ಮೀರಿ ಮುಸ್ಲಿಮರು ಈಗ ಸ್ಮಾರ್ಟ್ ಎಲೆಕ್ಟ್ರಿಕ್ ಮೀಟರ್ಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಏಕೆಂದರೆ ಅವರು ಎಂದಿಗೂ ವಿದ್ಯುತ್ಗೆ ಬಿಲ್ ಪಾವತಿ ಮಾಡಿ ಗೊತ್ತೇ ಇರಲಿಲ್ಲ . ಸ್ವಾತಂತ್ರ್ಯ ಬಂದಾಗಿನಿಂದ ಈ ಯಾರು ಧನಸಹಾಯ ಮಾಡುತ್ತಿದ್ದರು ಎಷ್ಟು ಕಾಲ ಸರ್ಕಾರ ಸಾಕೋದಿಕ್ಕಾಗುತ್ತೆ.” ಎಂದಿದೆ.

ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.



ಈ ಹೇಳಿಕೆ ಕುರಿತಾಗಿ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ದಾರಿತಪ್ಪಿಸುವ ಹೇಳಿಕೆ ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಹೇಳಿಕೆಯೊಂದಿಗಿರುವ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ. ಅದರ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಶುಲ್ಕ ಹೆಚ್ಚಳದ ವಿರುದ್ಧ ಪಿಡಿಪಿ ಪಕ್ಷದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ನವೆಂಬರ್ 24, 2025ರ JK VOICE24 NEWS ಯೂಟ್ಯೂಬ್ ವೀಡಿಯೋದಲ್ಲಿ 20% ಸುಂಕ ಏರಿಕೆ ಪ್ರತಿಭಟನೆ ಹತ್ತಿಕ್ಕಲಾಗಿದೆ: ಎನ್ಸಿ ಸರ್ಕಾರದ ‘200 ಉಚಿತ ಯೂನಿಟ್ಗಳು’ ಹೇಳಿಕೆ ಬಯಲು? ಎಂದಿದೆ.
ನವೆಂಬರ್ 24, 2025ರ journalist Rajinder ಯೂಟ್ಯೂಬ್ ವೀಡಿಯೋದಲ್ಲಿ, ಪ್ರಿಪೇಯ್ಡ್ ಮೀಟರ್ ವಿರುದ್ಧ ಪಿಡಿಪಿ ಮಹಿಳಾ ಮೋರ್ಚಾ ವಿಭಾಗದಿಂದ ಪ್ರತಿಭಟನೆ ಎಂದಿದೆ.
ನವೆಂಬರ್ 25, 2025ರ thekashmirimages ವರದಿಯ ಪ್ರಕಾರ, “ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ದರ ಏರಿಕೆಯ ಪ್ರಸ್ತಾವಿತ ಕ್ರಮವನ್ನು ವಿರೋಧಿಸಿ ಪಿಡಿಪಿಯ ಮಹಿಳಾ ವಿಭಾಗ ಸೋಮವಾರ ನಡೆಸುತ್ತಿದ್ದ ಪ್ರತಿಭಟನೆಯನ್ನು ತಡೆಯಲಾಯಿತು ವಿದ್ಯುತ್ ದರ ಏರಿಕೆಯ ವಿರುದ್ಧ ಪಕ್ಷದ ಮಹಿಳಾ ವಿಭಾಗವು ಪ್ರತಿಭಟನೆ ನಡೆಸಲು ಯೋಜಿಸಿತ್ತು; ಆದರೆ, ಪಿಡಿಪಿ ಪ್ರಕಾರ, ಪೊಲೀಸರು ತಮ್ಮ ಕಾರ್ಯಕರ್ತರನ್ನು ಶೇರ್-ಎ-ಕಾಶ್ಮೀರ ಮುನ್ಸಿಪಲ್ ಪಾರ್ಕ್ ಬಳಿಯಿರುವ ಪಕ್ಷದ ಪ್ರಧಾನ ಕಚೇರಿಯಿಂದ ಹೊರಹೋಗಲು ಅನುಮತಿಸಲಿಲ್ಲ.” ಎಂದಿದೆ.

ನವೆಂಬರ್ 24, 2025ರ kashmirlife ವರದಿಯ ಪ್ರಕಾರ, “ಪ್ರಸ್ತಾವಿತ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಪಿಡಿಪಿ ಮಹಿಳಾ ವಿಭಾಗ ಸೋಮವಾರ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿತು. ಸ್ಮಾರ್ಟ್ ಮೀಟರ್ಗಳ ಮೂಲಕ ಉತ್ಪತ್ತಿಯಾಗುವ ಭಾರೀ ಬಿಲ್ಗಳು ಸ್ಥಳೀಯರಿಗೆ ತೀವ್ರ ಆರ್ಥಿಕ ಸಂಕಷ್ಟವನ್ನುಂಟುಮಾಡಿವೆ ಎಂದು ಆರೋಪಿಸಿ ಪ್ರತಿಭಟನಾಕಾರರು ಪಕ್ಷದ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿ ಗ್ರಾಹಕರಿಗೆ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.” ಎಂದಿದೆ.

ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.
ಈ ಎಲ್ಲ ವರದಿಗಳಲ್ಲಿ ವೈರಲ್ ವೀಡಿಯೋದ ಕೀಫ್ರೇಂಗಳನ್ನು ಹೋಲುವ ವೀಡಿಯೋ/ಫೋಟೋಗಳು ಇರುವುದನ್ನು ನಾವು ಕಂಡಿದ್ದೇವೆ. ಮತ್ತು ಪಿಡಿಪಿ ಮಹಿಳಾ ಮೋರ್ಚಾದ ಪ್ರತಿಭಟನೆ ಪ್ರಸ್ತಾವಿತ ವಿದ್ಯುತ್ ದರ ಏರಿಕೆಯ ವಿರುದ್ಧವಾಗಿತ್ತು ಎನ್ನುವುದು ಸ್ಪಷ್ಟವಾಗಿದೆ.
ಈ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಹೇಳಿಕೆ ಲಭ್ಯವಾಗಿದೆ. “ಕಣಿವೆಯಲ್ಲಿ ನಿಗದಿತ ಪೀಕ್ ಅವರ್ ಗಳಲ್ಲಿ ಮೂಲ ವಿದ್ಯುತ್ ದರದ ಮೇಲೆ ಶೇ. 20 ರಷ್ಟು ಸರ್ಚಾರ್ಜ್ ವಿಧಿಸುವ ವರದಿಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ದರವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. “ವಿದ್ಯುತ್ ಹೆಚ್ಚಳವನ್ನು ಪ್ರಸ್ತಾಪಿಸಲಾಗಿಲ್ಲ, ಮತ್ತು ಈ ವದಂತಿ ಎಲ್ಲಿಂದ ಪ್ರಾರಂಭವಾಯಿತು ಎಂದು ನನಗೆ ತಿಳಿದಿಲ್ಲ” ಎಂ ಸುದ್ದಿಗಾರರಿಗೆ ತಿಳಿಸಿದರು.” ಎಂದು ಇಕನಾಮಿಕ್ ಟೈಮ್ಸ್ ನವೆಂಬರ್ 24, 2025ರ ವರದಿಯಲ್ಲಿದೆ.
ಇದೇ ರೀತಿಯ ವರದಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕೂಡ ಮಾಡಿದ್ದು, ಅದನ್ನು ಇಲ್ಲಿ ನೋಡಬಹುದು.
ಸತ್ಯಶೋಧನೆಗೆ ಪೂರಕವಾಗಿ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆಯನ್ನು ಅಲ್ಲಿನ ಸರ್ಕಾರ ಮಾರ್ಚ್ 2025ರ ವೇಳೆಗೆ ಮಾಡಿತ್ತು. ಇದನ್ನು kashmirlife ಮಾರ್ಚ್ 25, 2025ರಂದು ವರದಿ ಮಾಡಿದೆ.

ಈ ವರದಿಯ ಪ್ರಕಾರ, “ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅಂತ್ಯೋದಯ ಅನ್ನ ಯೋಜನೆ (AAY) ವರ್ಗದ ಅಡಿಯಲ್ಲಿ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಪ್ರಮುಖ ಉಪಕ್ರಮವನ್ನು ಘೋಷಿಸಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆ (PMSGMBY) ಯೊಂದಿಗೆ ಸಂಯೋಜಿಸಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಅವರ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಈ ಕ್ರಮದ ಗುರಿಯಾಗಿದೆ ಎಂದು ಮೂವರು ಶಾಸಕರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರ್ಕಾರ ಸದನದಲ್ಲಿ ತಿಳಿಸಿದೆ.” ಎಂದಿದೆ.
ಇದೇ ವರದಿಯನ್ನು ಮಾರ್ಚ್ 28, 2025ರ ಆಕಾಶವಾಣಿ ನ್ಯೂಸ್ ಆನ್ ಏರ್ ವರದಿಯಲ್ಲೂ ನೋಡಬಹುದು.
ಈ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯೋದಯ ಯೋಜನೆ ಫಲಾನುಭವಿಗಳ ಹೊರತಾಗಿ ಬೇರೆ ಯಾರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿಲ್ಲ ಎಂಬುದು ಖಚಿತವಾಗಿದೆ.
ತನಿಖೆಯ ಭಾಗವಾಗಿ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಮನೆ ಬಳಕೆ ವಿದ್ಯುತ್ ಗೆ ವಿಧಿಸಲಾಗುತ್ತಿರುವ ದರಗಳ ಪರಿಶೀಲನೆಯನ್ನು ಮಾಡಿದ್ದೇವೆ. ಇದರ ಪ್ರಕಾರ 200 ಯುನಿಟ್ ಗಳವರೆಗಿನ ಬಳಕೆಗೆ ಯುನಿಟ್ ಒಂದಕ್ಕೆ 2.30 ರೂ.ಗಳಿವೆ. ಇನ್ನು ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ 30 ಯುನಿಟ್ ವರೆಗೆ ಎನರ್ಜಿ ಶುಲ್ಕ ಕಿಲೋವ್ಯಾಟ್ಗೆ 1.40 ರೂ. ನಿಗದಿತ ಶುಲ್ಕ ಕಿಲೋ ವ್ಯಾಟ್ ಗೆ 5 ರೂ. ಇದೆ. ಈ ಕುರಿತ ವಿವರಗಳನ್ನು (2025ರ ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದ ಹಾಗೂ ಕೇಂದ್ರಾಡಳಿತ ಲಡಾಖ್ ನ ಜಂಟಿ ವಿದ್ಯುತ್ ನಿಯಂತ್ರಣ ಪ್ರಾಧಿಕಾರದ ಆದೇಶ) ಇಲ್ಲಿ ನೋಡಬಹುದು.

ಆದ್ದರಿಂದ ಈ ತನಿಖೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ಉಚಿತವಾಗಿ ಎಲ್ಲರಿಗೂ ಲಭ್ಯವಿಲ್ಲ ಅಂತ್ಯೋದಯ ಯೋಜನೆ ಫಲಾನುಭವಿಗಳಿಗೆ 200 ಯುನಿಟ್ ಸೀಮಿತವಾಗಿ ಇದೆ. ವೈರಲ್ ಹೇಳಿಕೆಯಲ್ಲಿ ಹೇಳಿರುವುದು ದಾರಿತಪ್ಪಿಸುವ ಹೇಳಿಕೆಯಾಗಿದ್ದು, ಅದರಲ್ಲಿ ಕಂಡುಬಂದಿರುವ ವೀಡಿಯೋ ಪ್ರಸ್ತಾವಿತ ವಿದ್ಯುತ್ ದರ ಏರಿಕೆ ವಿರುದ್ಧ ಪಿಡಿಪಿ ಮಹಿಳಾ ಮೋರ್ಚಾ ನಡೆಸಿದ ಪ್ರತಿಭಟನೆಯದ್ದಾಗಿದೆ.
Our Sources
YouTube Video by JK VOICE24 NEWS, Dated: November 24, 2025
YouTube Video by journalist Rajinder, Dated: November 24, 2025
Report by The kashmirimages, Dated: November 25, 2025
Report by Kashmirlife, Dated: November 24, 2025
Report by Economictimes, Dated: November 24, 2025
Report by kashmirlife, Dated: March 25, 2025
Joint Electricity Regulatory Commission for UT of Jammu & Kashmir and UT of Ladakh Tarifr order, Dated: March 24, 2025
Ishwarachandra B G
October 8, 2025
Ishwarachandra B G
September 9, 2025
Ishwarachandra B G
July 12, 2025