Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕರ್ನಾಟಕದಲ್ಲಿ ಪೊಲೀಸರು ಮುಸ್ಲಿಂ ಲೀಗ್ ಧ್ವಜವನ್ನು ತೆಗೆದುಹಾಕುತ್ತಿರುವ ದೃಶ್ಯಗಳು
ವೀಡಿಯೋದಲ್ಲಿ ಕಾಣುವ ಧ್ವಜವು ಮುಸ್ಲಿಂ ಲೀಗ್ಗೆ ಸೇರಿಲ್ಲ. ಧ್ವಜ ತೆಗೆಯುವಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ
ಮುಸ್ಲಿಂ ಲೀಗ್ ಧ್ವಜವನ್ನು ಕರ್ನಾಟಕದ ಪೊಲೀಸರು ತೆಗೆದು ಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಸ್ಥಳವೊಂದರಲ್ಲಿ ಹಾಕಲಾಗಿದ್ದ ಹಸಿರು ಧ್ವಜವನ್ನು ಪೊಲೀಸ್ ಅಧಿಕಾರಿಯೊಬ್ಬರು ತೆಗೆಸುತ್ತಿರುವ ವೀಡಿಯೋ ಇದಾಗಿದೆ.
“ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಲೀಗ್ಗಳು ಆರು ತಿಂಗಳ ಮೊದಲೇ ಪರ್ಮಿಟ್ ತೆಗೆದುಕೊಳ್ಳಲೇಬೇಕು.. ಲೀಗ್ ಇನ್ನೂ ಇದಕ್ಕಿಂತ ದೊಡ್ಡ ದಯನೀಯ ಪರಿಸ್ಥಿತಿಗೆ ಇಳಿಯಲಿದೆಯೇ, ಅಮಾಯಕರೇ.. ಅಲ್ಪಸಂಖ್ಯಾತ ರಕ್ಷಕ ಕಾಂಗ್ರೆಸ್, ಹೇಗಿದೆ…!” ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ದಾರಿತಪ್ಪಿಸುವ ಹೇಳಿಕೆ ಎಂದು ಕಂಡುಕೊಂಡಿದೆ.
Also Read: ವಿಶ್ವದ ಅತ್ಯಂತ ಭ್ರಷ್ಟ 10 ಪಕ್ಷಗಳಲ್ಲಿ ಕಾಂಗ್ರೆಸ್ಗೆ ಪ್ರಥಮ ಸ್ಥಾನ ಎಂದ ಬಿಬಿಸಿ, ಇದು ನಿಜವೇ?
1. ದೃಶ್ಯದ ಪರಿಶೀಲನೆ
ವೈರಲ್ ವೀಡಿಯೋವನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಧ್ವಜದಲ್ಲಿ ಚಂದ್ರ, ನಕ್ಷತ್ರದ ಗುರುತುಗಳನ್ನು ಕಂಡಿದ್ದೇವೆ. ಆದರೆ ಇದು ಮುಸ್ಲಿಂ ಲೀಗ್ ನ ಧ್ವಜದಂತೆ ಇಲ್ಲ ಎಂದು ಗಮನಿಸಿದ್ದೇವೆ. ಮುಸ್ಲಿಂ ಲೀಗ್ ನ ಹಸಿರು ಧ್ವಜದಲ್ಲಿ ಚಂದ್ರ, ನಕ್ಷತ್ರದ ಚಿಹ್ನೆ ಮೇಲ್ಭಾಗದಲ್ಲಿ ಕಾಣುತ್ತದೆ.

ಆದರೆ ವೈರಲ್ ಆದ ವೀಡಿಯೋದಲ್ಲಿ ಧ್ವಜದ ಮಧ್ಯಭಾಗದಲ್ಲಿ ಚಂದ್ರ-ನಕ್ಷತ್ರದ ಚಿಹ್ನೆ ಇದ್ದು, ಅದು ಸಾಮಾನ್ಯವಾಗಿ ಮುಸ್ಲಿಂ ಸಮುದಾಯ ಬಳಸುವ ಇಸ್ಲಾಮಿಕ್ ಧ್ವಜವಾಗಿದೆ ಎಂದು ಗೊತ್ತಾಗಿದೆ.

2. ವರದಿಗಳು
ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದಾಗ, ಇದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಸುದ್ದಿಗಳು News18 ಕನ್ನಡ ಮತ್ತು OneIndia Kannada ಮತ್ತು 2023 ಅಕ್ಟೋಬರ್ 6 ರಂದು ಪ್ರಕಟವಾಗಿರುವುದು ಕಂಡುಬಂದಿದೆ.
ನ್ಯೂಸ್18 ಕನ್ನಡ ವರದಿ ಪ್ರಕಾರ, ಮೂಡುಬಿದಿರೆಯ ಪುಚ್ಚೆಮೊಗೆರುವಿನ ಗಣಪತಿ ಕಟ್ಟೆಯಲ್ಲಿ ಸ್ಥಾಪಿಸಲಾದ ಹಸಿರು ಪತಾಕೆಯನ್ನು ಪೊಲೀಸರು ತೆಗೆದುಹಾಕಿದ್ದಾರೆ. ಧ್ವಜ ಹಾಕಿದ್ದರಿಂದ ಸಾಮರಸ್ಯ ಕೆಡಬಹುದು ಎಂಬ ಕಾರಣಕ್ಕೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಒನ್ಇಂಡಿಯಾ ಕನ್ನಡ ದಲ್ಲೂ ಈ ಘಟನೆ ಬಗ್ಗೆ ಇದೆ. , ಈದ್ನ ಹಬ್ಬದ ಸಂದರ್ಭ ಸ್ಥಾಪಿಸಲಾದ ಪತಾಕೆಯನ್ನು ಪೊಲೀಸರು ತೆಗೆದುಹಾಕಿದ್ದಾರೆ. ಸ್ಥಳೀಯ ಪಿಡಿಒ ಅವರ ಗಮನಕ್ಕೆ ಘಟನೆಯ ಬಗ್ಗೆ ತಿಳಿಸಲಾಗಿದ್ದರೂ, ಅವರು ತೆರವು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತೆರವು ಮಾಡಿದ್ದಾರೆ ಎಂದು ಗೊತ್ತಾಗಿದೆ.

3. ಪೊಲೀಸ್ ಪ್ರತಿಕ್ರಿಯೆ
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ ಪಿಜಿ ಅವರನ್ನು ನ್ಯೂಸ್ ಚೆಕರ್ ಸಂಪರ್ಕಿಸಿದಾಗ, “ಪ್ರಕರಣ ಎರಡು ವರ್ಷ ಹಿಂದಿನದ್ದಾಗಿದೆ. ಸಂಭಾವ್ಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸ್ಥಳದಿಂದ ಹಸಿರು ಧ್ವಜವನ್ನು ತೆಗೆಸಲಾಗಿದೆ. ಅದು ಒಂದು ಧಾರ್ಮಿಕ ಧ್ವಜವಾಗಿದ್ದು, ರಾಜಕೀಯ ಪಕ್ಷದ್ದಲ್ಲ, ಕಟ್ಟೆಯೊಂದರಲ್ಲಿದ್ದ ಧ್ವಜವನ್ನು ತೆಗೆಸುವಂತೆ ಪಿಡಿಒ ಅವರಿಗೆ ಸೂಚನೆ ಇದ್ದರೂ, ಅವರು ತೆಗೆಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಧ್ವಜ ತೆಗೆಯಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಅದೊಂದು ಸಾಮಾನ್ಯ ಕಟ್ಟೆಯಾಗಿದ್ದು, ಜನರು ಈಗ ಅದನ್ನು ಕುಳಿತುಕೊಳ್ಳಲು ಬಳಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ
ಕರ್ನಾಟಕದಲ್ಲಿ ಮುಸ್ಲಿಂ ಲೀಗ್ ನ ಧ್ವಜವನ್ನು ತೆಗೆಸಲಾಗಿದೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿದೆ. ಮೂಡಬಿದ್ರೆ ಸನಿಹದ ಪುಚ್ಚೆಮೊಗೆರುವಿನಲ್ಲಿ ಕಟ್ಟೆಯೊಂದರಲ್ಲಿಟ್ಟಿದ್ದ ಇಸ್ಲಾಮಿಕ್ ಧ್ವಜವನ್ನು ತೆಗೆಸಲಾಗಿದೆ. ಧಾರ್ಮಿಕ ಚಿಹ್ನೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದ ಬಳಿಕ ಯಾವುದೇ ಅಹಿತರಕರ ಘಟನೆಗಳು ಉಂಟಾಗದೇ ಇರುವಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವೈರಲ್ ವೀಡಿಯೋದಲ್ಲಿ ಕಾಣುವ ಧ್ವಜ ಮುಸ್ಲಿಂ ಲೀಗ್ ನದ್ದಲ್ಲ, ಇದು ಹಸಿರು ಧ್ವಜವಾಗಿದ್ದು ಇಸ್ಲಾಮಿಕ್ ಧ್ವಜವಾಗಿದೆ. ಪುಚ್ಚೆಮೊಗೆರುವಿನ ಕಟ್ಟೆಯೊಂದರಲ್ಲಿ ಹಾಕಲಾಗಿದ್ದ ಧ್ವಜವನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತೆಗೆಸಿದ್ದಾರೆ ಎಂದು ಕಂಡುಬಂದಿದೆ.
Also Read: ಸೇಡಂನಲ್ಲಿ ಆರೆಸ್ಸೆಸ್ ಪಥ ಸಂಚಲನ ಎಂದು ನಾಗ್ಪುರದ ವೀಡಿಯೋ ಹಂಚಿಕೆ
FAQ ಗಳು
1. ವಿಡಿಯೋವನ್ನು ಎಲ್ಲಿಯದ್ದು?
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲ್ಲೂಕಿನ ಪುಚ್ಚೆಮೊಗೇರು ಎಂಬಲ್ಲಿ ನಡೆದಿದೆ.
2. ಧ್ವಜವು ಮುಸ್ಲಿಂ ಲೀಗ್ಗೆ ಸೇರಿದೆಯೇ?
ಇಲ್ಲ. ಧ್ವಜವು ಇಸ್ಲಾಮಿಕ್ ಹಸಿರು ಧ್ವಜವಾಗಿದೆ, ಮುಸ್ಲಿಂ ಲೀಗ್ನ ಪಕ್ಷದ ಧ್ವಜವಲ್ಲ.
3. ಪೊಲೀಸರು ಧ್ವಜವನ್ನು ಏಕೆ ತೆಗೆದರು?
ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಚಿಹ್ನೆಗಳನ್ನು ಸ್ಥಾಪಿಸಿದ ನಂತರ ಯಾವುದೇ ಸಂಭಾವ್ಯ ಅಹಿತರಕ ಘಟನೆಗಳನ್ನು ತಡೆಯಲು ಪೊಲೀಸರು ಅದನ್ನು ತೆಗೆದರು.
4. ಘಟನೆ ಯಾವಾಗ?
ಧ್ವಜ ನೆಟ್ಟ ಪ್ರಕರಣ 2023ರದ್ದಾಗಿದೆ.
Sources
Report by OneIndia Kannada, Dated: October 6, 2023
Report by News18 Kannada, Dated: October 6, 2023
Facebook post by IUML Facebook Post – April 26, 2022
Amazon – Islamic Green Flag Reference
Telephone conversation with Sandesh PG, Police Inspector for Moodbidri
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)