Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇಂಡಿಗೋ ಏರ್ ಲೈನ್ಸ್ ಬಿಕ್ಕಟ್ಟಿನ ಮಧ್ಯೆ, ವಿಮಾನ ನಿಲ್ದಾಣದ ಡಾಂಬರಿನ ಮೇಲೆ ಪ್ರಯಾಣಿಕರು ಕುಳಿತಿರುವುದನ್ನು ತೋರಿಸುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, 2,000 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿ ಸಾವಿರಾರು ಪ್ರಯಾಣಿಕರು ಸಿಲುಕಿರುವ ಪ್ರಸ್ತುತ ಇಂಡಿಯೋ ಏರ್ ಲೈನ್ಸ್ ನಿಂದಾದ ಪರಿಸ್ಥಿತಿಯನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ.

ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಮೇ 15, 2018 ರ ವರದಿ ಲಭ್ಯವಾಗಿದೆ. ಇದೇ ಚಿತ್ರವನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ್ದು, ಅದರಲ್ಲಿ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ ಮಳೆಯಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ಅಡ್ಡಿ ಉಂಟಾಗಿದ್ದು, ಬೆಳಿಗ್ಗೆ 10:40 ಕ್ಕೆ ಬೆಂಗಳೂರಿಗೆ ಹೊರಡಬೇಕಿದ್ದ ಇಂಡಿಗೊ 6E2977 ವಿಮಾನದಲ್ಲಿ ಸಿಬ್ಬಂದಿ ಲಭ್ಯವಿಲ್ಲದ ಕಾರಣ ಪ್ರಯಾಣಿಕರು ಸುಮಾರು ಏಳು ಗಂಟೆಗಳ ಕಾಲ ಕಾಯಬೇಕಾಯಿತು ಎಂದಿದೆ.

ವರದಿಯ ಪ್ರಕಾರ, ಇಂಡಿಗೋ ಅಧಿಕಾರಿಗಳು ಈ ಸಮಸ್ಯೆಗೆ ಪ್ರಾಥಮಿಕವಾಗಿ ಹವಾಮಾನ ವೈಪರೀತ್ಯವೇ ಕಾರಣ ಎಂದು ಹೇಳಿದ್ದಾರೆ, ಈ ಸಮಯದಲ್ಲಿ ಹಲವಾರು ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಮಯವನ್ನು ಪೂರ್ಣಗೊಳಿಸಿದ್ದರಿಂದ ಅವರನ್ನು ಬದಲಾಯಿಸಬೇಕಾಯಿತು.
ಮೇ 14, 2018 ರಂದು ಪ್ರಕಟವಾದ ಎಕನಾಮಿಕ್ ಟೈಮ್ಸ್ನ ಮತ್ತೊಂದು ವರದಿಯು ಸಹ ಅದೇ ಫೋಟೋವನ್ನು ಹೊಂದಿದ್ದು, ಇಂಡಿಗೋ ಬೆಂಗಳೂರಿಗೆ ಹೋಗುವ ವಿಮಾನವು ದೆಹಲಿ ವಿಮಾನ ನಿಲ್ದಾಣದ ಡಾಂಬರಿನಲ್ಲಿ ಏಳು ಗಂಟೆಗಳಿಗೂ ಹೆಚ್ಚು ಕಾಲ ನಿಂತಿತ್ತು ಎಂದು ದೃಢಪಡಿಸಿದೆ.
ಆದ್ದರಿಂದ, ವೈರಲ್ ಆಗಿರುವ ಈ ಛಾಯಾಚಿತ್ರವು ಇಂಡಿಗೊದ ಇತ್ತೀಚಿನ ವಿಮಾನ ರದ್ದತಿಗೆ ಸಂಬಂಧಿಸಿಲ್ಲ. ಇದು 2018 ರ ಸಮಯದ್ದು ಎಂದು ಕಂಡುಬಂದಿದೆ.
Our Sources
Report By Times of India, Dated May 15, 2018
Report By Economic Times, Dated May 14, 2018
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)