Claim
ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿಗೆ ಮದುವೆ ನಡೆಯಲಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯೊಂದನ್ನು ಹಂಚಿಕೊಳ್ಳಲಾಗಿದೆ.
ಪಬ್ಲಿಕ್ ಟಿವಿ ಈ ಕುರಿತು ವೆಬ್‌ನಲ್ಲಿ ಸುದ್ದಿ ಪ್ರಕಟಿಸಿದ್ದು ಅದನ್ನು ಫೇಸ್‌ಬುಕ್ ನಲ್ಲೂ ಪೋಸ್ಟ್ ಮಾಡಿದೆ. ಇದರೊಂದಿಗೆ ವಿವಿಧ ವೆಬ್ ಪುಟಗಳೂ ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿಗೆ ಮದುವೆ ನಡೆಯಲಿದೆ ಎಂಬಂತೆ ಸುದ್ದಿಯನ್ನು ಹಂಚಿಕೊಂಡಿವೆ.

ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.



Also Read: ಮಹಾಕುಂಭ ಮೇಳ ಪ್ರಯಾಣಿಕರಿಂದ ರೈಲ್ವೇ ಟಿಟಿಇ ಹಣ ವಸೂಲಿ ಎನ್ನುವುದು ನಿಜವಲ್ಲ!
ಪ್ರಮುಖ ಸುದ್ದಿ ಮಾಧ್ಯಮಗಳಾದ ಸಿಎನ್‌ಬಿಸಿ-ಟಿವಿ18 , ಇಂಡಿಯಾ ಟುಡೇ, ದಿ ಮಿಂಟ್ , ಡೆಕ್ಕನ್ ಹೆರಾಲ್ಡ್ ಗಳ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ವರದಿಗಳ ಪ್ರಕಾರ, ರಾಷ್ಟ್ರಪತಿ ಭವನವು ಫೆಬ್ರವರಿ 12, 2025 ರಂದು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ವಿವಾಹವನ್ನು ಆಯೋಜಿಸಿತ್ತು ಎಂದು ಹೇಳಿವೆ.
ಈ ವರದಿಗಳಲ್ಲಿ ಹೇಳಿದ ಪ್ರಕಾರ, ಸಿಆರ್‌ಪಿಎಫ್‌ನ ಅಧಿಕಾರಿಗಳಾದ ಈ ದಂಪತಿಗಳು ರಾಷ್ಟ್ರಪತಿ ಭವನದ ಮದರ್ ತೆರೇಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಸಣ್ಣ ಮತ್ತು ವಿಶೇಷ ಅತಿಥಿ ಪಟ್ಟಿಯೊಂದಿಗೆ ಸಣ್ಣ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ ಎಂದಿದೆ. ಜೊತೆಗೆ ಪ್ರಸ್ತುತ ರಾಷ್ಟ್ರಪತಿಗಳ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಆಗಿ ನೇಮಕಗೊಂಡಿರುವ ಸಿಆರ್‌ಪಿಎಫ್ ಅಧಿಕಾರಿ ಪೂನಂ ಗುಪ್ತಾ ಅವರ ಕಾರ್ಯಕ್ಷಮತೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಭಾವಿತರಾಗಿದ್ದರು ಮತ್ತು ಹೀಗಾಗಿ ವಿವಾಹ ಸಮಾರಂಭವನ್ನು ರಾಷ್ಟ್ರಪತಿ ಭವನದ ಆವರಣದಲ್ಲಿಯೇ ನಡೆಸಲು ವ್ಯವಸ್ಥೆ ಮಾಡಿದ್ದರು ಎಂದಿದೆ.
Fact
ಈ ಸುದ್ದಿಯ ಸತ್ಯಶೋಧನೆಯನ್ನು ನಡೆಸಲು ನ್ಯೂಸ್ ಚೆಕರ್, ರಾಷ್ಟ್ರಪತಿ ಭವನದ ಅಧಿಕೃತ ಆನ್‌ಲೈನ್ ಡಿಜಿಟಲ್ ಫೋಟೋ ಲೈಬ್ರರಿಯನ್ನು ಹುಡುಕಿದ್ದೇವೆ , ಜನವರಿ 1, 2015 (ಲಭ್ಯವಿರುವ ಆರಂಭಿಕ ದಿನಾಂಕ) ದಿಂದ ಈವರೆಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ನಡೆದ ಮದುವೆಯ ಫೋಟೋಗಳಿಗೆ ಹುಡುಕಾಟ ನಡೆಸಿದ್ದೇವೆ. ಈ ವೇಳೆ ರಾಷ್ಟ್ರಪತಿಗಳ ಮತ್ತು ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕುಟುಂಬಗಳನ್ನು ಒಳಗೊಂಡ ವಿವಾಹ ಸಮಾರಂಭಗಳು ಮತ್ತು ಆರತಕ್ಷತೆಗಳ ನಾಲ್ಕು ಫೋಟೋ ಆಲ್ಬಮ್‌ಗಳನ್ನು ನಾವು ನೋಡಿದ್ದೇವೆ , ಇದರಲ್ಲಿ ಮಾಜಿ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ಮತ್ತು ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.
ಅನಂತರ ನಾವು “Rashtrapati Bhavan first-ever wedding” ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫೆಬ್ರವರಿ 12, 2025 ರಂದು ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೋದ (PIB) ಸತ್ಯ ಪರಿಶೀಲನಾ ಘಟಕವು ಎಕ್ಸ್ ನಲ್ಲಿ ನೀಡಿದ ಸ್ಪಷ್ಟೀಕರಣ ಲಭ್ಯವಾಗಿದೆ. ರಾಷ್ಟ್ರಪತಿ ಭವನವು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ವಿವಾಹವನ್ನು ಆಯೋಜಿಸುತ್ತಿದೆ ಎಂದು ಹಲವಾರು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದು ಅದು ಹೇಳಿದೆ. “ಈ ಹಕ್ಕು ಸುಳ್ಳು. ರಾಷ್ಟ್ರಪತಿಗಳ ಎಸ್ಟೇಟ್ ಆರಂಭದಿಂದಲೂ ಹಲವಾರು ವಿವಾಹಗಳಿಗೆ ಸ್ಥಳವಾಗಿದೆ” ಎಂದು ಪೋಸ್ಟ್ ಹೇಳಿದೆ.
ಫೋಟೋಗಳು ಮತ್ತು ಪಿಐಬಿ ಪೋಸ್ಟ್ ಪ್ರಕಾರ ರಾಷ್ಟ್ರಪತಿ ಭವನದಲ್ಲಿ ಮದುವೆಗಳು ಅಪರೂಪವಾದರೂ, ನಡೆದಿವೆ. ಅವುಗಳು ಸಾಮಾನ್ಯವಾಗಿ ಉನ್ನತ ಶ್ರೇಣಿಯ ಅಧಿಕಾರಿಗಳ ಕುಟುಂಬಗಳನ್ನು ಒಳಗೊಂಡಿರುತ್ತವೆ ಎಂದು ಸಾಬೀತುಪಡಿಸಿವೆ.
Also Read: ಯೋಗಿ ಸರ್ಕಾರ ಮಸೀದಿ ತೆರವುಗೊಳಿಸಿ, ಅಲ್ಲಿ ಶಾಲೆ ನಿರ್ಮಾಣಕ್ಕೆ ಉದ್ದೇಶಿಸಿದೆ ಎನ್ನುವ ಹೇಳಿಕೆ ನಿಜವೇ?
Our Sources
Digital Photo Library, Rashtrapati Bhavan
X post, PIB Fact Check, Dated: February 12, 2025
(ಈ ಲೇಖನವನ್ನು ಮೊದಲ ಬಾರಿ ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)