Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇಂದೋರ್ ನಲ್ಲಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ನಿಂದ ನೀರು ಎರಚಿದ ವೀಡಿಯೋ
ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ನಿಂದ ನೀರು ಎರಚಿದ ವೀಡಿಯೋ ಪೆರುವಿನ ರಾಜಧಾನಿ ಲಿಮಾದ್ದಾಗಿದೆ
ಮಧ್ಯಪ್ರದೇಶದ ಇಂದೋರ್ ನಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ನೀರು ಎರಚುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದಾಗ್ಯೂ, ಈ ವೀಡಿಯೋ ಇಂದೋರ್ ನದ್ದಲ್ಲ, ಬದಲಾಗಿದೆ ದಕ್ಷಿಣ ಅಮೆರಿಕಾದ ದೇಶ ಪೆರುವಿನ ರಾಜಧಾನಿ ಲಿಮಾದಿಂದ ಬಂದಿದೆ ಎಂದು ತನಿಖೆಯಲ್ಲಿ ನಾವು ಕಂಡುಕೊಂಡಿದ್ದೇವೆ.
ದೇಶಾದ್ಯಂತ ನಡೆಸಿದ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶಗಳಲ್ಲಿ ಇಂದೋರ್ ಎಂಟನೇ ಬಾರಿಗೆ ದೇಶದ ಸ್ವಚ್ಛ ನಗರವಾಗಿ ಆಯ್ಕೆಯಾಗಿದೆ. ಇಂದೋರ್ ಅನ್ನು ಸ್ವಚ್ಛ ನಗರವೆಂದು ಘೋಷಿಸಿದ ಅನಂತರ ಕೈಲಾಶ್ ವಿಜಯವರ್ಗಿಯಾ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಇಂದೋರ್ ನಂತರ, ಸೂರತ್ ಮತ್ತು ನವೀ ಮುಂಬೈ ದೇಶದ ಸ್ವಚ್ಛ ನಗರಗಳಾಗಿ ಆಯ್ಕೆಯಾಗಿವೆ.
25 ಸೆಕೆಂಡುಗಳ ಈ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಆಗ ಸಲ್ಲಿ ಹಾದುಹೋಗುವ ಟ್ಯಾಂಕರ್ ವ್ಯಕ್ತಿಯ ಮೇಲೆ ನೀರನ್ನು ಎರಚುತ್ತದೆ. ಈ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಹೇಳಿಕೆಯಲ್ಲಿ, “ಇದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್. ನನಗೆ ಇಷ್ಟವಾಗುವುದೇ ಇಲ್ಲ. ಈಗ ಈ ಸಹೋದರ ತನ್ನ ಜೀವನದಲ್ಲಿ ಮತ್ತೆ ಅಂತಹ ಕೆಲಸವನ್ನು ಮಾಡುವುದಿಲ್ಲ.” ಎಂದಿದೆ.

ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಫೇಸ್ಬುಕ್ ನಲ್ಲೂ ಹಂಚಿಕೊಳ್ಳಲಾಗಿದೆ.

ಇಂದೋರ್ ನಲ್ಲಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ನೀರು ಎರಚುತ್ತಿರುವುದನ್ನು ತೋರಿಸುವ ವೀಡಿಯೋವನ್ನು ತನಿಖೆ ಮಾಡಲು, ನಾವು ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಮಯದಲ್ಲಿ, ದಕ್ಷಿಣ ಅಮೆರಿಕಾದ ದೇಶವಾದ ಪೆರು ಮೂಲದ ಫೇಸ್ಬುಕ್ ಪುಟದಲ್ಲಿ 16 ಮಾರ್ಚ್ 2025 ರಂದು ಅಪ್ಲೋಡ್ ಮಾಡಲಾದ ಈ ವೀಡಿಯೋವನ್ನು ನಾವು ಕಂಡುಹಿಡಿದಿದ್ದೇವೆ. ಇದಕ್ಕಿರುವ ವಿವರಣೆಯಲ್ಲಿ ಈ ಜಾಗಪೆರುವಿನ ಲಾ ವಿಕ್ಟೋರಿಯಾ ಎಂದು ವಿವರಿಸಲಾಗಿದೆ.

ಇದರ ನಂತರ, ಈ ಫೇಸ್ಬುಕ್ ಪೋಸ್ಟ್ನಲ್ಲಿರುವ ಸ್ಪ್ಯಾನಿಷ್ ಶೀರ್ಷಿಕೆಯ ಸಹಾಯದಿಂದ ನಾವು ಗೂಗಲ್ ಸರ್ಚ್ ಮಾಡಿದ್ದೇವೆ. ಈ ಸಮಯದಲ್ಲಿ, ಲಾ ರಿಪಬ್ಲಿಕಾ ಎಂಬ ಸುದ್ದಿ ವೆಬ್ಸೈಟ್ನಲ್ಲಿ 15 ಮಾರ್ಚ್ 2025 ರಂದು ಪ್ರಕಟವಾದ ವರದಿಯನ್ನು ನಾವು ನೋಡಿದ್ದೇವೆ. ಅದರಲ್ಲಿ ವೈರಲ್ ಆದ ವೀಡಿಯೋದ ದೃಶ್ಯಗಳು ಇದ್ದವು. ಈ ಪೋಸ್ಟ್ ನಲ್ಲಿ, ವೀಡಿಯೋವನ್ನು ಪೆರುವಿನ ಮಾಧ್ಯಮ ಪೋರ್ಟಲ್ ಎನ್ಫೋಕೊ ಟಿವಿಗೆ ಕ್ರೆಡಿಟ್ ಮಾಡಲಾಗಿದೆ.

ತನಿಖೆಯಲ್ಲಿ, ಈ ವೀಡಿಯೋವನ್ನು ಮಾರ್ಚ್ 15, 2025 ರಂದು Enfoco TV ಫೇಸ್ಬುಕ್ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. “ಪೆರುವಿನ ರಾಜಧಾನಿ ಲಿಮಾದ ಎಲೆಕ್ಟ್ರಿಕ್ ರೈಲು ಹಳಿಯ ಬಳಿ ವ್ಯಕ್ತಿಯೊಬ್ಬರು ಬೀದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಆತನಿಗೆ ಪಾಠ ಕಲಿಸಲು ಆ ವ್ಯಕ್ತಿಗೆ ನೀರಿನ ಟ್ಯಾಂಕರ್ ನಿಂದ ನೀರು ಎರಚಲಾಯಿತು” ಎಂದಿದೆ.

ವೀಡಿಯೋದಲ್ಲಿ ಒಂದು ಕಟ್ಟಡದ ಮೇಲೆ ಸಿನೆಮಾರ್ಕ್ ಎಂದು ಬರೆದಿರುವುದನ್ನು ನಾವು ನೋಡಬಹುದು. ಅದನ್ನೇ ನಾವು ಲಿಮಾದ ಲಾ ವಿಕ್ಟೋರಿಯಾದಲ್ಲಿನ ರೈಲು ಹಳಿಯ ಬಳಿ ಹುಡುಕಿದೆವು. ಈ ಸಮಯದಲ್ಲಿ, ನಾವು ಈ ಸ್ಥಳ ಏವಿಯೇಷನ್ ಅವೆನ್ಯೂ ಎಂದು ಕಂಡುಕೊಂಡಿದ್ದೇವೆ, ಅದನ್ನು ನೀವು ಈ ಕೆಳಗಿನ ಚಿತ್ರದಲ್ಲಿ ನೋಡಬಹುದು.

ವೈರಲ್ ವೀಡಿಯೋದಲ್ಲಿ ಕಂಡುಬರುವ ದೃಶ್ಯವು ಇಂದೋರ್ ನದ್ದಲ್ಲ, ಬದಲಾಗಿ ದಕ್ಷಿಣ ಅಮೆರಿಕಾದ ದೇಶ ಪೆರುವಿನ ರಾಜಧಾನಿ ಲಿಮಾದಿಂದ ಬಂದಿದೆ ಎಂದು ನಮ್ಮ ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ.
Our Sources
Facebook post By Radio Contacto Sur – Noticias Dated: March 16′ 2025
Facebook post By Enfoco TV Dated: March 15, 2025
Google Street View
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)