Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಮಾಚಲ ಪ್ರದೇಶದಲ್ಲಿ ಚಿಚಾಮ್ ಸೇತುವೆಯನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧೆಡೆ ಇಂತಹ ಕ್ಲೇಮ್ ಗಳು ಕಂಡುಬಂದಿವೆ. ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

ಇದೇ ರೀತಿಯ ಕ್ಲೇಮುಗಳನ್ನು ಇಲ್ಲಿ ಇಲ್ಲಿ ಇಲ್ಲಿ ನೋಡಬಹುದು.



Also Read: ಬಪ್ಪನಾಡು ದೇಗುಲದ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದರೇ, ಸತ್ಯ ಏನು?
ಸತ್ಯಶೋಧನೆಗಾಗಿ ನಾವು ಮೊದಲು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಲಭ್ಯವಾದ ವರದಿಗಳ ಪ್ರಕಾರ, ಚಿಚಾಮ್ ಸೇತುವೆಯನ್ನು 2017ರಲ್ಲೇ ಉದ್ಘಾಟನೆ ಮಾಡಲಾಗಿತ್ತು ಎಂಬುದನ್ನು ಕಂಡುಕೊಂಡಿದ್ದೇವೆ.
ಮೇ 15, 20219ರ ಟೈಮ್ಸ್ ಟ್ರಾವೆಲ್ ವರದಿಯಲ್ಲಿ “ಏಷ್ಯಾದ ಅತಿ ಎತ್ತರದ ಸೇತುವೆಗೆ ಸ್ಪಿಟಿ ವ್ಯಾಲಿ ಮನೆ” ಎಂದಿದ್ದು ಇದರಲ್ಲಿ ಚಿಚಾಮ್ ಸೇತುವೆಯ ನಿರ್ಮಾಣದ ಅವಧಿ 15ಕ್ಕೂ ಹೆಚ್ಚು ವರ್ಷಗಳ ಕಾಲ ನಡೆದಿದ್ದು, 2017ರಲ್ಲಿ ಉದ್ಘಾಟಿಸಲಾಗಿತ್ತು ಎಂದಿದೆ.

15 ಸೆಪ್ಟೆಂಬರ್ 2023ರ ನ್ಯೂಸ್ ನೈನ್ ವರದಿಯಲ್ಲೂ, ಚಿಚಾಮ್ ಸೇತುವೆ 2017ರಲ್ಲಿ ಉದ್ಘಾಟನೆ ಗೊಂಡಿದೆ ಎಂದಿರುವುದನ್ನು ನಾವು ಗಮನಿಸಿದ್ದೇವೆ. ಈ ಪುರಾವೆಗಳ ಪ್ರಕಾರ, ಸೇತುವೆ 2017ರಲ್ಲೇ ಉದ್ಘಾಟನೆಗೊಂಡಿದೆ. ಇದು ಇತ್ತೀಚಿಗೆ ನಿರ್ಮಾಣಗೊಂಡ ಸೇತುವೆ ಅಲ್ಲ ಎಂಬುದು ಗೊತ್ತಾಗಿದೆ.
25 ನವೆಂಬರ್ 2022ರ ದಿ ಕ್ವಿಂಟ್ ವರದಿ ಪ್ರಕಾರ, ಚೀಚಾಮ್ ಸೇತುವೆಯನ್ನು 2017ರಲ್ಲಿ ಉದ್ಘಾಟಿಸಲಾಯಿತು. ಇದು ಸ್ಥಳೀಯ ಜನರಿಗೆ ಪ್ರಯೋಜನಕಾರಿಯಾಗಿದೆ. ಚೀಚಾಮ್ ಗ್ರಾಮ ಮತ್ತು ಕಾಝಾ ಉಪವಿಭಾಗದ ಜನರ ಪ್ರಯಾಣ ಈ ಸೇತುವೆಯಿಂದಾಗಿ 25 ಡಿಗ್ರಿಗಳಷ್ಟು ಕಡಿಮೆಯಾಗಿದೆ ಎಂದಿದೆ.

ಅದೇ ರೀತಿ ಫೆಬ್ರವರಿ 5, 2024ರಂದು ರತನ್ ಧಿಲ್ಲೋನ್ ಎಂಬ ರಾಲಿ ಡ್ರೈವರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಚಿಚಾಮ್ ಸೇತುವೆ 2017ರಲ್ಲಿ ಉದ್ಘಾಟನೆ ಗೊಂಡಿದೆ ಎಂದು ಹೇಳಿರುವುದನ್ನು ಗಮನಿಸಿದ್ದೇವೆ.
ಆದ್ದರಿಂದ ಈ ಪುರಾವೆಗಳ ಪ್ರಕಾರ, ಹಿಮಾಚಲ ಪ್ರದೇಶದ ಚಿಚಾಮ್ ಸೇತುವೆ ಇತ್ತೀಚಿಗೆ ಉದ್ಘಾಟನೆಗೊಂಡಿದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ.
Also Read: ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ?
Our Sources
Report By Times Travel, Dated: May 15, 2019
Report By News nine, Dated: September 15, 2023
Report By The quint, Dated: November 25, 2022
Tweet By Rattan Dhillon, Dated: February 5, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.