ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಆಗಿದೆಯೇ?

ಗೋಮಾಂಸ ರಫ್ತಿನಲ್ಲಿ ಭಾರತ ಬ್ರೆಝಿಲ್‌ ದೇಶವನ್ನೂ ಹಿಂದಿಕ್ಕಿ ನಂ.1  ಸ್ಥಾನ ಪಡೆದಿದೆ ಎಂದು ಹೇಳಲಾಗಿದೆ. ಗೋರಕ್ಷಣೆಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಈಗ ಅತ್ಯಧಿಕ ದೊಡ್ಡ ರಫ್ತುದಾರನಾದ ವೇಳೆ ಗೋರಕ್ಷಕರು ಎಂದೆನಿಸಿಕೊಂಡವರು ಯಾರನ್ನು ಕೇಳುತ್ತಾರೆ ಎಂದು ಪ್ರಶ್ನಿಸಲಾಗಿದೆ.

Is India No.1 in Beef Export?

Fact Check/Verification

ನ್ಯೂಸ್ ಚೆಕರ್‌ ಈ ಬಗ್ಗೆ ಶೋಧನೆಗೆ ಇಳಿದಿದ್ದು, ಮೊದಲು ಗೋಮಾಂಸ, ರಫ್ತು, ಭಾರತ ಎಂಬುದನ್ನು ಎಂಬುದನ್ನು ಸರ್ಚ್ ಮಾಡಿ ನೋಡಿದ್ದು, ಈ ವೇಳೆ ಕೆಲವೊಂದು ಮಾಹಿತಿಗಳು ತಿಳಿದು ಬಂದಿವೆ. “ಪ್ರಜಾವಾಣಿ” ಯ 2015ರ ಸುದ್ದಿಯೊಂದರ ಪ್ರಕಾರ ಗೋಮಾಂಸ ಮಾಂಸ ರಫ್ತಿನಲ್ಲಿ ಭಾರತ ಮುಂಚೂಣಿಯ ಸ್ಥಾನದಲ್ಲಿದೆ. ಆದರೆ ಭಾರತದಲ್ಲಿ ದನದ ಮಾಂಸ ರಫ್ತು 1974ರಿಂದ ನಿಷೇಧವಿದೆ. ಇಲ್ಲಿ ಎಮ್ಮೆ/ಕೋಣದ ಮಾಂಸವನ್ನೂ ಗೋಮಾಂಸ ರಫ್ತು ವರ್ಗಕ್ಕೇ ಸೇರಿಸಲಾಗಿದೆ.

ನ್ಯೂಸ್‌ 18 ಇದರ 2019ರ ಸುದ್ದಿಯಲ್ಲಿ ಭಾರತ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವರದಿಯ ಪ್ರಕಾರ 2017-19ರ ಅವಧಿಯಲ್ಲಿ ಬ್ರೆಝಿಲ್‌ ಮೊದಲನೇ ಸ್ಥಾನಿಯಾಗಿದ್ದರೆ, ಎರಡನೇ ಸ್ಥಾನ ಭಾರತದ್ದು. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ.

ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಆಗಿದೆ

ಈ ವರದಿಯ ಪ್ರಕಾರ 2017ರಲ್ಲಿ18 ಲಕ್ಷ ಮೆಟ್ರಿಕ್​ ಟನ್, 2018ರಲ್ಲಿ 19 ಮೆಟ್ರಿಕ್​ ಲಕ್ಷ ಟನ್​​ ಗೋಮಾಂಸವನ್ನುಭಾರತ ರಫ್ತು ಮಾಡಿದೆ. 2019ರಲ್ಲಿ ಇದು 16 ಲಕ್ಷ ಮೆಟ್ರಿಕ್​ ಟನ್​ಗೆ ಇಳಿಕೆ ಆಗಿದೆ. ಬ್ರೆಜಿಲ್​ 2017ರಲ್ಲಿ 19 ಮೆಟ್ರಿಕ್​ ಟನ್​ ದನದ ಮಾಂಸ ರಫ್ತು ಮಾಡಿದ್ದರೆ, 2019ರಲ್ಲಿ ಈ ಪ್ರಮಾಣ 22 ಲಕ್ಷ ಮೆಟ್ರಿಕ್ ಟನ್​ಗೆ ಏರಿಕೆ ಆಗಿದೆ. ಅಮೆರಿಕದ ಕೃಷಿ ಇಲಾಖೆ ಈ ವರದಿಯನ್ನು ಬಿಡುಗಡೆ ಮಾಡಿದೆ.

ಇನ್ನು ಈ ಕುರಿತ ಇಂಗ್ಲಿಷ್‌ ವರದಿಗಳ ಬಗ್ಗೆ ಪರಿಶೀಲನೆಯನ್ನು ನಾವು ನಡೆಸಿದಾಗ, ದಿ ಪ್ರಿಂಟ್ ಇದರ 2019 ಮಾರ್ಚ್‌ 26ರ ವರದಿ ಪ್ರಕಾರ 2014-15ರಲ್ಲಿ ಅತ್ಯಧಿಕ ಗೋಮಾಂಸವನ್ನು ಭಾರತ ರಫ್ತು ಮಾಡಿದ್ದು 1475 ಮೆಟ್ರಿಕ್‌ ಟನ್‌ ಆಗಿತ್ತು. 2019ರ ವೇಳೆಗೆ ಇದು 1029 ಮೆಟ್ರಿಕ್‌ ಟನ್ ಗೆ ಇಳಿಕೆ ಕಂಡಿತ್ತು.

ಮನಿಕಂಟ್ರೋಲ್‌ ವೆಬ್ನ 2021 ಜೂನ್‌ 23ರ ವರದಿ ಪ್ರಕಾರ ಭಾರತದ ಗೋಮಾಂಸ ರಫ್ತು 9 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. 2012ರಲ್ಲಿ ಭಾರತ ನಂ.2 ಸ್ಥಾನವನ್ನು ಹೊಂದಿದ್ದು, ಅನಂತರ ಇಳಿಕೆಯಾಗಿತ್ತು. 2018ರಲ್ಲಿ ಇದು ಎರಡನೇ ಸ್ಥಾನವನ್ನು ಆಸ್ಟ್ರೇಲಿಯಾಕ್ಕೆ ಬಿಟ್ಟುಕೊಟ್ಟಿತ್ತು.

ಈ ವರದಿಗಳ ಪ್ರಕಾರ ಮತ್ತು ಇತರ ಹಲವು ಅಂಕಿ ಅಂಶ ನೀಡುವ ವೆಬ್ ಸೈಟ್ ಗಳ ವರದಿಯ ಆಧಾರದಲ್ಲಿ ಭಾರತ ಗೋಮಾಂಸ ರಫ್ತಿನಲ್ಲಿ ನಂ.1 ಸ್ಥಾನಕ್ಕೆ ಏರಿಲ್ಲ.

ಗೋಮಾಂಸ ರಫ್ತಿನ ಕುರಿತಾಗಿ 2022 ಜುಲೈ 27ರಂದು ಲೋಕಸಭೆಯಲ್ಲಿ ಸಂಸದ ಎಸ್‌ ವೆಂಕಟೇಶನ್‌ ಅವರು ವಾಣಿಜ್ಯ ಸಚಿವಾಲಯಕ್ಕೆ ಪ್ರಶ್ನೆಯನ್ನು ಕೇಳಿದ್ದು, ಇದರಲ್ಲಿ ಗೋಮಾಂಸ ರಫ್ತಿನಲ್ಲಿ ಭಾರತದ ಸ್ಥಾನ, ರಫ್ತು ಮಾಡುವ ಅತಿದೊಡ್ಡ ಕಂಪೆನಿಗಳು, ಗೋಮಾಂಸ ರಫ್ತಿನ ಮೂಲಕ ಭಾರತ ಸರಕಾರ ಗಳಿಸಿದ ಹಣದ ಮೊತ್ತವನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ ವಾಣಿಜ್ಯ ಸಚಿವಾಲಯ ಗೋಮಾಂಸ ಎಂಬುದರಲ್ಲಿ ಕರು, ದನ, ಎತ್ತುಗಳ ಮಾಂಸದ ರಫ್ತು ನಿಷೇಧಿತ ಪಟ್ಟಿಯಲ್ಲಿದ್ದು ಅವುಗಳನ್ನು ಭಾರತದಿಂದ ರಫ್ತು ಮಾಡಲಾಗುವುದಿಲ್ಲ ಎಂದು ಹೇಳಿದೆ.

ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಆಗಿದೆ
ಲೋಕಸಭೆ ಪ್ರಶ್ನೋತ್ತರ ಅವಧಿಯಲ್ಲಿ ನೀಡಲಾದ ಉತ್ತರ

ಇದರೊಂದಿಗೆ ನ್ಯೂಸ್ ಚೆಕರ್‌ ಟ್ವೀಟರ್‌ ಪೋಸ್ಟ್‌ನಲ್ಲಿ ಹಾಕಲಾದ ಸ್ಕ್ರೀನ್‌ಶಾಟ್‌ ಅನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು ಇದು ನ್ಯೂಸ್‌ ಕನ್ನಡ ಆಪ್ ನಿಂದ ತೆಗೆದಿದ್ದಾಗಿದೆ. ಇದರಲ್ಲಿ ಸುದ್ದಿಯ ಕುರಿತು ಸರ್ಚ್ ಮಾಡಿದಾಗ ಅಂತಹ ಯಾವುದೇ ಸುದ್ದಿಯ ಫಲಿತಾಂಶ ಬಂದಿರುವುದಿಲ್ಲ. ಜೊತೆಗೆ ಈ ಸ್ಕ್ರೀನ್‌ ಶಾಟ್‌ ಪ್ರಕಾರ ಭಾರತ 2015ರಲ್ಲಿ ಅತ್ಯಧಿಕ ಗೋಮಾಂಸ ರಫ್ತು ಮಾಡಿದೆ ಎಂದು ಹೇಳಲಾಗಿದೆ. ಸುದ್ದಿಯ ದಿನಾಂಕವೂ 2015 ಆಗಸ್ಟ್ 16 ಆಗಿದೆ.

Conclusion

ಟ್ವಿಟರ್‌ ಪೋಸ್ಟ್ ಪ್ರಕಾರ ಹೇಳಿದಂತೆ ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಸ್ಥಾನಕ್ಕೇರಿದೆ ಎಂಬುದು ಸುಳ್ಳಾಗಿದೆ. ಇಲ್ಲಿ ತಿಳಿದು ಬರುವುದೇನೆಂದರೆ, ಭಾರತದಿಂದ ಗೋಮಾಂಸದ ಅಡಿಯಲ್ಲಿ ಕರು, ದನದ ಮಾಂಸಗಳನ್ನು ರಫ್ತು ಮಾಡದೇ ಎಮ್ಮೆ/ಕೋಣದ ಮಾಂಸಗಳನ್ನು ರಫ್ತು ಮಾಡಲಾಗುತ್ತಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಇದರ ರಫ್ತು ಇಳಿಕೆಯಾಗಿದ್ದು, ಭಾರತ ನಂ.1 ಸ್ಥಾನಕ್ಕೆ ಏರಿಲ್ಲ.

Result: False

Our Sources
Question hour reply in Lok Sabha by Ministry of Commerce and Industry dated: 27 July 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.