Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬೆಂಗಳೂರು ವಿಧಾನಸೌಧ ಮುಂದೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್-ಕಾರು ಡಿಕ್ಕಿಯಾಗಿದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ.
ಫೇಸ್‌ಬುಕ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆಗೆ ನ್ಯೂಸ್‌ಚೆಕರ್ ಮುಂದಾಗಿದೆ.

ಸತ್ಯಶೋಧನೆ ವೇಳೆ ಇದು ಬೆಂಗಳೂರು ವಿಧಾನಸೌಧ ಮುಂದೆ ನಡೆದಿದ್ದಲ್ಲ, ಬದಲಾಗಿ ಬೆಳಗಾವಿ ವಿಧಾನಸೌಧ ಸನಿಹ ನಡೆದಿದೆ ಎಂದು ತಿಳಿದುಬಂದಿದೆ.
Also Read: ಭಾರತದಲ್ಲಿ ರೆನಾಲ್ಡ್ ಪೆನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಸುದ್ದಿಯೊಂದು ಲಭ್ಯವಾಗಿದೆ.
ಆಗಸ್ಟ್ 18 2023ರ ಪಬ್ಲಿಕ್ ಆಪ್ ಸುದ್ದಿಯಲ್ಲಿ ಬೆಳಗಾವಿ ಗಾಂಧಿನಗರ ಬಳಿ ಕೆಎಸ್‌ಆರ್‌ಟಿಸಿ ಬಸ್-ಕಾರಿನ ಮಧ್ಯೆ ಡಿಕ್ಕಿ; ಕಾರು ಜಖಂ ಎಂದು ಸುದ್ದಿ ಹಾಕಲಾಗಿದೆ. ಈ ಸುದ್ದಿಯಲ್ಲಿರುವ ವೀಡಿಯೋ ವೈರಲ್ ವೀಡಿಯೋವನ್ನು ಹೋಲುತ್ತಿರುವುದನ್ನು ನಾವು ಗಮನಿಸಿದ್ದೇವೆ.
ಆಗಸ್ಟ್ 18, 2023ರ ತರುಣ್ ಭಾರತ್ ವರದಿಯಲ್ಲಿ, ಸುವರ್ಣ ವಿಧಾನಸೌಧ ಸನಿಹದ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್, ಮಾರುತಿ ಬೆಲೆನೊ ಕಾರಿನ ಮಧ್ಯೆ ಅಪಘಾತವಾಗಿದ್ದು, ಕಾರು ನಜ್ಜುಗುಜ್ಜಾಗಿದೆ ಎಂದಿದೆ.

ಇದನ್ನು ಆಧಾರವಾಗಿರಿಸಿ ನಾವು ಅಪಘಾತದ ಕುರಿತ ಎಫ್‌ಐಆರ್ ವರದಿಯನ್ನು ಪೊಲೀಸ್ ಮೂಲಗಳಿಂದ ಪಡೆದುಕೊಂಡಿದ್ದೇವೆ.
ಆ ಪ್ರಕಾರ ಎಫ್‌ಐಆರ್ ಸಂಖ್ಯೆ 0105/2023 ಆಗಿದ್ದು, ಬೆಳಗಾವಿ ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಈ ಎಫ್‌ಐಆರ್ ಪ್ರತಿ ಇಲ್ಲಿದೆ.


ಎಫ್‌ಐಆರ್ ಪ್ರತಿಯ ಪ್ರಕಾರ, ಬೆಳಗಾವಿಯಿಂದ ಹಲಗಾ ಮಾರ್ಗದಲ್ಲಿ ರಾ.ಹೆ.48ರಲ್ಲಿ ಆಗಸ್ಟ್ 18ರಂದು ಅಪಘಾತ ಸಂಭವಿಸಿದೆ. ಈ ಪ್ರಕರಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಬೆಳಗಾವಿ ಸುದ್ದಿಯ ಪತ್ರಕರ್ತ ಮೆಹಬೂಬ ಮಕಂದರ್ ಅವರನ್ನು ಸಂಪರ್ಕಿಸಲಾಗಿದೆ. ಅವರು ಘಟನೆ ಬೆಳಗಾವಿ ಸುವರ್ಣ ವಿಧಾನಸೌಧ ಸನಿಹ ಸಾಗುವ ರಾ.ಹೆ.ಯಲ್ಲಿ ಈ ಘಟನೆ ನಡೆದಿದೆ. ಈ ವೈರಲ್ ವೀಡಿಯೋ ಬೆಂಗಳೂರಿನ ವಿಧಾನಸೌಧದ ಎದುರು ನಡೆದಿದ್ದಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.
Also Read: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?
ಈ ಸತ್ಯಶೋಧನೆಯ ಪ್ರಕಾರ, ಅಪಘಾತ ಪ್ರಕರಣ ಬೆಳಗಾವಿಯಲ್ಲಿ ನಡೆದಿದ್ದು ಬೆಂಗಳೂರು ವಿಧಾನಸೌಧದ ಎದುರು ನಡೆದಿದ್ದಲ್ಲ ಎಂದು ತಿಳಿದುಬಂದಿದೆ.
Our Sources
Report By Public App, Dated: August 18, 2023
Report By Tarun Bharat, Dated: August 18, 2023
FIR Copy of Belagam North Traffic Police station
Conversation with Mehaboob Makander, Journalist from Belagavi Suddi
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 25, 2025
Ishwarachandra B G
September 26, 2025
Ishwarachandra B G
June 7, 2025