Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಸ್ತೆ ಗುಂಡಿಗಳ ಬಗ್ಗೆ ಕರ್ನಾಟಕಾದ್ಯಂತ ಜನರು ಚರ್ಚೆ ನಡೆಸುತ್ತಿರುವಾಗಲೇ, ರಸ್ತೆ ಗುಂಡಿಯ ಕುರಿತು ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಗ್ಯಾರಂಟಿ ಗುಂಡಿಗಳು ಜನರ ಹಾಗೂ ಪ್ರಯಾಣಿಕರ ಜೀವದ ಗ್ಯಾರಂಟಿ ಯನ್ನೇ ಕಸಿದುಕೊಂಡು ಬಿಟ್ಟಿವೆ” ಎಂದಿದೆ. ಈ ಮೂಲಕ ಸದ್ಯ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದಾಗಿ ಗುಂಡಿಗಳು ಹೆಚ್ಚಾಗಿ ಜನರಿಗೆ ಸಮಸ್ಯೆಯಾಗಿದೆ ಎಂದು ಪರೋಕ್ಷವಾಗಿ ಹೇಳಲಾಗಿದೆ.

ಈ ಹೇಳಿಕೆಯೊಂದಿಗಿರುವ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಕರ್ನಾಟಕದ್ದಲ್ಲ ಬದಲಾಗಿ ಇದು ಚೀನದ ವೀಡಿಯೋ ಎಂದು ಗೊತ್ತಾಗಿದೆ.
Also Read: ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಮೇಲೆ ಲಾಠಿ ಚಾರ್ಜ್ ಎಂದು ಮದ್ದೂರು ವೀಡಿಯೋ ವೈರಲ್!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ವಿವಿಧ ವೆಬ್ಸೈಟ್ ಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳುತ್ತಿರುವುದನ್ನು ಕಂಡಿದ್ದೇವೆ.
ಆಗಸ್ಟ್ 5, 2020ರ autobild ಎಂಬ ಸ್ಪಾನಿಷ್ ವೆಬ್ಸೈಟ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಹಾಕಲಾಗಿದೆ. ಇದು ರಸ್ತೆಗುಂಡಿಗಳು ಚಾಲಕರಿಗೆ ದುಸ್ವಪ್ನ ಎಂದು ಹೇಳುತ್ತದೆ.

ಇದೇ ರೀತಿ ಜುಲೈ 13, 2020ರಂದು @shabiba ಎಂಬ ಬಳಕೆದಾರರು ಎಕ್ಸ್ ನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿ ಜುಲೈ 11, 2020ರಲ್ಲಿ 9GAG ನಲ್ಲಿ ಮಾಡಲಾದ ಪೋಸ್ಟ್ ನಲ್ಲಿಯ ವೀಡಿಯೋ ಕೂಡ ವೈರಲ್ ವೀಡಿಯೋವನ್ನು ಹೋಲುತ್ತವೆ.
ಈ ವೀಡಿಯೋಗಳಲ್ಲಿ ಸಾಮಾನ್ಯವಾಗಿ ಕಂಡುಬಂದ ಲೋಗೋ ಒಂದನ್ನು ನಾವು ಗಮನಿಸಿದ್ದು, ಇದರಲ್ಲಿ Pipi shrimp App ಎಂದಿದೆ. ಈ ಆಪ್ ಚೀನ ಮೂಲದ್ದು ಎಂದು ಗೊತ್ತಾಗಿದೆ. ಆದಾಗ್ಯೂ ಈ ವೀಡಿಯೋ ನಿರ್ದಿಷ್ಟವಾಗಿ ಚೀನದ ಯಾವ ಪ್ರದೇಶದ್ದು ಎಂದು ತಿಳಿದುಬಂದಿಲ್ಲ.

ಇದರೊಂದಿಗೆ ವೀಡಿಯೋದಲ್ಲಿ ಮಾಂಡರಿನ್ ಭಾಷೆಯ ಬೋರ್ಡ್ ಗಳನ್ನೂ ನಾವು ಗುರುತಿಸಿದ್ದೇವೆ.

ಆದ್ದರಿಂದ ಈ ವೀಡಿಯೋ ಚೀನ ಮೂಲದ್ದಾಗಿದ್ದು, ಕರ್ನಾಟಕ ಅಥವಾ ಬೆಂಗಳೂರಿಗೆ ಸಂಬಂಧಿಸಿದ್ದಲ್ಲ ಎಂದು ಗೊತ್ತಾಗಿದೆ. ದಾರಿ ತಪ್ಪಿಸುವ ಹೇಳಿಕೆಯೊಂದಿಗೆ ಚೀನ ವೀಡಿಯೋವನ್ನು ರಸ್ತೆ ಗುಂಡಿ ವಿಚಾರದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Also Read: ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಮತಾಂತರ ಮಾಫಿಯಾ ಕೈವಾಡ?
Our Sources
Article by autobild, Dated: August 5, 2020
Post by 9GAG, Dated: July 11, 2020
X post by shabiba, Dated: July 13, 2020
Ishwarachandra B G
November 22, 2025
Ishwarachandra B G
November 21, 2025
Ishwarachandra B G
November 18, 2025