Authors
Claim
ಕಾಶ್ಮೀರದ ಲಾಲ್ ಚೌಕದಲ್ಲಿ ಶ್ರೀ ರಾಮನ ಚಿತ್ರ ಪ್ರದರ್ಶಿಸಲಾಗಿದೆ
Fact
ಶ್ರೀರಾಮನ ಚಿತ್ರ ಪ್ರದರ್ಶಿಸಿರುವುದು ಕಾಶ್ಮೀರದ ಲಾಲ್ ಚೌಕ್ ನಲ್ಲಿ ಅಲ್ಲ, ಬದಲಾಗಿ ಡೆಹ್ರಾಡೂನ್ ನ ಕ್ಲಾಕ್ ಟವರ್ ನಲ್ಲಿ
ಕಾಶ್ಮೀರದ ಲಾಲ್ ಚೌಕ್ ನಲ್ಲಿ ಶ್ರೀ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದಿರುವ ಹೇಳಿಕೆಯಲ್ಲಿ “ಅವರ ಆಳ್ವಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಹೆದರುತ್ತಿದ್ದ ಅದೆ ಲಾಲ್ ಚೌಕ್ ನಲ್ಲಿ ಇಂದು ಪ್ರಭು ಶ್ರೀರಾಮ ಅಜರಾಮರವಾಗಿ ನಿಂತಿದ್ದಾನೆ ಇದು ಮೋದಿಯವರ ತಾಕತ್ತು..!” ಎಂದಿದೆ.
Also Read: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?
ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಕೊಂಡಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು ಡೆಹ್ರಾಡೂನ್ ನ ಕ್ಲಾಕ್ ಟವರ್ ಎಂದು ಕಂಡುಬಂದಿದೆ.
ಜನವರಿ 15, 2024ರ ಮಧು ಕಿ ದುನಿಯಾ 05 ಯೂಟ್ಯೂಬ್ ಚಾನೆಲ್ ವೀಡಿಯೋದಲ್ಲಿ “ಡೆಹ್ರಾಡೂನ್ ಕ್ಲಾಕ್ ಟವರ್” ಎಂದು ವೀಡಿಯೋ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.
ಇದನ್ನು ಪರಿಗಣಿಸಿ ನಾವು ವೈರಲ್ ವೀಡಿಯೋ ಮತ್ತು ಯೂಟ್ಯೂಬ್ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕ್ಲಾಕ್ ಟವರ್ ಮಾದರಿ ಮತ್ತು ಅದರ ಹಿಂದಿರುವ ಬೋರ್ಡ್ ಒಂದೇ ರೀತಿಯಿರುವುದು ಗಮನಿಸಿದ್ದೇವೆ.
ಇದರೊಂದಿಗೆ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವಿವಿಧ ವರದಿಗಳು ಲಭ್ಯವಾಗಿವೆ.
ಜನವರಿ 18, 2024ರ ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠೆ ನಡೆಯಲಿರುವಂತೆಯೇ, ಡೆಹ್ರಾಡೂನ್ ಕ್ಲಾಕ್ ಟವರ್ ನಲ್ಲಿ ಬುಧವಾರ ರಾತ್ರಿ ಲೈಟಿಂಗ್ ಗಳ ಮೂಲಕ ರಾಮನ ಚಿತ್ರವನ್ನು ತೋರಿಸಲಾಗಿದೆ. ಜನ ನಿಬಿಡ ರಸ್ತೆ ಮಧ್ಯೆ ಇರುವ ಕ್ಲಾಕ್ ಟವರ್ ನಲ್ಲಿ ಪ್ರಾಜೆಕ್ಟರ್ ಮೂಲಕ ವಿವಿಧ ಚಿತ್ರಗಳನ್ನು ಮೂಡಿಸಲಾಗಿದೆ ಎಂದಿದೆ.
Also Read: ರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ ‘ಪಪ್ಪು’ ಎಂದು ಕರೆದಿದೆಯೇ?
ಜನವರಿ 18, 2024ರ ಪರ್ದಾಪಾಶ್ ವರದಿ ಪ್ರಕಾರ, “ಡೆಹ್ರಾಡೂನ್ ಕ್ಲಾಕ್ ಟವರ್ ನಲ್ಲಿ ಭಗವಾನ್ ರಾಮನ ಅದ್ಭುತ ಚಿತ್ರಗಳನ್ನು ಪ್ರದರ್ಶಿಸಲಾಗಿದೆ” ಎಂದಿದೆ.
ನಾವು ಕಾಶ್ಮೀರದ ಶ್ರೀನಗರದ ಕ್ಲಾಕ್ ಟವರ್ ನ ಚಿತ್ರಗಳನ್ನೂ ಪರಿಶೀಲಿಸಿದ್ದು, ಇದು ಡೆಹ್ರಾಡೂನ್ ಕ್ಲಾಕ್ ಟವರ್ ಗಿಂತ ಭಿನ್ನವಾಗಿದೆ ಎಂಬುದನ್ನು ಗುರುತಿಸಿದ್ದೇವೆ. ಇವುಗಳ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಇದು ಡೆಹ್ರಾಡೂನ್ ಕ್ಲಾಕ್ ಟವರ್ ಆಗಿದ್ದು, ಇದು ಕಾಶ್ಮೀರದ ಲಾಲ್ ಚೌಕ್ ಅಲ್ಲ ಎಂದು ತಿಳಿದುಬಂದಿದೆ.
Also Read: ಸೀತಾದೇವಿಯ ಜನಕಪುರಿಯಿಂದ ಅಯೋಧ್ಯೆಗೆ ಯಾತ್ರೆ ನಡೆದಿದೆಯೇ, ಸತ್ಯ ಏನು?
Result: False
Our Sources:
YouTube Video By Madhu ki duniya05, Dated: January 15, 2024
Report By Hindustan Times, Dated: January 18, 2024
Report By Pardaphash, Dated: January 18, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.