Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿತು
Fact
ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿತು ಎಂಬ ಹೇಳಿಕೆ ತಪ್ಪಾಗಿದೆ. ವೈರಲ್ ವೀಡಿಯೋ 2012ರ ಸಿರಿಯಾದಲ್ಲಿ ನಡೆದ ದಂಗೆಯ ಸಮಯದ್ದು ಮತ್ತು ಅಂತಿಮಯಾತ್ರೆ ವೇಳೆ ನಡೆದ ಕಾರ್ ಬಾಂಬ್ ಸ್ಫೋಟದ್ದಾಗಿದೆ
ಮೃತ ಉಗ್ರನ ದೇಹದಲ್ಲಿ ಬಾಂಬ್ ಇಟ್ಟು ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ಸ್ಫೋಟ ನಡೆಸಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಸತ್ತ ಉಗ್ರನ ಮೃತದೇಹದಲ್ಲಿ ಟೈಂ ಬಾಂಬ್ ಇಟ್ಟು ಪ್ಯಾಲೆಸ್ತೀನ್ ಗೆ ಪಾರ್ಸಲ್ ಕಳಿಸಿದ ಇಸ್ರೇಲ್, ಮುಂದಿನ ದೃಶ್ಯ ನಿಮ್ಮ ಕಣ್ಣುಗಳ ಮುಂದೆಯೇ ಇದೆ” ಎಂದಿದೆ. ಮೃತ ಉಗ್ರನ ದೇಹದಲ್ಲಿ ಬಾಂಬ್ ಇಟ್ಟು ಅದನ್ನು ಸ್ಫೋಟಿಸಿರುವುದರಿಂದ ಅಂತಿಮ ಯಾತ್ರೆ ವೇಳೆ ಉಗ್ರ ಬೆಂಬಲಿಗರನ್ನು ಸಾಯಿಸಲಾಗಿದೆ ಎಂಬರ್ಥದಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ.
Also Read: ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ?

ಇದೇ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಪ್ ಟಿಪ್ ಲೈನ್ (+91-9999499044) ಮೂಲಕ ಬಳಕೆದಾರರೊಬ್ಬರು ವಿನಂತಿಸಿದ್ದಾರೆ. ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಹೇಳಿಕೆ, ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಸಿರಿಯಾದ್ದು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ. ಎನ್ ಬಿಸಿ ನ್ಯೂಸ್ ಜುಲೈ 2, 2012ರ ವರದಿಯಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ನಡೆದ ಅಂತಿಮ ಯಾತ್ರೆಯ ವೇಳೆ ಬಾಂಬ್ ಒಂದು ಸ್ಫೋಟಿಸಿದ ಬಗ್ಗೆ ವರದಿಯಲ್ಲಿದೆ. ಸಿರಿಯಾದಲ್ಲಿನ ಆಂತರಿಕ ಕಲಹದ ವೇಳೆ ಈ ವಿದ್ಯಮಾನ ಸಂಭವಿಸಿದೆ ಎಂದು ವರದಿಯಲ್ಲಿದೆ.

ನಂತರ ನಾವು ಇನ್ನಷ್ಟು ಕೀವರ್ಡ್ ಸರ್ಚ್ ಗಳನ್ನು ಮಾಡಿದ್ದೇವೆ. ಸಿಎನ್‌ಎನ್ ಜುಲೈ 1, 2012ರ ವರದಿಯಲ್ಲಿ, ಸಿರಿಯಾದಲ್ಲಿ ಸರ್ಕಾರದ ವಿರುದ್ಧ ಹೋರಾಟಗಾರನೊಬ್ಬನ ಅಂತಿಮ ಯಾತ್ರೆ ವೇಳೆ ಕಾರ್ ಬಾಂಬ್ ನಿಂದಾಗಿ 85 ಮಂದಿ ಮೃತಪಟ್ಟು 300ಕ್ಕೂ ಹೆಚ್ಚು ಮಂದಿ ಗಾಯಗೊಂಡ ವಿದ್ಯಮಾನ ಸಂಭವಿಸಿದೆ. ಈ ಬಾಂಬ್ ದಾಳಿಯನ್ನು ಸರ್ಕಾರ ಮಾಡಿದೆ ಎಂದು ವಿಪಕ್ಷದ ಹೋರಾಟಗಾರರು ಹೇಳಿದ್ದಾರೆ ಎಂದು ವರದಿಯಲ್ಲಿದೆ.

ಲಾಸ್ ಏಂಜಲೀಸ್ ಟೈಮ್ಸ್ ಜೂನ್ 30, 2012ರ ವರದಿಯಲ್ಲಿ ಸಿರಿಯಾದ ಜಮಾಲ್ಕಾ ಪಟ್ಟಣದಲ್ಲಿ ಶನಿವಾರ ಸಂಜೆ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 85 ಜನರು ಸಾವನ್ನಪ್ಪಿದ್ದಾರೆ ಎಂದು ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಗುಂಪುಗಳು ತಿಳಿಸಿವೆ. ಅದಕ್ಕೂ ಹಿಂದಿನ ದಿನ ಡಮಾಸ್ಕಸ್ ಬಳಿಕ ಪಟ್ಟಣವೊಂದರ ನಿವಾಸಿ ಸರ್ಕಾರಿ ಪಡೆಗಳಿಂದ ಹತನಾದ ವ್ಯಕ್ತಿಯ ಅಂತಿಮ ಯಾತ್ರೆ ವೇಳೆ ಗೌರವಿಸಲು ಜನರು ಸೇರಿದ್ದರು ಎಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಜಮಾಲ್ಕಾದ ಕಾರ್ಯಕರ್ತ ಅಬು ಒಮರ್ ಹೇಳಿದ್ದಾರೆ. ಸರ್ಕಾರಿ ಪಡೆಗಳು ತಮ್ಮ ಚೆಕ್‌ಪಾಯಿಂಟ್‌ಗಳಿಂದ ಪಟ್ಟಣವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ಸ್ಥಳೀಯ ನಿವಾಸಿ ಅಬ್ದುಲ್ ಹದಿ ಹಲಾಬಿ ಗುಂಡೇಟಿನಿಂದ ಮೃತಪಟ್ಟಿದ್ದರು ಎಂದಿದೆ.

ಇದೇ ರೀತಿಯ ವರದಿಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಸಾಕ್ಷ್ಯಗಳ ಪ್ರಕಾರ, ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿತು ಎನ್ನುವುದು ತಪ್ಪಾಗಿದೆ. ವೈರಲ್ ವೀಡಿಯೋ 2012ರ ಸಿರಿಯಾ ದಂಗೆಯ ಸಮಯದ್ದಾಗಿದ್ದು ಸಿರಿಯಾದ ಡಮಾಸ್ಕಸ್ ನಲ್ಲಿ ಸರ್ಕಾರಿ ವಿರೋಧಿ ಹೋರಾಟಗಾರನೊಬ್ಬನ ಅಂತಿಮಯಾತ್ರೆ ವೇಳೆ ನಡೆದ ಕಾರ್ ಬಾಂಬ್ ಸ್ಫೋಟದ್ದಾಗಿದೆ.
Our Sources
Video report By NBC News, Dated: July 2, 2012
Report By CNN, Dated: July 1, 2012
Report By Los Angeles Times, Dated: June 30, 2012
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.