Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಮೆರಿಕ ಇರಾನ್ ನ ಫೊರ್ಡೋ ಪರಮಾಣು ಘಟಕದ ಮೇಲೆ ದಾಳಿ ಮಾಡಿದ ದೃಶ್ಯ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಈ ಪೋಸ್ಟ್ ನಲ್ಲಿ, “ಅಮೆರಿಕ ಇರಾನ್ನ ಫೋರ್ಡೊವನ್ನು ನಾಶಮಾಡಿತು. ಈಗ ಒಂದು ದೃಶ್ಯ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಫೋರ್ಡೊ ಮುಗಿದಿದೆ ಎಂದು…..” ಎಂದಿದೆ.


ಈ ಪೋಸ್ಟ್ ಗಳನ್ನು ಇಲ್ಲಿ ಇಲ್ಲಿ ನೋಡಬಹುದು.
Also Read: ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ವೇದಿಕೆ ಮೇಲೆ ಅವಕಾಶ ಸಿಕ್ಕಿಲ್ಲವೇ?
ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇರಾನ್ ಫೊರ್ಡೋ ಸ್ಥಾವರದ ಮೇಲೆ ದಾಳಿ ಮಾಡಿದ ದೃಶ್ಯವಲ್ಲ ಬದಲಾಗಿ ಸಿರಿಯಾದ ಗುರಿಯ ಮೇಲೆ ಇಸ್ರೇಲ್ ದಾಳಿ ಮಾಡಿದ್ದ ದೃಶ್ಯ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ವೈರಲ್ ವೀಡಿಯೋ ಹೋಲುವ ವೀಡಿಯೋ ಒಳಗೊಂಡ ಸ್ಕೈ ನ್ಯೂಸ್ ಆಸ್ಟ್ರೇಲಿಯಾದ ಯೂಟ್ಯೂಬ್ ವೀಡಿಯೋ ಪತ್ತೆಯಾಗಿದೆ.
ಡಿಸೆಂಬರ್ 17, 2024ರ ಈ ವೀಡಿಯೋದಲ್ಲಿ, ಭಾರೀ ಬಾಂಬ್ ದಾಳಿಯ ದೃಶ್ಯವಿದೆ. ಇದಕ್ಕೆ ನೀಡಲಾದ ವಿವರಣೆಯಲ್ಲಿ “ಸಿರಿಯಾ ಮೇಲೆ ಇಸ್ರೇಲಿ ದಾಳಿ ಭೂಕಂಪ ಸಂವೇದಕಗಳಿಂದ ಪತ್ತೆಯಾಗಿದೆ” ಎಂದಿದೆ.

ಇದನ್ನು ಸಾಕ್ಷ್ಯವನ್ನಾಗಿಟ್ಟುಕೊಂಡು ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಲಭ್ಯವಾದ ಮಾಧ್ಯಮ ವರದಿಗಳು ಇದು ಇಸ್ರೇಲ್ ಸಿರಿಯಾ ಮೇಲೆ ನಡೆಸಿದ ಬಾಂಬ್ ದಾಳಿಯ ದೃಶ್ಯ ಎಂಬುದನ್ನು ಖಚಿತಪಡಿಸಿದೆ.
ಡಿಸೆಂಬರ್ 16, 2024ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, ಸಿರಿಯಾದ ಟಾರ್ಟಸ್ ಪ್ರದೇಶದಲ್ಲಿ ಇಸ್ರೇಲ್ ತೀವ್ರವಾದ ವೈಮಾನಿಕ ದಾಳಿಗಳನ್ನು ನಡೆಸಿತು. ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ವಾಯು ರಕ್ಷಣಾ ಮತ್ತು ಕ್ಷಿಪಣಿ ಸಂಗ್ರಹಣಾ ಸೌಲಭ್ಯಗಳನ್ನು ನಾಶಪಡಿಸಿದೆ ಎಂದು ವರದಿಯಾಗಿದೆ ಎಂದಿದೆ. ಈ ವರದಿಯ ಶೀರ್ಷಿಕೆಯಲ್ಲಿ ಇಸ್ರೇಲ್ ಸಿರಿಯಾ ಮೇಲೆ ಬೃಹತ್ ಭೂಕಂಪ ಬಾಬ್ ಹಾಕಿದೆ. ಇದರ ಪರಿಣಾಮ ರಿಕ್ಟರ್ ಮಾಪಕದಲ್ಲಿ ಪತ್ತೆ ಎಂದಿದೆ.

ಡಿಸೆಂಬರ್ 16, 2024ರಂದು OSINTdefender ಎಕ್ಸ್ ಪೋಸ್ಟ್ ನಿಂದಲೂ ವೈರಲ್ ವೀಡಿಯೋ ಹೋಲುವ ವೀಡಿಯೋ ಪೋಸ್ಟ್ ಮಾಡಲಾಗಿದ್ದು ವಾಯುವ್ಯ ಸರಿಯಾದ ಟಾರ್ಟಸ್ ನಲ್ಲಿ ಸಿರಿಯಾ ಶಸ್ತ್ರಾಸ್ತ್ರ ಸಂಗ್ರಹಾರಗಳ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯ ದೃಶ್ಯವಾಗಿದೆ. ಇದರಿಂದಾಗಿ ಸನಿಹದ ಭೂಕಂಪ ಮಾಪನದಲ್ಲಿ 3.0 ತೀವ್ರತೆಯ ಕಂಪನ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ ಎಂದಿದೆ.
ಇದೇ ರೀತಿಯ ವರದಿಗಳನ್ನು ವಿವಿಧ ಮಾಧ್ಯಮಗಳೂ ಮಾಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಸಾಕ್ಷ್ಯಾಧಾರಗಳ ಪ್ರಕಾರ, ಅಮೆರಿಕ ಇರಾನ್ ನ ಫೊರ್ಡೋ ಪರಮಾಣು ಘಟಕದ ಮೇಲೆ ದಾಳಿ ಮಾಡಿದ ದೃಶ್ಯ ಎಂದು ಹಂಚಿಕೊಳ್ಳಲಾಗುತ್ತಿರುವ ದೃಶ್ಯ ನಿಜವಾದ್ದಲ್ಲ. ಇದು ಸಿರಿಯಾ ಮೇಲೆ ಇಸ್ರೇಲ್ 2024ರ ಡಿಸೆಂಬರ್ ಹೊತ್ತಿಗೆ ನಡೆಸಿದ ದಾಳಿಯಾಗಿದೆ ಎಂದು ತಿಳಿದುಬಂದಿದೆ.
Our Sources
YouTube video By Sky News Australia, Dated: December 17, 2024
Report By Times of India, Dated: December 16, 2024
X post By OSINTdefender, Dated: December 16, 2024
Ishwarachandra B G
November 8, 2025
Ishwarachandra B G
November 7, 2025
Ishwarachandra B G
October 29, 2025