Fact Check: ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್‌ ಆಫ್‌ ಸುನ್ನಿ ಮುಸ್ಲಿಂ ಸಂಘಟನೆ ನೆರವು ನೀಡಿದೆಯೇ?

ಅಸೋಸಿಯೇಷನ್‌ ಆಫ್‌ ಸುನ್ನಿ ಮುಸ್ಲಿಂ, ಮತದಾನ, ಕರ್ನಾಟಕ, ನೆರವು,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್‌ ಆಫ್‌ ಸುನ್ನಿ ಮುಸ್ಲಿಂ ಸಂಘಟನೆ ನೆರವು

Fact
ದುಬೈನ ಅಸೋಸಿಯೇ‍ಷನ್‌ ಆಫ್‌ ಸುನ್ನಿ ಮುಸ್ಲಿಂ ಸಂಘಟನೆ ಹೆಸರಲ್ಲಿ ಹೊರಡಿಸಲಾಗಿದೆ ಎನ್ನುವ ಪತ್ರವು ನಕಲಿಯಾಗಿದೆ. ಇಂತಹ ಸಂಘಟನೆ ಅಸ್ತಿತ್ವದಲ್ಲಿರುವ ಬಗ್ಗ ಸಾಕ್ಷ್ಯವಿಲ್ಲ. ಪತ್ರದಲ್ಲಿ ನೀಡಲಾದ ಸಂಪರ್ಕ ಸಂಖ್ಯೆಯೂ ನಿಜವಲ್ಲ

ದುಬೈ ಮೂಲದ ಮುಸ್ಲಿಂ ಸಂಘಟನೆಯೊಂದು ಲೋಕಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪುನರುಸ್ಥಾಪನೆಗಾಗಿ’ ಕರ್ನಾಟಕಕ್ಕೆ ತೆರಳುವ ಮುಸ್ಲಿಮರಿಗೆ ಆರ್ಥಿಕ ನೆರವು ಘೋಷಿಸಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆದಾಗ್ಯೂ, ವೈರಲ್ ಪತ್ರ ನಕಲಿ ಎಂದು ನಮ್ಮ ತನಿಖೆಯಲ್ಲಿ ನಾವು ಕಂಡುಕೊಂಡಿದ್ದೇವೆ. ಪತ್ರದಲ್ಲಿ ಉಲ್ಲೇಖಿಸಲಾದ ಮೊಬೈಲ್ ಸಂಖ್ಯೆಗಳು ಮತ್ತು ವಿಳಾಸಗಳು ಆ ಸಂಘಟನೆಗೆ ಸೇರಿಲ್ಲ.

ಲೋಕಸಭಾ ಚುನಾವಣೆಯ ಮೂರನೇ ಹಂತವು ಮೇ 7 ರಂದು ಕೊನೆಗೊಂಡಿದೆ. 93 ಲೋಕಸಭಾ ಕ್ಷೇತ್ರಗಳ ಪೈಕಿ ಕರ್ನಾಟಕದ 14, ಗುಜರಾತಿನ 25, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಮಧ್ಯಪ್ರದೇಶದ 9, ಛತ್ತೀಸ್ಗಢದ 7, ಬಿಹಾರದ 5 ಮತ್ತು ಇತರ ಕೆಲವು ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ಅವಧಿಯಲ್ಲಿ ಸುಮಾರು 62.1% ಮತದಾನ ದಾಖಲಾಗಿದೆ.

ವೈರಲ್ ಆಗಿರುವ ಪತ್ರದ ಮೇಲ್ಭಾಗದಲ್ಲಿ ಇಂಗ್ಲಿಷ್ ನಲ್ಲಿ “ಅಸೋಸಿಯೇಷನ್ ಆಫ್ ಸುನ್ನಿ ಮುಸ್ಲಿಮ್ಸ್” ಎಂದು ಬರೆಯಲಾಗಿದೆ ಮತ್ತು ಅದರ ಕೆಳಗೆ ಹಿಂದಿ ಮತ್ತು ಇಂಗ್ಲಿಷ್ ಅನುವಾದವಿದೆ. ಅಲ್ಲದೆ, ವಿಳಾಸ “#2-11 ನೇ ಸ್ಟ್ರೀಟ್, ಖಾಲಿದ್ ಬಿನ್ ವಾಲಿದ್ ರಸ್ತೆ, ಪ್ಲಾಟ್ ನಂ. ಉಮ್ ಹುರೈರ್ ಒನ್, ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್ ” ಎಂದಿದೆ. ಈ ಪತ್ರದ ದಿನಾಂಕ ಏಪ್ರಿಲ್ 29, 2024 ಆಗಿದೆ.

Also Read: ಕೇರಳದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹನ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಲುಂಗಿಗೆ ಬೆಂಕಿ ಬಿದ್ದಿದೆಯೇ? ನಿಜಾಂಶ ಇಲ್ಲಿದೆ

ಪತ್ರವು ಇಂಗ್ಲಿಷ್ ಮತ್ತು ಉರ್ದು ಪಠ್ಯಗಳ ಅನುವಾದವನ್ನು ಹೊಂದಿದೆ, “ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಮೇ 7 ರಂದು ನಡೆದ ಭಾರತೀಯ ಚುನಾವಣೆಯಲ್ಲಿ ಮತ ಚಲಾಯಿಸಿದ ಮುಸ್ಲಿಮರಿಗೆ ಟಿಕೆಟ್ ಬುಕಿಂಗ್ ಮತ್ತು ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್ಗಳಿಗೆ ಅಸೋಸಿಯೇಷನ್ ಆಫ್ ಸುನ್ನಿ ಮುಸ್ಲಿಮ್ಸ್ (ದುಬೈ) ಸಂಪೂರ್ಣ ಆರ್ಥಿಕ ಸಹಾಯವನ್ನು ಘೋಷಿಸುತ್ತದೆ. ಈ ಚುನಾವಣೆಗಳಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವುದು ಮತ್ತು ಮುಸ್ಲಿಮರ ನಿಜವಾದ ಸ್ನೇಹಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ, ಕರ್ನಾಟಕದ ಹುಬ್ಬಳ್ಳಿ, ಕಾರವಾರ ಮತ್ತು ಶಿವಮೊಗ್ಗ ಜಿಲ್ಲೆಗಳ ಜನರಿಗೆ ಮೂರು ವಿಭಿನ್ನ ಮೊಬೈಲ್ ಸಂಖ್ಯೆಗಳನ್ನು ಸಹ ನೀಡಲಾಗಿದೆ. ವೈರಲ್ ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

Fact Check: ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್‌ ಆಫ್‌ ಸುನ್ನಿ ಮುಸ್ಲಿಂ ಸಂಘಟನೆ ನೆರವು ನೀಡಿದೆಯೇ?

Fact Check/Verification

ವೈರಲ್ ಹೇಳಿಕೆಯ ಬಗ್ಗೆ ತನಿಖೆ ನಡೆಸಲು ನ್ಯೂಸ್ಚೆಕರ್ ಮೊದಲು ಪತ್ರದಲ್ಲಿ ಇರುವ ಮುಸ್ಲಿಂ ಸಂಘಟನೆಯ ಬಗ್ಗೆ ಹುಡುಕಿದೆ. ಈ ಸಮಯದಲ್ಲಿ, ಅಂತರ್ಜಾಲದಲ್ಲಿ ದುಬೈನ ಸುನ್ನಿ ಮುಸ್ಲಿಂ ಸಂಘಟನೆಯಗೆ ಸಂಬಂಧಿಸಿದ ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ.

ಇದರ ನಂತರ, ವೈರಲ್ ಪತ್ರದಲ್ಲಿರುವ ವಿಳಾಸದ ಸಹಾಯದಿಂದ ನಾವು ಈ ಸಂಸ್ಥೆ ಎಲ್ಲಿದೆ ಎಂಬುದನ್ನು ಹುಡುಕಿದ್ದೇವೆ ಮತ್ತು ಈ ವಿಳಾಸವು ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ದುಬೈನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಪ್ರಧಾನ ಕಚೇರಿಯದ್ದು ಎಂದು ಕಂಡುಕೊಂಡಿದ್ದೇವೆ.

Fact Check: ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್‌ ಆಫ್‌ ಸುನ್ನಿ ಮುಸ್ಲಿಂ ಸಂಘಟನೆ ನೆರವು ನೀಡಿದೆಯೇ?

ವೈರಲ್ ಪತ್ರದಲ್ಲಿರುವ ಮೊಬೈಲ್ ಸಂಖ್ಯೆಗಳೂ ನಕಲಿ

ನಮ್ಮ ತನಿಖೆಯ ವೇಳೆ ನಾವು ವೈರಲ್ ಪತ್ರದಲ್ಲಿನ ಸಂಖ್ಯೆಗಳನ್ನು ಸಹ ಸಂಪರ್ಕಿಸಿದ್ದೇವೆ. ಈ ಸಮಯದಲ್ಲಿ, ನಾವು ಪತ್ರದ ಮೇಲ್ಭಾಗದಲ್ಲಿರುವ ಸಂಖ್ಯೆಯನ್ನು ವಾಟ್ಸಾಪ್ ಸಹಾಯದಿಂದ ಮೊಹಮ್ಮದ್ ಫಯಾಜ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಈ ಸಂಖ್ಯೆಯು ಕಾಫಿ ಯಂತ್ರಗಳನ್ನು ಮಾರಾಟ ಮಾಡುವ ಡಾಲ್ಮೇರ್ ಎಂಬ ಕಂಪನಿಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಕಂಪನಿಯ ಇನ್ಸ್ಟಾಗ್ರಾಮ್ ಖಾತೆಯನ್ನು ಸಹ ಪತ್ತೆ ಮಾಡಿದ್ದು, ಅದರಲ್ಲಿ ವೈರಲ್ ಪತ್ರದಲ್ಲಿರುವ ಸಂಖ್ಯೆಯೂ ಇರುವುದನ್ನು ಗುರುತಿಸಿದ್ದೇವೆ.

Fact Check: ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್‌ ಆಫ್‌ ಸುನ್ನಿ ಮುಸ್ಲಿಂ ಸಂಘಟನೆ ನೆರವು ನೀಡಿದೆಯೇ?

ಆನಂತರ, ನಾವು ಆ ಕಂಪನಿಯನ್ನು ಸಂಪರ್ಕಿಸಿದ್ದೇವೆ. “ನಾವು ಪತ್ರದಲ್ಲಿ ಉಲ್ಲೇಖಿಸಲಾದ ಸಂಸ್ಥೆಗೆ ಸೇರಿದವರಲ್ಲ. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.” ಎಂದವರು ಸ್ಪಷ್ಟಪಡಿಸಿದ್ದಾರೆ.

ನಮ್ಮ ತನಿಖೆಯಲ್ಲಿ ವೈರಲ್ ಪತ್ರದಲ್ಲಿರುವ ಇತರ ಎರಡೂ ಸಂಖ್ಯೆಗಳನ್ನು ಸಂಪರ್ಕಿಸಲು ನಾವು ಪ್ರಯತ್ನಿಸಿದ್ದೇವೆ. ಅವರು ಪ್ರತಿಕ್ರಿಯಿಸಿದಾಗ ಈ ಲೇಖನವನ್ನು ನವೀಕರಿಸಲಾಗುತ್ತದೆ.

Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?

Conclusion

ತನಿಖೆಯಲ್ಲಿ ಸಂಗ್ರಹಿಸಿದ ಪುರಾವೆಗಳು ವೈರಲ್ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದೆ, ಏಕೆಂದರೆ ಪತ್ರದಲ್ಲಿ ಹೇಳಲಾದ ಸಂಘಟನೆಯ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿಲ್ಲ.

Result: False

Our Sources
Address mentioned on Google

Telephonic Conversation with mentioned number

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟವಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.