Fact Check: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಪೂರ್ಣ ವೀಡಿಯೋ ವೈರಲ್  

ಮಲ್ಲಿಕಾರ್ಜುನ ಖರ್ಗೆ, ವೀಡಿಯೋ, ಕಾಂಗ್ರೆಸ್‌,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವೀಡಿಯೋ ಒಂದು ವೈರಲ್ ಆಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂಬುದನ್ನು ಅವರೇ ಹೇಳಿದ್ದಾರೆ ಎಂಬಂತೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಾಟ್ಸಾಪ್‌ ನಲ್ಲಿ ಕಂಡು ಬಂದ ಹೇಳಿಕೆಯಲ್ಲಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂದು ಅದರ ಅಧ್ಯಕ್ಷ ಖರ್ಗೆ ಯವರ ಬಾಯಿ ಇಂದಲೇ ಕೇಳಿ. ಕಾಂಗ್ರೆಸ್ ಹಿಂದೂಗಳ ಮನೆಗೆ ನುಗ್ಗಿ, ಅಲ್ಲಿರುವ ಬೀರುಗಳ ಬಾಗಿಲು ತೆರೆದು ಅಲ್ಲಿರುವ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಮುಸಲ್ಮಾನರಿಗೆ ಹಂಚುತ್ತದೆ. ಹಿಂದೂಗಳಿಗೆ ಕಡಿಮೆ ಮಕ್ಕಳಿದ್ದರೆ ಕಾಂಗ್ರೆಸ್ ಏನು ಮಾಡಲಿಕ್ಕೆ ಆಗುತ್ತದೆ!? ಅರ್ಥ ಆಯಿತಾ ಹಿಂದೂಗಳೇ!! ಇನ್ನೂ ಸ್ಪಷ್ಟವಾಗಿ ಹೇಳಬೇಕಾ” ಎಂದಿದೆ.

ವೈರಲ್‌ ಆಗಿರುವ 28 ಸೆಕೆಂಡುಗಳ ಈ ವೀಡಿಯೊದಲ್ಲಿ, ಕಾಂಗ್ರೆಸ್ ಜನರು ನಿಮ್ಮ ಮನೆಗೆ ನುಗ್ಗಿ, ಕಬೋರ್ಡ್ ಅನ್ನು ಮುರಿದು, ಎಲ್ಲ ಹಣವನ್ನು ತೆಗೆದು ಎಲ್ಲರಿಗೂ ಹಂಚುತ್ತಾರೆ. ಮುಸ್ಲಿಮರಿಗೂ ಕೊಡುತ್ತಾರೆ. ಅವರಿಗೆ ಹೆಚ್ಚು ಮಕ್ಕಳು ಇರುವುದರಿಂದ ಅವರಿಗೆ ಹೆಚ್ಚು ಸಿಗುತ್ತದೆ. ಭಾಯಿ ನಿಮ್ಮ ಬಳಿ ಮಕ್ಕಳಿಲ್ಲದಿದ್ದರೆ ನಾನೇನು ಮಾಡಬೇಕು? ಎಂದು ಖರ್ಗೆಯವರು ಹೇಳುವುದು ಕೇಳಿಸುತ್ತದೆ.

ಈ ವೈರಲ್‌ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್‌ ಲೈನ್‌ (+919999499044)  ಗೆ ಮನವಿ ಬಂದಿದ್ದು, ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.

Fact Check: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಪೂರ್ಣ ವೀಡಿಯೋ ವೈರಲ್  
ವಾಟ್ಸಾಪ್‌ನಲ್ಲಿ ಕಂಡುಬಂದ ಕ್ಲೇಮ್‌

ಇದೇ ರೀತಿಯ ಹೇಳಿಕೆಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.

Fact

ಸತ್ಯಶೋಧನೆಯ ಭಾಗವಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ಮಾಡಿದ್ದೇವೆ.

ಈ ವೇಳೆ, ಮೇ 3, 2024 ರಂದು ಅಹಮದಾಬಾದ್ನಲ್ಲಿ ನಡೆದ ರಾಲಿಯ ನೇರ ಪ್ರಸಾರದ ವೀಡಿಯೋವನ್ನು ಕಾಂಗ್ರೆಸ್‌ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋದಲ್ಲಿ ವೈರಲ್ ಕ್ಲಿಪ್ಗೆ ಹೋಲುವ ದೃಶ್ಯಗಳಿವೆ. ವೈರಲ್ ಕ್ಲಿಪ್‌ ಭಾಗ 32:28 ರಲ್ಲಿರುವುದನ್ನು ಕಂಡುಕೊಂಡಿದ್ದೇವೆ.

ಸುಮಾರು 31:50 ನಿಮಿಷಗಳ ವೀಡಿಯೋದಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ‘ಹಿಸ್ಸೇದಾರಿ ನ್ಯಾಯ’ ಎಂಬ ವಿಷಯದ ಬಗ್ಗೆ ಹೇಳುತ್ತಾರೆ, “ಹಿಸ್ಸೇದಾರಿ ನ್ಯಾಯದಲ್ಲಿ ಜಾತಿ ಜನಗಣತಿ ಮಾಡಬೇಕು ಎಂದು ಹೇಳಿದ್ದೇವೆ. ಯಾವ ಸ್ಥಳದಲ್ಲಿ, ಯಾವ ಸಮುದಾಯದಲ್ಲಿ… ಎಷ್ಟು ವಿದ್ಯಾವಂತರಿದ್ದಾರೆ, ಎಷ್ಟು ಪದವೀಧರರಿದ್ದಾರೆ, ಎಷ್ಟು ಆದಾಯವಿದೆ, ತಲಾ ಆದಾಯ ಎಷ್ಟು… ಇದನ್ನು ನೋಡಲು, ನಾವು ಜಾತಿ ಗಣತಿ ನಡೆಸಲಿದ್ದೇವೆ. ಅದೇ ಅನುಕ್ರಮದಲ್ಲಿ ಅವರು ನರೇಂದ್ರ ಮೋದಿಯವರ ದೃಷ್ಟಿಕೋನಗಳನ್ನು ವಿವರಿಸುತ್ತಾರೆ ಮತ್ತು “… ಹಾಗಾದರೆ ಮೋದಿ ಸಾಹೇಬರು ಏನು ಹೇಳಿದರು, ನಿಮಗೆ ತಿಳಿದಿದೆಯೇ? ಕಾಂಗ್ರೆಸ್ ನವರು ನಿಮ್ಮ ಮನೆ ಪ್ರವೇಶಿಸುತ್ತಾರೆ. ಕಬೋರ್ಡ್ ಅನ್ನು ಮುರಿಯುತ್ತಾರೆ. ಎಲ್ಲಾ ಹಣವನ್ನು ತೆಗೆದು ಎಲ್ಲರಿಗೂ ಹಂಚುತ್ತಾರೆ. ಮುಸ್ಲಿಮರಿಗೂ ಕೊಡುತ್ತಾರೆ. ಹೆಚ್ಚು ಮಕ್ಕಳನ್ನು ಹೊಂದಿರುವವರು ಹೆಚ್ಚು ಪಡೆಯುತ್ತಾರೆ.” ಈ ಮಾತುಗಳ ಬಳಿಕ ಖರ್ಗೆ ಅವರು “ಆದರೆ ನಾವು (ಕಾಂಗ್ರೆಸ್) ವಿಭಜನೆ ಮಾಡಲು ಹೋಗುವುದಿಲ್ಲ. ಅವರು ಯಾರನ್ನೂ ಆ ರೀತಿ ಹೊರಹಾಕಲು ಸಾಧ್ಯವಿಲ್ಲ. ಕ್ಷಮಿಸಿ ಮೋದಿ ಸಾಹೇಬರು ಇಂತಹ ಆಲೋಚನೆಗಳನ್ನು ಹರಡುತ್ತಿದ್ದಾರೆ. ಇದು ದೇಶಕ್ಕೆ ಮತ್ತು ನಮ್ಮೆಲ್ಲರಿಗೂ ಸರಿಯಾದ್ದಲ್ಲ ” ಎಂದು ಹೇಳುತ್ತಾರೆ.

ಇಡೀ ವೀಡಿಯೋವನ್ನು ನೋಡಿದಾಗ, ವೈರಲ್ ವೀಡಿಯೋವನ್ನು ಕತ್ತರಿಸಿ ಅಷ್ಟು ಮಾತ್ರವನ್ನು ಮಾತ್ರ ಬಳಕೆ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದನ್ನು ಕೋಮು ಭಾವನೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ನ ‘ಹಿಸ್ಸೇದಾರಿ ನ್ಯಾಯ’ ಎಂಬುದನ್ನು ಅದು ಮುಸ್ಲಿಂ ಪರ ಎಂದು ನರೇಂದ್ರ ಮೋದಿ ಹೇಗೆ ಬಣ್ಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಭಾಷಣದಲ್ಲಿ ಮಾತನಾಡುತ್ತಿರುವುದನ್ನು ವೀಡಿಯೋದಲ್ಲಿ ಅಷ್ಟು ಭಾಗ ಮಾತ್ರ ಕತ್ತರಿಸಿ, ದಾರಿತಪ್ಪಿಸುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ.

Result: Missing Context

Our Sources

YouTube Video By Indian National Congress, Dated: 3rd May, 2024

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.