Authors
Claim
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಎದುರಾಳಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ 270 ಕ್ಕೂ ಹೆಚ್ಚು ಎಲೆಕ್ಟೋರಲ್ ಕಾಲೇಜು ಮತಗಳನ್ನು ಗಳಿಸಿದ ನಂತರ ಡೊನಾಲ್ಡ್ ಟ್ರಂಪ್ ಅವರ ವಿಜಯೋತ್ಸವ ಭಾಷಣದ ಸಮಯದಲ್ಲಿ ಪ್ರೇಕ್ಷಕರು “ಮೋದಿ-ಮೋದಿ” ಎಂದು ಕೂಗಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: ಸೌದಿಯಲ್ಲೂ ದೀಪಾವಳಿ ಆಚರಿಸಲಾಗಿದೆಯೇ?
Fact
ಆದರೆ ಹಲವು ಸಾಮಾಜಿಕ ಬಳಕೆದಾರರು ಹೀಗೆ “ಬಾಬಿ, ಬಾಬಿ” ಎಂದು ಕೂಗುವುದಾಗಿ ಹೇಳಿರುವುದನ್ನು ನ್ಯೂಸ್ಚೆಕರ್ ಗಮನಿಸಿದೆ. ಅದರ ನಂತರ ನಾವು ಸಂಬಂಧಿತ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನವೆಂಬರ್ 6, 2024 ರ ಟೈಮ್ ನಿಯತಕಾಲಿಕದ ವರದಿ ಲಭ್ಯವಾಗಿದೆ. ಫ್ಲೋರಿಡಾದ ಮಾರ್-ಎ-ಲಾಗೋ ರೆಸಾರ್ಟ್ ನಲ್ಲಿ ನಡೆದ ಟ್ರಂಪ್ ಅವರ ಭಾಷಣ ಇದಾಗಿದೆ. ಈ ವರದಿಯ ಪ್ರಕಾರ, “ತಮ್ಮ ಭವಿಷ್ಯದ ಆಡಳಿತ ಹೇಗಿರಬಹುದು ಎಂಬುದರ ಕುರಿತು ಸುಳಿವು ನೀಡಿದ ಟ್ರಂಪ್, ಮಾಜಿ ಸ್ವತಂತ್ರ ಅಧ್ಯಕ್ಷೀಯ ಅಭ್ಯರ್ಥಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರು ‘ಅಮೆರಿಕವನ್ನು ಮತ್ತೊಮ್ಮೆ ಆರೋಗ್ಯಕವಾಗಿಸಲು’ ಸಹಾಯ ಮಾಡುವವಂತೆ ಇದೆ ಎಂದು ಹೇಳಿದ್ದಾರೆ.
ಈ ಹೊತ್ತಿಗೆ ಪ್ರೇಕ್ಷಕರು “ಬಾಬಿ! ಬಾಬಿ !” ಎಂದು ಹೇಳುತ್ತಿರುವಂತೆಯೇಏ ಟ್ರಂಪ್, ‘ ಅವರು ಕೆಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ ಮತ್ತು ಆವರು ಅದನ್ನು ಮಾಡಲಿ‘ ಎಂದು ಹೇಳಿದರು . ಲಸಿಕೆಗಳ ಕುರಿತು ಸಂದೇಹವನ್ನು ವ್ಯಕ್ತಪಡಿಸಿದ್ದ ಕೆನಡಿ ಅವರು ಆಗಸ್ಟ್ನಲ್ಲಿ ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದರು ಮತ್ತು ಬಳಿಕ ಟ್ರಂಪ್ ಅವರನ್ನು ಬೆಂಬಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ಫೆಡರಲ್ ಹೆಲ್ತ್ ಏಜೆನ್ಸಿಗಳ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರವನ್ನು ಅವರು ನಿರೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇನ್ನಷ್ಟು ಹುಡುಕಾಟ ನಡೆಸಿದಾಗ ನವೆಂಬರ್ 6 ರಂದು ಆಸ್ಟ್ರೇಲಿಯನ್ ಮಾಧ್ಯಮ, ದಿ ನೈಟ್ಲಿ ಪ್ರಕಟಿಸಿದ ಟ್ರಂಪ್ ಅವರ ವಿಜಯ ಭಾಷಣದ ಸಂಪೂರ್ಣ ಪ್ರತಿಲೇಖನ ಲಭ್ಯವಾಗಿದೆ. ಇದರಲ್ಲಿ ಟ್ರಂಪ್ ಭಾಷಣದ ವೇಳೆ “ಬಾಬಿ! ಬಾಬಿ!” ಎಂದು ಕೂಗಿದ್ದಾಗಿ ಇದೆ.
ನವೆಂಬರ್ 6, 2024ರ ಎನ್ಡಿಟಿವಿ ವರದಿ ಪ್ರಕಾರ, “ಬಾಬಿ, ಬಾಬಿ” ಎಂಬ ಘೋಷಣೆಗಳ ಮಧ್ಯೆ, ಟ್ರಂಪ್ ಅವರು ಲಸಿಕೆ ಸಂದೇಹವಾದಿ ರಾಬರ್ಟ್ ಎಫ್ ಕೆನಡಿ ಜೂನಿಯರ್ “ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸುತ್ತಾರೆ” ಎಂದು ಹೇಳಿದರು. “ಅವರು ಕೆಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ, ಮತ್ತು ನಾವು ಅವರು ಮಾಡುವಂತೆ ಅವಕಾಶ ಮಾಡುತ್ತೇವೆ” ಎಂದು ಅವರು ಹೇಳಿದರು, ಜೊತೆಗೆ ಕೆನಡಿ ಅವರನ್ನು ನೋಡುತ್ತ, ಕೆನಡಿ ಅವರು ಫೆಡರಲ್ ಆರೋಗ್ಯ ಏಜೆನ್ಸಿಗಳ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು ಎಂದಿದೆ.
“ಟ್ರಂಪ್ ಲಸಿಕೆ ಪಿತೂರಿ ಕುರಿತ ಸಿದ್ಧಾಂತಿ ರಾಬರ್ಟ್ ಕೆನಡಿ ಜೂನಿಯರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು, ಅವರು “ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸಲು” ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಪ್ರೇಕ್ಷಕರು “ಬಾಬಿ! ಬಾಬಿ!”, ಎಂದು ಘೋಷಣೆ ಕೂಗಿದ್ದಾಗಿ ನವೆಂಬರ್ 6, 2024 ರ ಗಾರ್ಡಿಯನ್ ವರದಿಯಲ್ಲಿದೆ.
FOX 9 Minneapolis-St. Paul ನಿಂದ ಅಪ್ಲೋಡ್ ಮಾಡಲಾದ ಪೂರ್ಣ ವಿಜಯ ಭಾಷಣವನ್ನು ನಾವು ನೋಡಿದ್ದೇವೆ. ನವೆಂಬರ್ 6, 2024 ರಂದು ಡೊನಾಲ್ಡ್ ಟ್ರಂಪ್ ಅವರು 2024 ರ ಅಧ್ಯಕ್ಷೀಯ ರೇಸ್ನಲ್ಲಿ ಗೆಲ್ಲುತ್ತಾರೆ ಎಂದು ಫಾಕ್ಸ್ ನ್ಯೂಸ್ ಊಹಿಸಿದ ನಂತರ ಬುಧವಾರ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು.
ವೀಡಿಯೋದ 19:30 ನಿಮಿಷದಲ್ಲಿ ಟ್ರಂಪ್ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು ಉದ್ದೇಶಿಸಿ ‘ಅಮೆರಿಕವನ್ನು ಮತ್ತೊಮ್ಮೆ ಆರೋಗ್ಯಕರವಾಗಿಸಲು’ ಸಹಾಯ ಮಾಡುತ್ತಾರೆ ಎಂದು ಹೇಳುತ್ತಾರೆ, ಅದರ ನಂತರ ನಾವು “ಬಾಬಿ, ಬಾಬಿ” ಎಂದು ಕೂಗುವುದನ್ನು ಕೇಳಬಹುದು. ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರ ಹೆಸರನ್ನು ಟ್ರಂಪ್ ಹೇಳುವುದನ್ನು ಕ್ರಾಪ್ ಮಾಡಿ “ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸೋಣ” ಎಂಬ ಹೇಳಿಕೆಯ ದೃಶ್ಯದೊಂದಿಗೆ ವೈರಲ್ ವೀಡಿಯೋ ಆರಂಭವಾಗುತ್ತಿದೆ ಎಂದು ಗಮನಿಸಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ “ಬಾಬಿ!-ಬಾಬಿ!” ಎಂದು ಕೂಗಲಾಗಿದೆಯೇ ಹೊರತು “ಮೋದಿ-ಮೋದಿ” ಎಂದಲ್ಲ ಎಂದು ಕಂಡುಕೊಂಡಿದ್ದೇವೆ.
Result: False
Our Sources
Report By Time, Dated: November 6, 2024
Report By The Guardian report, Dated: November 6, 2024
Report By The Nightly report, Dated: November 6, 2024
Report By NDTV report, Dated: November 6, 2024
Youtube video By FOX 9 Minneapolis-St. Paul, Dated: November 6, 2024
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.