Fact Check: ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್‌ ವೀಡಿಯೋ ಹಿಂದಿನ ಸತ್ಯವೇನು?

ಸೇನಾ ವಾಹನ, ಮುಸ್ಲಿಂ ಗುಂಪು,

Authors

Claim
ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು

Fact
ವೀಡಿಯೋ ಪಶ್ಚಿಮ ಬಂಗಾಳದ್ದಲ್ಲ, ಇದು ಬಾಂಗ್ಲಾದೇಶದ್ದು. 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಭೇಟಿ ವಿರೋಧಿಸಿ ತೀವ್ರವಾದಿ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಗಾಯಗೊಂಡ ಸೇನಾಯೋಧನನ್ನು ಕರೆಯದೊಯ್ಯುವ ವೇಳೆ ಮುಸ್ಲಿಂ ಗುಂಪು ವಾಹನ ತಡೆದು ನಿಲ್ಲಿಸಿದೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫೇಸ್‌ಬುಕ್‌ ನಲ್ಲಿ ಕಂಡು ಬಂದ ಈ ಕ್ಲೇಮ್‌ ಪ್ರಕಾರ, “ಇಲ್ಲಿ ಯಾರನ್ನು ನೋವಿಸೋದಕ್ಕೆ ಹೊರಟಿಲ್ಲ ಇರೋ ಸತ್ಯ ಹಂಚಿಕೊಳ್ಳುತ್ತಿದ್ದೇನೆ. ಬಂಗಾಳದಲ್ಲಿ ಗಾಯಗೊಂಡ ಸೇನಾ ಯೋಧನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ವಾಹನ ತಡೆದು ನಿಲ್ಲಿಸಿದ ಸ್ಥಿತಿ ಇದು. ನಿಮ್ಮ ಮಕ್ಕಳ ಭವಿಷ್ಯ ನೋಡಿ, ಅವರನ್ನು ಬೆಂಬಲಿಸುವ ಸೆಕ್ಯುಲರ್ ಸರ್ಕಾರವಿದೆ ಮತ್ತು ಹಿಂದೂಗಳ ಶತ್ರು ಹಿಂದೂಗಳು ಮಾತ್ರ, ಪರಿಸ್ಥಿತಿ ಹದಗೆಟ್ಟಾಗ, ಸೆಕ್ಯುಲರ್ ಆಗುವವರೆಗೆ ಹಿಂದೂಗಳ ಕಣ್ಣು ಮುಚ್ಚಿರುತ್ತದೆ ಹಿಂದೂಗಳ ಜೊತೆ ಇರುವುದಿಲ್ಲ ಅಲ್ಲಿಯವರೆಗೂ ಯೋಗಿಗಳು ಮೋದಿಯವರನ್ನು ಶಪಿಸುತ್ತಲೇ ಇರುತ್ತಾರೆ ಎದ್ದೇಳಿ ಇನ್ನೂ ಸಮಯವಿದೆ ಇವರನ್ನು ವಿರೋಧಿಸುವುದೋ ಶರಣಾಗುವುದೋ ನಿಮಗೆ ಬಿಟ್ಟಿದ್ದು ಅವರ ಧೈರ್ಯ ನೋಡಿ ಅವರು ಸೇನೆಯೊಂದಿಗೆ ಹೋರಾಡುತ್ತಿದ್ದಾರೆ ಅಲ್ವಾ.??” ಎಂದು ಹೇಳಲಾಗಿದೆ.

Also Read: ಹಿಂದೂಗಳ ಬಹಿಷ್ಕಾರಕ್ಕೆ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆಕೊಟ್ಟಿದ್ದಾರೆಯೇ, ವೈರಲ್‌ ವೀಡಿಯೋ ನಿಜವೇ?

ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್‌ ವೀಡಿಯೋ ಹಿಂದಿನ ಸತ್ಯವೇನು?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು, ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯಲ್ಲ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಪರಿಶೀಲಿಸಿದ ವೇಳೆ, ಇದರಲ್ಲಿ ಕಂಡುಬರುವ ವಾಹನಗಳು ಭಾರತೀಯ ಸೇನಾ ವಾಹನಗಳ ರೀತಿ ಇರದೇ ಇರುವುದು ಕಂಡುಬಂದಿದೆ, ವಾಹನಗಳ ನಂಬರ್‌ ಅನ್ನು ಇಂಗ್ಲಿಷ್‌ನಲ್ಲಿ ಬರೆಯದೇ ಬಂಗಾಳಿ ಭಾಷೆಯಲ್ಲಿ ಬರೆದಿರುವುದು ಕಂಡುಬಂದಿದೆ, ಜೊತೆಗೆ ಮಿಲಿಟರಿ ಅಂಬ್ಯುಲೆನ್ಸ್ ನಲ್ಲಿರುವ ಗುರುತು ಬಾಂಗ್ಲಾ ಸೇನಾ ಪಡೆಯದ್ದಾಗಿದೆ ಎಂದು ಕಂಡು ಬಂದಿದೆ.

ಈ ಸಾಕ್ಷ್ಯಗಳನ್ನು ಆಧರಿಸಿ, ನಾವು ಕೀವರ್ಡ್ ಸರ್ಚ್‌ ಮಾಡಿದ್ದೇವೆ. ಈ ವೇಳೆ ಫೇಸ್‌ಬುಕ್‌ನಲ್ಲಿ ಆಸ್ಟ್ರಿಚ್‌ ಹೆಸರಿನ ಖಾತಿಯಲ್ಲಿ ವೀಡಿಯೋ ಒಂದು ಪತ್ತೆಯಾಗಿದೆ. ಜುಲೈ 6, 2021ರ ಈ ವೀಡಿಯೋದ ಶೀರ್ಷಿಕೆಯಲ್ಲಿ ಸೇನೆಯ ಎದುರು ಬಾಂಗ್ಲಾ ಭಯೋತ್ಪಾದಕರ ಕ್ರೂರ ವರ್ತನೆ ಎಂದು ಹಾಕಲಾಗಿದೆ. ಇದು ವೈರಲ್‌ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.

ಇದೇ ರೀತಿಯ ವೀಡಿಯೋ ಫೇಸ್‌ಬುಕ್‌ನ ಬೇರೆ ಖಾತೆಗಳಲ್ಲೂ ಪತ್ತೆಯಾಗಿದ್ದು ಅದು ಇಲ್ಲಿ ಮತ್ತು ಇಲ್ಲಿದೆ.

Also Read: ಫಾಸ್ಟ್ ಅಂಡ್ ಫ್ಯೂರಿಯಸ್ 8 ವೀಡಿಯೋಕ್ಕೆ ಫ್ರಾನ್ಸ್ ಹಿಂಸಾಚಾರದ ಲಿಂಕ್‌!

ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಇನ್ನಷ್ಟು ಶೋಧನೆ ನಡೆಸಿದ್ದು, ಈ ವೇಳೆ ಮಾರ್ಚ್ 26, 2021ರ ನ್ಯಾಷನಲ್ ಹೆರಾಲ್ಡ್ ಇಂಡಿಯಾದ ವರದಿ ಲಭ್ಯವಾಗಿದೆ “ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ವಿರೋಧಿಸಿ ತೀವ್ರವಾದಿಗಳು ಚಿತ್ತಾಗಾಂಗ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ 4 ಮಂದಿ ಮೃತಪಟ್ಟಿದ್ದು ಢಾಕಾದ ಮಸೀದಿ ಪ್ರದೇಶ ಯುದ್ಧ ಪ್ರದೇಶದಂತೆ ಆಗಿದೆ” ಎಂದಿದೆ.

ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್‌ ವೀಡಿಯೋ ಹಿಂದಿನ ಸತ್ಯವೇನು?

ಮಾರ್ಚ್ 27, 2021ರ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಪ್ರಕಾರವೂ “ಮೋದಿ ಭೇಟಿ ವಿರೋಧಿಸಿ ಚಿತ್ತಗಾಂಗ್‌ನಲ್ಲಿ ತೀವ್ರವಾದಿಗಳು ಪ್ರತಿಭಟನೆ ನಡೆಸಿದ್ದು 4ಮಂದಿ ಮೃತಪಟ್ಟಿದ್ದಾರೆ” ಎಂದಿದೆ.

Also Read: ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು?

Conclusion

ಈ ಸತ್ಯಶೋಧನೆಯ ಪ್ರಕಾರ, ಸೈನಿಕರ ವಾಹನವನ್ನು ತಡೆದು ನಿಲ್ಲಿಸಿದ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದಲ್ಲಲ್ಲ. ಇದು ನಡೆದಿದ್ದು ಬಾಂಗ್ಲಾದೇಶದಲ್ಲಾಗಿದೆ ಮತ್ತು 2021ರ ಘಟನೆಯಾಗಿದೆ.

Result: False

Our Sources

Facebook Video By Austrich, Dated: July 6, 2021

Report By National Herald India, Dated: March 26, 2021

Report By Indian Express, Dated: March 27, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors