Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬ್ರಾಹ್ಮಣ ಹುಡುಗಿಯನ್ನು ಲಪಟಾಯಿಸಲು ಯತ್ನಿಸುತ್ತಿದ್ದ ಮುಸ್ಲಿಂ ಯುವಕನಿಗೆ ಏಟು
ನೋಯ್ಡಾದಲ್ಲಿ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳ ಹೊಡೆದಾಟದ ದೃಶ್ಯವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಬ್ರಾಹ್ಮಣ ಹುಡುಗಿಯನ್ನು ಲಪಟಾಯಿಸಲು ಯತ್ನಿಸುತ್ತಿದ್ದ ಮುಸ್ಲಿಂ ಯುವಕನಿಗೆ ಏಟು ಬಿದ್ದಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ರಾಜಸ್ಥಾನದ ಜುನೈದ್ ಅನ್ಸಾರಿ ಎಂಬ ಯುವಕ ಫೇಸ್ಬುಕ್ನಲ್ಲಿ #Brahmin_Unity ಎಂಬ ಗುಂಪನ್ನು ರಚಿಸಿ ಅದರ ಅಡ್ಮಿನ್ ಆಗಿ ಮುಂದುವರೆದನು. ಈ ಗುಂಪಿಗೆ ಬ್ರಾಹ್ಮಣ ಸಮುದಾಯದ ಹುಡುಗಿಯರನ್ನು ಮಾತ್ರ ಸೇರಿಸುವುದು ಅವನ ವಿಧಾನವಾಗಿತ್ತು. ಇದರ ವಿರುದ್ಧ ಹಿಂದೂ ಯುವಕರು ಪೊಲೀಸರಿಂದ ಸಹಾಯ ಕೋರಿದ್ದರೂ, ರಾಜಸ್ಥಾನ ಪೊಲೀಸರು ಸಹಕರಿಸಲಿಲ್ಲ. ಕೊನೆಗೆ, ಹಿಂದೂ ಯುವಕರೇ ಜುನೈದ್ನನ್ನು ನಿಭಾಯಿಸಿದರು.” ಎಂದಿದೆ.

ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ನೋಯ್ಡಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಜಗಳದ ವೀಡಿಯೋ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಡಿಸೆಂಬರ್ 5, 2023ರ ಎನ್ಡಿಟಿವಿ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ, “ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣವೊಂದರಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ, ನಂತರ ಅಪಹರಣ ಯತ್ನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭೀತಿ ಉಂಟಾಗಿದೆ. ಯುವಕರ ನಡುವಿನ ಜಗಳದ ವಿಡಿಯೋ ಈಗ ವೈರಲ್ ಆಗಿದೆ. ಸೋಮವಾರದ ಈ ಜಗಳ ಕೆಲವು ದಿನಗಳ ಹಿಂದೆ ಇಬ್ಬರು ಯುವಕರ ನಡುವಿನ ಆರಂಭಿಕ ಜಗಳದ ಮುಂದುವರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.” ಎಂದಿದೆ. ಈ ವರದಿಯಲ್ಲಿ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ಹೋಲುವ ವೀಡಿಯೋ ಇರುವುದು ಕಂಡುಬಂದಿದೆ.

ಟೈಮ್ಸ್ ನೌ ಕೂಡ ಡಿಸೆಂಬರ್ 6, 2023ರಂದು ಘಟನೆಯ ವರದಿ ಮಾಡಿದ್ದು, ಗ್ರೇಟರ್ ನೋಯ್ಡಾದ ಸೂಪರ್ಟೆಕ್ ಜಾರ್ ವಸತಿ ಸೊಸೈಟಿಯಲ್ಲಿ ಉಜ್ವಲ್ ಭಾಟಿ ಅವರ ನಿವಾಸದಲ್ಲಿ ನಡೆದ ಸೌಹಾರ್ದಕೂಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸುಮಾರು ಒಂದು ಡಜನ್ ಯುವಕರು ಕಾರುಗಳಲ್ಲಿ ಆಗಮಿಸಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಗಲಾಟೆ ನಡೆಸಿದವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ಡಿಸೆಂಬರ್ 6, 2023ರಂದು ಮಾಡಿದ ವರದಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಗ್ರೇಟರ್ ನೋಯ್ಡಾದ ಟೆಕ್ಝೋನ್ 2 ರಲ್ಲಿರುವ ಬೆನೆಟ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಈ ವರದಿಯಲ್ಲಿ “ದೆಹಲಿಯ ಅಶೋಕ್ ನಗರದ ನಿವಾಸಿ ವೇದಾಂತ್ ದೇಡಾ, ಪಂಜಾಬ್ನ ಪಠಾಣ್ಕೋಟ್ನ ನಿವಾಸಿ ಮತ್ತು ವಿಶ್ವವಿದ್ಯಾಲಯದ ಹಾಸ್ಟೆಲ್ ನಿವಾಸಿ ಆರ್ಯನ್ ಅರೋರಾ ಮತ್ತು ಗ್ರೇಟರ್ ನೋಯ್ಡಾದ ಬೀಟಾ 1 ನಿವಾಸಿ ಓಜಸ್ ಮಿಶ್ರಾ ಅವರು ದಾದ್ರಿಯ ಕೈಮಲ್ ಗ್ರಾಮದ ನಿವಾಸಿ ನಿತೀಶ್ ಭಾಟಿ ಅಲಿಯಾಸ್ ಲಕ್ಕಿ ಭಾಟಿ ಮತ್ತು ಡಂಕೌರ್ನ ಜಗನ್ಪುರ್ ಅಫ್ಜಲ್ಪುರ್ ಗ್ರಾಮದ ನಿವಾಸಿ ಸುಶಾಂತ್ ಭದಾನಾ ಅವರೊಂದಿಗೆ ಜಗಳವಾಡಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ಪೊಲೀಸರ ಹೇಳಿಕೆಯನ್ನುದ್ದೇಶಿಸಿದ ವರದಿ ಮಾಡಲಾಗಿದೆ.

ಆದ್ದರಿಂದ, ಬ್ರಾಹ್ಮಣ ಹುಡುಗಿಯನ್ನು ಲಪಟಾಯಿಸಲು ಯತ್ನಿಸುತ್ತಿದ್ದ ಮುಸ್ಲಿಂ ಯುವಕನಿಗೆ ಏಟು ಎನ್ನುವುದು ನಿಜವಲ್ಲ, ಇದು ನೋಯ್ಡಾದಲ್ಲಿ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳ ಹೊಡೆದಾಟದ ದೃಶ್ಯ ಎಂದು ಕಂಡುಬಂದಿದೆ.
Our Sources
Report by NDTV, Dated: December 5, 2023
Report by Times Now, Dated: December 6, 2023
Report by Hindustan Times, Dated: December 6, 2023
Vasudha Beri
October 15, 2025
Vasudha Beri
July 23, 2025
Ramkumar Kaliamurthy
May 13, 2025