Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Election Watch
Fact
ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆ
Claim
ಎನ್ ಡಿಟಿವಿ ಚುನಾವಣೆ ಸಮೀಕ್ಷೆ ಗ್ರಾಫಿಕ್ ನಕಲಿ. ಮೇ 10ರಂದು ಚುನಾವಣೋತ್ತರ ಫಲಿತಾಂಶ ಪ್ರಕಟಿಸುವುದಾಗಿ ಅದು ಹೇಳಿದೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದೆ ಎಂದು ತೋರಿಸುವ ಎನ್‌ಡಿಟಿವಿ ಸಮೀಕ್ಷೆಯ ಗ್ರಾಫಿಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಕರ್ನಾಟಕದ ಎಲ್ಲ 224 ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಟಿವಿ ಸಮೀಕ್ಷೆ ಎನ್ನಲಾದ ಕ್ಲೇಮ್‌ಗಳು ವೈರಲ್ ಆಗಿವೆ.
ಇದೇ ರೀತಿ ಆರ್ಕೈವ್ ಮಾಡಲಾದ ಟ್ವೀಟ್‌ಗಳು ಇಲ್ಲಿ ಮತ್ತು ಇಲ್ಲಿ ಇವೆ.
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ತಿಳಿದುಬಂದಿದೆ.
ನ್ಯೂಸ್ಚೆಕರ್ ಮೊದಲು “NDTV Karnataka opinion polls” ಗಾಗಿ ಕೀವರ್ಡ್ ಸರ್ಚ್ ನಡೆಸಿದ್ದು, ಯಾವುದೇ ಫಲಿತಾಂಶಗಳು ಲಭ್ಯವಾಗಲಿಲ್ಲ. ಇದರೊಂದಿಗೆ ನಾವು ಅವರ ವೆಬ್‌ಸೈಟ್ ಅನ್ನು ಶೋಧಿಸಿದ್ದು ಯಾವುದೇ ಚುನಾವಣಾ ಸಮೀಕ್ಷೆಗಳಾಗಲಿ, ಅದರ ಫಲಿತಾಂಶದ ವರದಿಗಳಾಗಲಿ ಲಭ್ಯವಾಗಿಲ್ಲ.
Also Read: ರಸ್ತೆಯಲ್ಲಿ ನಮಾಝ್ ಮಾಡುವಂತಿಲ್ಲ ಎಂದರೆ ಉದ್ಯಾನದಲ್ಲಿ ಯೋಗ ಮಾಡುವಂತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆಯೇ?
ಆದರೆ, ಮೇ 13 2018ರಂದು ಎನ್ಡಿಟಿವಿ “Karnataka Exit Polls Highlights: Exit Polls Predict Hung House, BJP Single-Largest Party” ಎಂಬ ಶೀರ್ಷಿಕೆಯ ಈ ವರದಿಯನ್ನು ನಾವು ನೋಡಿದ್ದೇವೆ. ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳನ್ನು ಪ್ರದರ್ಶಿಸುವ ಇನ್ಫೋಗ್ರಾಫಿಕ್ಸ್ನ ಸ್ವರೂಪವು ವೈರಲ್ ಗ್ರಾಫಿಕ್ಸ್‌ಗೆ ಹೋಲಿಕೆಯಾಗುತ್ತಿರುವುದನ್ನು ನಾವು ಗಮನಿಸಿದ್ದು ಅನುಮಾನಗಳನ್ನು ಹುಟ್ಟು ಹಾಕಿದೆ.
ಇದರೊಂದಿಗೆ ಟ್ವಿಟರ್‌ನಲ್ಲಿ ಈ ಕುರಿತು ಶೋಧನೆ ನಡೆಸಿದ್ದು, ವೈರಲ್ ಇನ್ಫೋಗ್ರಾಫಿಕ್ ನಕಲಿ ಎಂದು ಎನ್‌ಡಿಟಿವಿ ಮೇ 3, 2023ರಂದು ಮಾಡಿದ ಈ ಟ್ವೀಟ್ ಸಾಬೀತು ಮಾಡಿದೆ. ಈ ಟ್ವೀಟ್‌ನಲ್ಲಿ ಚುನಾವಣೋತ್ತರ ಫಲಿತಾಂಶವನ್ನು ಮೇ 10ರಂದು ಪ್ರಕಟಿಸಲಾಗುವುದು ಎಂದೂ ಅದು ಹೇಳಿದೆ.
ಈ ಸತ್ಯಶೋಧನೆಯ ಪ್ರಕಾರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಗೆಲುವು ಸಾಧಿಸಲಿದೆ ಎಂಬ ಎನ್‌ಡಿಟಿವಿ ಚುನಾವಣಾ ಸಮೀಕ್ಷೆ ಕುರಿತ ಇನ್ಫೋಗ್ರಾಫಿಕ್ ನಕಲಿ ಎಂದು ತಿಳಿದುಬಂದಿದೆ.
Our Sources
Report by NDTV, Dated: May 13, 2018
Tweet by NDTV, Dated: May 3, 2023
ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು ಅದನ್ನು ಇಲ್ಲಿ ಓದಬಹುದು
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
May 9, 2023
Ishwarachandra B G
May 10, 2023
Shubham Singh
May 12, 2023