ಮಹಾಕುಂಭಕ್ಕೆ ಹೋಗುವ ರೈಲ್ವೇ ಪ್ರಯಾಣಿಕರೊಬ್ಬರಿಂದ ಟಿಟಿಯಿ (ಟಿಕೆಟ್ ಪರೀಕ್ಷಕ) ರೊಬ್ಬರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಫೋಸ್ಟ್ ನಲ್ಲಿ, “ಒಂದು ಒಂದು ರೂಪಾಯಿ ಜೋಡಿಸಿ ಮಹಾಕುಂಭಮೇಳಕ್ಕೆ ಹೋದ ಇವರ ಹತ್ತಿರ ದುಡ್ಡು ತೆಗೆದುಕೊಂಡ ಟಿಟಿ” ಎಂದಿದೆ.

ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದಾಗ, ಇದು ಕುಂಭಮೇಳಕ್ಕೆ ಸಂಬಂಧಿಸಿದ್ದಲ್ಲ, ಹಳೆಯ ವೀಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳ ಮೇಲೆ ಲಾಠಿ ಚಾರ್ಜ್ ವೀಡಿಯೋ ಈಗಿನದ್ದಲ್ಲ!
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಜುಲೈ 25, 2025 ರಂದು ಪ್ರಕಟವಾದ ಅಮರ್ ಉಜಾಲಾ ವರದಿ ಲಭ್ಯವಾಗಿದೆ. ಬಂದಿತು. ವರದಿಯಲ್ಲಿ ಪ್ರಕಟವಾದ ಚಿತ್ರವು ವೈರಲ್ ಕ್ಲೈಮ್ ವೀಡಿಯೊದಲ್ಲಿರುವ ದೃಶ್ಯಗಳಿಗೆ ಹೊಂದಿಕೆಯಾಗುವುದನ್ನು ನಾವು ಗಮನಿಸಿದ್ದೇವೆ. ಇಲ್ಲೂ ವೃದ್ಧ ಮತ್ತು ಟಿಟಿ ಇರುವುದನ್ನು ನೋಡಬಹುದು.

ಈ ವರದಿಯನ್ನು 2019 ರಲ್ಲಿ ಪ್ರಕಟಿಸಲಾಗಿದ್ದು, ಇದು ವೀಡಿಯೋ ಮತ್ತು ಘಟನೆಯು ವಾಸ್ತವವಾಗಿ 2019 ರದ್ದಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.
ಇದರಲ್ಲಿನ ವರದಿಯಲ್ಲಿ, “ರೈಲ್ವೆ ಉದ್ಯೋಗಿ ವಿನಯ್ ಸಿಂಗ್ ಅವರನ್ನು ಚಂದೌಲಿ ಜಿಲ್ಲೆಯ ಮಧ್ಯ ಪೂರ್ವ ರೈಲ್ವೆಯ ಮೊಘಲ್ಸರಾಯ್ ವಿಭಾಗದಲ್ಲಿ ಟಿಟಿಇ ಆಗಿ ನೇಮಿಸಲಾಗಿತ್ತು. ವಿಡಿಯೋ ವೈರಲ್ ಆದ ನಂತರ, ಆತ ಪ್ರಯಾಣಿಕನಿಂದ ಹಣ ಕಸಿದುಕೊಂಡಿರುವುದು ಬಹಿರಂಗವಾಯಿತು, ಬಳಿಕ ಮುಘಲ್ಸರಾಯ್ ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪಕಂಜ್ ಸಕ್ಸೇನಾ ಅವರು ಟಿಟಿಇಯನ್ನು ಅಮಾನತುಗೊಳಿಸಿದ್ದಾರೆ ಎಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಎಕ್ಸ್ ನಲ್ಲಿ ಒಂದು ವೀಡಿಯೋವನ್ನು ಸಹ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಪ್ರತಿಕ್ರಿಯೆಯಾಗಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ವಿಭಾಗದ ರೈಲ್ವೆ ವ್ಯವಸ್ಥಾಪಕರು, “ವೀಡಿಯೋ ಕ್ಲಿಪ್‌ಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಯಿಂದ ಸ್ಪಷ್ಟೀಕರಣವನ್ನು ಕೇಳಲಾಗಿದೆ” ಎಂದು ಬರೆದಿದ್ದಾರೆ. ಟಿಕೆಟ್ ಮಾಡಲು ಪ್ರಯಾಣಿಕನಿಂದ ಹಣ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ ಉದ್ಯೋಗಿ, ಟಿಕೆಟ್ ಮಾಡಿಸಿದ್ದಾನೆ. “ಹೆಚ್ಚಿನ ತನಿಖೆ ಬಾಕಿ ಇರುವಂತೆ ಉದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ.” ಎಂದಿದೆ.
ಹೆಚ್ಚುವರಿಯಾಗಿ, ಈ ವಿಷಯದ ಕುರಿತು ವೀಡಿಯೋ ವರದಿಯನ್ನು ದಿ ಲಾಂಟಾಪ್ ಸುದ್ದಿ ಸಂಸ್ಥೆ ಪ್ರಕಟಿಸಿದೆ. ಜುಲೈ 25, 2025 ರಂದು ಪ್ರಕಟವಾದ ವರದಿಯಲ್ಲಿ, ಟಿಟಿಇ ಒಬ್ಬ ವೃದ್ಧ ವ್ಯಕ್ತಿಗೆ ಸೀಟಿಗಾಗಿ ಲಂಚ ನೀಡಿದ್ದರು ಎಂದು ಹೇಳಲಾಗಿದೆ. ವೀಡಿಯೋ ವೈರಲ್ ಆದ ನಂತರ ಟಿಟಿಇಯನ್ನು ಅಮಾನತುಗೊಳಿಸಲಾಯಿತು ಎಂದಿದೆ.
Conclusion
ನಮ್ಮ ತನಿಖೆಯ ಪ್ರಕಾರ ಆ ವೀಡಿಯೋ ವಾಸ್ತವವಾಗಿ ಮಹಾಕುಂಭಕ್ಕೆ ಹೋಗುವ ಪ್ರಯಾಣಿಕರದ್ದಲ್ಲ. ಹಳೆಯ ಘಟನೆಯ ವೀಡಿಯೋವನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Also Read: ಯೋಗಿ ಸರ್ಕಾರ ಮಸೀದಿ ತೆರವುಗೊಳಿಸಿ, ಅಲ್ಲಿ ಶಾಲೆ ನಿರ್ಮಾಣಕ್ಕೆ ಉದ್ದೇಶಿಸಿದೆ ಎನ್ನುವ ಹೇಳಿಕೆ ನಿಜವೇ?
Our Sources
Report By Amar Ujala, Dated 25 July, 2019
Report by The Lallantop, Dated 25 July, 2019
X post By Pandit Deendayal Upadhyay DRM, Dated: July 23, 2019
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಗುಜರಾತಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)