Authors
Claim
ನೀಟ್ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಷ್ಟೇ ಪಾಸು, ಇದು ನೀಟ್ ಜಿಹಾದ್, ಪತ್ರಿಕಾ ಜಾಹೀರಾತಿನಲ್ಲಿ ಗೊತ್ತಾಗಿದೆ
Fact
ವೈರಲ್ ಆಗಿರುವ ಪತ್ರಿಕೆಯ ಕ್ಲಿಪ್ಪಿಂಗ್ ಕೇರಳ ಮೂಲದ ಕೋಚಿಂಗ್ ಸೆಂಟರ್‌ನ ನೀಟ್ ಪರೀಕ್ಷೆ ಫಲಿತಾಂಶದ ಜಾಹೀರಾತು. ಇದು ನೀಟ್ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಮತ್ತು ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಜಾಹೀರಾತಾಗಿದೆ
ನೀಟ್-ಯುಜಿ ಪತ್ರಿಕೆ ಸೋರಿಕೆ ಪ್ರಕರಣ ಮತ್ತು ಆ ಕುರಿತ ಅನೇಕ ಬಂಧನಗಳ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ನೀಟ್ ಪರೀಕ್ಷೆಗೆ ‘ಮುಸ್ಲಿಂ ನಂಟು’ ಮತ್ತು ‘ನೀಟ್ ಜಿಹಾದ್’ ಎಂದು ಆರೋಪಿಸುತ್ತಿರುವ ನಿರೂಪಣೆಯು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ.
ಈ ನಿರೂಪಣೆಗೆ ಪೂರಕವಾಗಿ, ಹಲವಾರು ವಿದ್ಯಾರ್ಥಿಗಳ ಫೋಟೋಗಳನ್ನು ತೋರಿಸುವ ಪತ್ರಿಕೆಯ ಜಾಹೀರಾತೊಂದು ವೈರಲ್ ಆಗಿದ್ದು, ಇವರೆಲ್ಲ ಪೇಪರ್ ಸೋರಿಕೆಯ “ಫಲಾನುಭವಿಗಳು” ಎಲ್ಲರೂ ಮುಸ್ಲಿಂ ವಿದ್ಯಾರ್ಥಿಗಳು ಎಂಬಂತೆ ಬಳಕೆದಾರರೊಬ್ಬರು ಪ್ರತಿಪಾದಿಸಿದ್ದಾರೆ.
NEET-UG ಪೇಪರ್ ಸೋರಿಕೆ ಪ್ರಕರಣ
ಭಾರತದಾದ್ಯಂತ ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಸಂಬಂಧಿತ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ 2024 ರ ನೀಟ್-ಯುಜಿ, ಪ್ರಶ್ನೆ ಪತ್ರಿಕೆ ಸೋರಿಕೆ, ಗ್ರೇಸ್ ಮಾರ್ಕ್ ನೀಡಿಕೆ ಇತ್ಯಾದಿಗಳಿಂದ ಸುತ್ತುವರಿದಿದೆ. ಪರೀಕ್ಷೆಯಲ್ಲಿರುವ ಅಕ್ರಮಗಳಿಂದಾಗಿ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಕಾರಣವಾಗಿದೆ.
Fact Check/Verification
ನೀಟ್ ಹಗರಣದ ತನಿಖೆಯಲ್ಲಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆಯೇ?
NEET ಪೇಪರ್ ಸೋರಿಕೆ ಪ್ರಕರಣದ ಆರೋಪಿಗಳು ಹಿಂದೂ ಸಮುದಾಯದ ಜನರನ್ನು ಒಳಗೊಂಡಿದೆ ಎಂದು ನ್ಯೂಸ್‌ಚೆಕರ್ ಕಂಡುಕೊಂಡಿದೆ, ಇದು ಮುಸ್ಲಿಂ ಕುರಿತಾದ ವೈರಲ್ ಹೇಳಿಕೆಗೆ ವಿರುದ್ಧವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಇದುವರೆಗೆ ಏಳು ಜನರನ್ನು ಬಂಧಿಸಿದೆ. ಹೆಚ್ಚಿನ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಪ್ರಕರಣದ ಮಾಸ್ಟರ್ ಮೈಂಡ್ ಎಂದು ನಂಬಲಾದ ಸಂಜೀವ್ ಮುಖಿಯಾ ಹೆಸರನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.
ಕೇವಲ ಮುಸ್ಲಿಂ ವಿದ್ಯಾರ್ಥಿಗಳೇ ಹೆಚ್ಚು ಅಂಕ ಗಳಿಸುತ್ತಿರುವ ವೈರಲ್ ಚಿತ್ರದ ಹಿಂದಿನ ಸತ್ಯವೇನು?
ನ್ಯೂಸ್‌ಚೆಕರ್ ವೈರಲ್ ಪೋಸ್ಟ್‌ಗಳ ಕಾಮೆಂಟ್‌ಗಳ ಶೋಧ ನಡೆಸಿದ್ದು, ಪೋಸ್ಟ್ ಮಾಡಲಾದ ಜಾಹೀರಾತು ಮಲಯಾಳ ದಿನಪತ್ರಿಕೆ ಮಾತೃಭೂಮಿಯಲ್ಲಿ ಪ್ರಕಟವಾಗಿದೆ ಎಂದು ಗೊತ್ತಾಗಿದೆ. ಕೇರಳದ ಕೊಟ್ಟಕ್ಕಲ್‌ನ ಯೂನಿವರ್ಸಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಜೂನ್ 6, 2024 ರಂದು NEET 2024 ರಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಜಾಹೀರಾತು ಇದಾಗಿತ್ತು.
ಈ ವಿದ್ಯಾರ್ಥಿ ಗುಂಪಿನಲ್ಲಿ ಮುಖ್ಯವಾಗಿ ಮುಸ್ಲಿಮರೇ ಇದ್ದರೂ ಇತರ ಸಮುದಾಯದ ವಿದ್ಯಾರ್ಥಿಗಳೂ ಇದ್ದರು ಎಂದು ನಾವು ಸ್ಪಷ್ಟವಾಗಿ ನೋಡಬಹುದು. ಸಂಸ್ಥೆಯ ವೆಬ್‌ಸೈಟ್ ಕೂಡ ಅದೇ ಜಾಹೀರಾತನ್ನು ಹಂಚಿಕೊಂಡಿದೆ.
ಅನಂತರ ನಾವು ಸಂಸ್ಥೆಯ ಪ್ರಾಂಶುಪಾಲರಾದ ಕ್ಯಾಪ್ಟನ್ ಡಾ. ಅಬ್ದುಲ್ ಹಮೀದ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ಮಾತನಾಡಿ, “ಪತ್ರಿಕೆಯ ಕ್ಲಿಪ್ಪಿಂಗ್ ಯುನಿವರ್ಸಲ್ ಇನ್‌ಸ್ಟಿಟ್ಯೂಟ್, ಕೊಟ್ಟಕ್ಕಲ್‌ನ ಜಾಹೀರಾತಾಗಿದೆ, ಇದು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಜಾಹೀರಾತು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಒಳಗೊಂಡಿದೆ, ಇದು ವಿವಿಧ ಸಮುದಾಯಗಳ ವಿದ್ಯಾರ್ಥಿಗಳನ್ನು ಸಹ ಒಳಗೊಂಡಿದೆ. ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್, ಮುಸ್ಲಿಂ ಬಾಹುಳ್ಯವಿರುವ ಪ್ರದೇಶವಾದ್ದರಿಂದ ಸಹಜವಾಗಿಯೇ ಹೆಚ್ಚಿನ ವಿದ್ಯಾರ್ಥಿಗಳು ಆ ಸಮುದಾಯದವರೇ ಆಗಿದ್ದಾರೆ. ಅಲ್ಲದೆ, ಈ ವಿದ್ಯಾರ್ಥಿಗಳಲ್ಲಿ ಕೆಲವರು ಈ ನೀಟ್ ಪರೀಕ್ಷೆಗಳನ್ನು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ, ಅದಕ್ಕಾಗಿ ಶ್ರಮಿಸುತ್ತಿದ್ದಾರೆ, ಆದ್ದರಿಂದ ಅವರನ್ನು ಪೇಪರ್-ಸೋರಿಕೆ ಹಗರಣಕ್ಕೆ ಜೋಡಿಸುವುದು ದುರದೃಷ್ಟಕರ” ಎಂದು ಹೇಳಿದ್ದಾರೆ.
2011 ರ ಜನಗಣತಿಯ ಪ್ರಕಾರ ಮಲಪ್ಪುರಂ ಜಿಲ್ಲೆಯಲ್ಲಿ ಮುಸ್ಲಿಮರು (68.53%) ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದಾರೆ, ನಂತರ ಹಿಂದೂ (29.17%) ಮತ್ತು ಕ್ರಿಶ್ಚಿಯನ್ (2.22%) ಸಮುದಾಯಗಳು ಇದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ.
NEET ಹಗರಣದ ಫಲಾನುಭವಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ, ವೈರಲ್ ಹಕ್ಕು ಆಧಾರರಹಿತ
ನೀಟ್ ಪೇಪರ್-ಸೋರಿಕೆ ಹಗರಣದ “ಫಲಾನುಭವಿಗಳನ್ನು” ಬಹಿರಂಗಪಡಿಸುವ ಯಾವುದೇ ಸುದ್ದಿ ವರದಿಗಳು ಅಥವಾ ಅಧಿಕೃತ ಹೇಳಿಕೆಗಳು ನಮಗೆ ಕಂಡುಬಂದಿಲ್ಲ. ತನಿಖೆಯಲ್ಲಿ ಸಂಸ್ಥೆಯ ಕೇಳಿಬಂದಿಲ್ಲ, ಕೇರಳದಲ್ಲೂ ನೀಟ್ ಅಕ್ರಮಗಳ ಯಾವುದೇ ಪ್ರಕರಣ ವರದಿಯಾಗಿಲ್ಲ , ಆ ಮೂಲಕ ವೈರಲ್ ಆಗಿರುವ ಕೋಮು ಆರೋಪದ ಹೇಳಿಕೆ ಸುಳ್ಳು ಎಂದು ದೃಢಪಟ್ಟಿದೆ.
Also Read: ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಪ್ರಸಾದ ಬೆಲೆ ಇಳಿಸಲಾಗಿದೆಯೇ?
Conclusion
ನೀಟ್ ಪೇಪರ್ ಸೋರಿಕೆ ಹಗರಣದ ಫಲಾನುಭವಿಗಳು ಮುಸ್ಲಿಮರು ಎಂದು ಬಿಂಬಿಸಲು ಕೇರಳದ ಕೋಚಿಂಗ್ ಸೆಂಟರ್ ನ ಜಾಹೀರಾತನ್ನು ಬಳಸಿಕೊರ್ಳಳಲಾಗಿದೆ. ನೀಟ್ 2024 ರಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಇವರಾಗಿದ್ದು, ಈ ಜಾಹೀರಾತಿನಲ್ಲಿ ಇತರ ಸಮುದಾಯದ ವಿದ್ಯಾರ್ಥಿಗಳೂ ಇದ್ದಾರೆ ಎಂದು ತಿಳಿದುಬಂದಿದೆ.
Result: False
Our Sources
Mathrubhumi e-paper
Universal Institute, Kottakkal website
Conversation with Captain Dr Abdul Hameed, principal, Universal Institute
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.