Weekly wrap: ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ, ವಾರದ ನೋಟ

weekly wrap

ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ, ಲಡ್ಡು ಪ್ರಸಾದದ ಬೆಲೆ ಇಳಿಕೆ, ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆ ವೇಳೆ ಪಾಕಿಸ್ಥಾನ ಕ್ರಿಕೆಟ್ ಜೆರ್ಸಿ ಧರಿಸಿದ ಕಾರ್‍ಯಕರ್ತರು, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ಅನುರಾಗ್‌ ಠಾಕೂರ್ ರಾಹುಲ್‌ ಗಾಂಧಿಯನ್ನು ಪ್ರಶ್ನಿಸಿದ್ದಾರೆ ಎಂಬ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ತಪ್ಪು ಹೇಳಿಕೆಗಳು ಎಂದು ಸಾಬೀತು ಮಾಡಿವೆ.

Weekly wrap: ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ, ವಾರದ ನೋಟ

 ಬಂಟ್ವಾಳ ನದಿಯಲ್ಲಿ ಚಿರತೆ ಮೊಸಳೆ ಹಿಡಿದ ದೃಶ್ಯ ಎಂದ ವೈರಲ್ ವೀಡಿಯೋ ದಕ್ಷಿಣ ಅಮೆರಿಕದ್ದು!

ದಕ್ಷಿಣ ಕನ್ನಡದ ಬಂಟ್ವಾಳದ ನದಿಯಲ್ಲಿ ಕಂಡುಬಂದ ದೃಶ್ಯ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ,  ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯ ಬಂಟ್ವಾಳದ್ದಲ್ಲ, ಅದು ದಕ್ಷಿಣ ಅಮೆರಿಕದ ಬ್ರೆಜಿಲ್ ಮೂಲದ್ದು ಮತ್ತು ಅದು ಜಾಗ್ವಾರ್ ಪ್ರಾಣಿ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ

Weekly wrap: ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ, ವಾರದ ನೋಟ

ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಪ್ರಸಾದ ಬೆಲೆ ಇಳಿಸಲಾಗಿದೆಯೇ?

ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನದ ಟಿಕೆಟ್ ಬೆಲೆಗಳನ್ನು ಇಳಿಸಲಾಗಿದೆ ಮತ್ತು ಲಡ್ಡು ಪ್ರಸಾದದ ಬೆಲೆಗಳನ್ನೂ ಇಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ. ಆದರೆ ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಬೆಲೆ ಇಳಿಸಲಾಗಿದೆ ಎನ್ನುವುದು ಸುಳ್ಳು. ದೇಗುಲ ಟ್ರಸ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬೆಲೆಗಳನ್ನು ಇಳಿಸಲಾಗಿಲ್ಲ ಎಂದು ಹೇಳಿದೆ ಈ ಕುರಿತ ವಿವರ ಇಲ್ಲಿ ಓದಿ

Weekly wrap: ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ, ವಾರದ ನೋಟ

ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಧರಿಸಿದ್ದರೇ?

ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಧರಿಸಿ ಬಂದಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಲೀಗ್‌ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಧರಿಸಿದ್ದ ಜೆರ್ಸಿ ಪಾಕಿಸ್ತಾನ ಕ್ರಿಕೆಟ್ ತಂಡದದ್ದಲ್ಲ, ಅವರು ಪಚ್ಚಪದ ಆರಂಗಡಿ ಎಂದು ಬರೆದಿರುವ ಹಸಿರು ಜೆರ್ಸಿಯನ್ನು ಧರಿಸಿದ್ದರು. ಈ ಕುರಿತ ವಿವರ ಇಲ್ಲಿ ಓದಿ

Weekly wrap: ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ, ವಾರದ ನೋಟ

‘ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?’ ಸಂಸದ ಅನುರಾಗ್ ಠಾಕೂರ್ ರಾಹುಲ್ ಗಾಂಧಿಗೆ ಪ್ರಶ್ನಿಸಿದ್ದಾರೆ ಎಂದಿದ್ದು ತಿರುಚಿದ ವೀಡಿಯೋ

ಲೋಕಸಭಾ ಅಧಿವೇಶನದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ನಿಮಗೆ ತಿಳಿದಿದೆಯೇ ಎಂದು ವ್ಯಂಗ್ಯವಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡಿವೆ. ಇದರ ಬಗ್ಗೆ ಶೋಧ ನಡೆಸಿದಾಗ, ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ, ಮೂಲ ವೀಡಿಯೋದಲ್ಲಿ ಠಾಕೂರ್ ಅವರು ವಿರೋಧ ಪಕ್ಷದ ಬಣಕ್ಕೆ ಸೇರಿದ ಸಂಸದರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳುವುದನ್ನು ತೋರಿಸುತ್ತದೆ ಎಂದು ತಿಳಿದುಬಂದಿದೆ. ಈ ಕುರಿತ ವಿವರ ಇಲ್ಲಿ ಓದಿ

Weekly wrap: ಬಂಟ್ವಾಳ ನದಿಯಲ್ಲಿ ಮೊಸಳೆ ಹಿಡಿದ ಚಿರತೆ, ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ ಟಿಕೆಟ್ ದರ ಇಳಿಕೆ, ವಾರದ ನೋಟ

ಕೇರಳ ಕೋಚಿಂಗ್‌ ಸೆಂಟರ್ ನ ನೀಟ್ ಫಲಿತಾಂಶದ ಪತ್ರಿಕಾ ಜಾಹೀರಾತಿಗೆ ಕೋಮು ಬಣ್ಣ

ನೀಟ್ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಷ್ಟೇ ಪಾಸು, ಇದು ನೀಟ್ ಜಿಹಾದ್‌, ಪತ್ರಿಕಾ ಜಾಹೀರಾತಿನಲ್ಲಿ ಗೊತ್ತಾಗಿದೆ ಎಂದು ಪತ್ರಿಕಾ ಜಾಹೀರಾತಿನ ಕ್ಲಿಪ್ಪಿಂಗ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸತ್ಯಶೋಧನೆ ನಡೆಸಿದ ವೇಳೆ ಕ್ಲಿಪ್ಪಿಂಗ್ ಕೇರಳ ಮೂಲದ ಕೋಚಿಂಗ್ ಸೆಂಟರ್‌ನ ಜಾಹೀರಾತಾಗಿದ್ದು, ನಡೆಯುತ್ತಿರುವ ಪೇಪರ್-ಸೋರಿಕೆ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ, ನೀಟ್‌ನಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ ಎಂದು ಕಂಡುಬಂದಿದೆ. ಈ ಕುರಿತ ವಿವರ ಇಲ್ಲಿದೆ

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.