Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ
Fact
ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂಬ ವೀಡಿಯೋ ಶಬರಿಮಲೆಯದ್ದಲ್ಲ. ಅದು ಬಾಂಗ್ಲಾದೇಶದ ಮಸೀದಿಯದ್ದು
ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಕುರಿತ ಕ್ಲೇಮಿನಲ್ಲಿ “ಅಯ್ಯಪ್ಪ ಸ್ವಾಮಿ ಭಕ್ತರು ವಾವರ ಮಸೀದಿ ಹುಂಡಿಯಲ್ಲಿ ಹಾಕಿದ ಕೋಟಿ ಕೋಟಿ ಹಣ, ಕೇವಲ 1400 ವರ್ಷ ಹಿಂದೆ ಸೃಷ್ಟಿಯಾದ ಅಲ್ಲಾಹ್ ಮತ್ತು ಹತ್ತಾರು ವರ್ಷಕ್ಕೂ ಮುಂಚಿನ ಶಬರಿಮಲೈ ಅಯ್ಯಪ್ಪನಿಗೂ ಎಲ್ಲಿಯ ಸಂಬಂಧ?…” ಎಂದು ಹೇಳಿದೆ.
Also Read: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ನಿಜವೇ?
ವೀಡಿಯೋವನ್ನು ನ್ಯೂಸ್‌ಚೆಕರ್ ಸತ್ಯಶೋಧನೆಗೊಳಪಡಿಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆ ಭಾಗವಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ನೋಡಿದ್ದೇವೆ. ಈ ವೇಳೆ ಹಣ ಹಾಕಿರುವ ಗೋಣಿ ಚೀಲದಲ್ಲಿ ಬರೆದಿರುವ ಅಕ್ಷರಗಳು ಬಾಂಗ್ಲಾ ಭಾಷೆಯಲ್ಲಿರುವುದನ್ನು ಗಮನಿಸಿದ್ದೇವೆ. ಇದು ನಮಗೆ ಸಂಶಯಾಸ್ಪದವಾಗಿ ಕಂಡಿವೆ. ಆ ಕೀಫ್ರೇಂಗಳನ್ನು ಇಲ್ಲಿ ನೋಡಬಹುದು.
ಆ ಬಳಿಕ ಕೀಫ್ರೇಂಗಳನ್ನುತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇದು ಬಾಂಗ್ಲಾದೇಶದ ಹರುವಾದ ಕಿಶೋರ್ ಗಂಜ್‌ನ ಪಾಗ್ಲಾ ಮಸೀದಿಯ ದೃಶ್ಯಗಳು ಎಂದು ಕಂಡುಬಂದಿದೆ.
ಇದಕ್ಕೆ ಪೂರಕವಾಗಿ ಲಭ್ಯವಾದ ನವೆಂಬರ್ 6, 2021ರ ದಿ ಡೈಲಿ ಅಬ್ಸರ್ ವರ್ ವರದಿಯಲ್ಲಿ ಪಾಗ್ಲಾ ಮಸೀದಿಯ ಹುಂಡಿಯಲ್ಲಿ 3.07 ಕೋಟಿ ತಕಾಗಳನ್ನುಎಣಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನು ಆಧಾರವಾಗಿರಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ.
ಮೇ 6 2023ರ ಜಮುನಾಟಿವಿ ಯೂಟ್ಯೂಬ್ ವೀಡಿಯೋದಲ್ಲಿ “ಮಸೀದಿಗೆ ದೇಣಿಗೆ ಭರ್ಜರಿ ಚೀಲಗಳಲ್ಲಿ ಹಣ” (ಅನುವಾದಿಸಲಾಗಿದೆ) ಶೀರ್ಷಿಕೆ ನೀಡಲಾಗಿದೆ. ಇದರ ವಿವರಣೆಯಲ್ಲಿ,”ಕಿಶೋರ್‌ಗಂಜ್‌ನಲ್ಲಿರುವ ಸಾಂಪ್ರದಾಯಿಕ ಪಾಗ್ಲಾ ಮಸೀದಿಯ ಕಾಣಿಕೆ ಪೆಟ್ಟಿಗೆಯಲ್ಲಿ 19 ಚೀಲ ಟಿಕೆ ಪತ್ತೆಯಾಗಿದೆ. ಬೃಹತ್ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಮತ್ತು ಪ್ರೇಮ ಪತ್ರಗಳಿವೆ. ಬೆಳಗ್ಗೆಯಿಂದಲೇ ಮತ ಎಣಿಕೆ ಕಾರ್ಯ ನಡೆಯುತ್ತಿದೆ.” (ಅನುವಾದಿಸಲಾಗಿದೆ) ಎಂದಿದೆ. ಜೊತೆಗೆ ಈ ವೀಡಿಯೋದಲ್ಲಿನ ದೃಶ್ಯಗಳು ವೈರಲ್ ದೃಶ್ಯಾವಳಿಗಳನ್ನು ಹೋಲುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಇದು ಶಬರಿಮಲೆಯ ವಾವರ ಮಸೀದಿಯ ದೃಶ್ಯಾವಳಿಗಳಲ್ಲ. ಇದು ಬಾಂಗ್ಲಾದೇಶದ ಮಸೀದಿಯದ್ದು ಎಂದು ಕಂಡುಬಂದಿದೆ. ಆದ್ದರಿಂದ ಕ್ಲೇಮ್ ತಪ್ಪಾಗಿದೆ.
Also Read: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ ಎನ್ನುವ ವೈರಲ್ ವೀಡಿಯೋ ಸತ್ಯವೇ?
Our Sources
Report By Daily Observer, Dated November 21, 2021
YouTube Video By JamunaTV, Dated: May 6 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.