Authors
ಪ್ರಧಾನಿ ನರೇಂದ್ರ ಮೋದಿ ಶಬರಿಗೆಮಲೆಗೆ ಭೇಟಿ ನೀಡಿದ್ದಾರೆ ಎನ್ನಲಾದ ವೈರಲ್ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತ ಮೆಸೇಜ್ ನ್ಯೂಸ್ ಚೆಕರ್ ವಾಟ್ಸಾಪ್ ದೂರಿನ ಮೂಲಕ ಬಂದಿದ್ದು, ಅದರಲ್ಲಿ “ಯಾವುದೇ ಪ್ರಚಾರವಿಲ್ಲದೆ ಶಬರಿಮಲೈಗೆ ತಲುಪಿದ ಮೋದಿ” ಎಂದು ಬರೆಯಲಾಗಿದೆ.
Fact Check
ಈ ಕುರಿತು ನ್ಯೂಸ್‌ಚೆಕರ್ ಸತ್ಯಾನ್ವೇಷಣೆಗೆ ತೊಡಗಿದ್ದು, ವೀಡಿಯೋದ ಕೀ ಫ್ರೇಂ ಅನ್ನು ತೆಗೆದು ಅದನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಲಾಗಿದೆ. ಈ ವೇಳೆ ಹಲವು ಮಾಹಿತಿಗಳು ಲಭ್ಯವಾಗಿದೆ. ಮಾಹಿತಿಗಳ ಪ್ರಕಾರ, ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ಶಬರಿಮಲೆಗೆ ಭೇಟಿ ನೀಡಿದ್ದರು.
2021 ಎಪ್ರಿಲ್ 11ರಂದು ರಾಜ್ಯಪಾಲ ಖಾನ್ ಅವರು ಶಬರಿಮಲೆಗೆ ಭೇಟಿ ನೀಡಿದ್ದು, ಇರುಮುಡಿ ಕಟ್ಟಿ, 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ದರ್ಶನವನ್ನು ಮಾಡಿದ್ದರು. ಈ ಕುರಿತ ಫೋಟೋಗಳನ್ನು ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಅದು ಇಲ್ಲಿದೆ.
ವಾಟ್ಸಾಪಿನಲ್ಲಿ ನ್ಯೂಸ್‌ಚೆಕರ್ ದೂರಿನ ಮೂಲಕ ಪಡೆದ ವೀಡಿಯೋವನ್ನೇ ಟೈಮ್ಸ್ ಆಫ್ ಇಂಡಿಯಾ ಕೂಡ ಹಂಚಿಕೊಂಡಿದೆ. ಅದು ಈ ವೀಡಿಯೋವನ್ನು ಎನ್‌ಐ ಮೂಲವೆಂದು ಹಂಚಿಕೊಂಡಿದೆ.
ಈ ಬಗ್ಗೆ ಎಎನ್‌ಐ ಕೂಡ ಟ್ವೀಟ್ ಮಾಡಿದೆ. ದಿ ಹಿಂದೂ ಕೂಡ ಈ ಸುದ್ದಿಯನ್ನು ಪ್ರಕಟಿಸಿದೆ.
ಈ ಕ್ಲೇಮಿನಲ್ಲಿ ಕಂಡು ಬರುವ ಅಂಶವೇನೆಂದರೆ, ಶಬರಿಗೆ ಮಲೆಗೆ ಮೋದಿಯವರು ಹೋಗಿಲ್ಲ ಬದಲಿಗೆ ಕೇರಳದ ರಾಜ್ಯಪಾಲರು ಹೋಗಿದ್ದಾರೆ. ಆದರೆ ಅವರ ಬಟ್ಟೆ ಹಾಕಿದ ವಿಧಾನ ಮತ್ತು ಮುಖಗವಸು ಹಾಕಿದ್ದರಿಂದ ಅವರ ಚಹರೆ ಮೋದಿಯವರನ್ನು ಹೋಲುತ್ತದೆ ಇದರಿಂದ ಮೋದಿ ಶಬರಿಮಲೆಗೆ ಯಾವುದೇ ಪ್ರಚಾರವಿಲ್ಲದೆ ಹೋಗಿದ್ದಾರೆ ಎಂದು ಪ್ರಚಾರಮಾಡಲಾಗುತ್ತಿದೆ.
Also Read: ಮೂಡಿಗೆರೆಯ ಚಹಾ ಅಂಗಡಿ ಮಾಲೀಕ ಸೆರೆ ಹಿಡಿದ ದೆವ್ವದ ವೈರಲ್ ವೀಡಿಯೋ ನಿಜವೇ?
Conclusion
ಮೋದಿಯವರು ಶಬರಿಮಲೆಗೆ ಯಾವುದೇ ಪ್ರಚಾರವಿಲ್ಲದೆ ಹೋಗಿದ್ದಾರೆ ಎನ್ನುವ ಕ್ಲೇಮ್ ಸುಳ್ಳಾಗಿದ್ದು, ಆ ಕ್ಲೇಮಿನಲ್ಲಿ ಹೇಳಿದ ವೈರಲ್ ವೀಡಿಯೋ, ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸಂಬಂಧಿಸಿದ್ದಾಗಿದೆ.
Result: False
Our sources
Tweet form Kerala governor official twitter account Dated 2012 Aprill 11
Tweet form Kerala governor official twitter account Dated 2012 Aprill 11
Tweet form ANI news agency official twitter account Dated 2012 Aprill 11
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.