Saturday, July 12, 2025

Fact Check

Fact Check: ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಠಾಗೋರ್ ಪ್ರತಿಮೆ ಧ್ವಂಸ ಎಂದು ಹಳೆಯ ಫೋಟೋ ವೈರಲ್

Written By Ishwarachandra B G, Translated By Kushel Madhusoodan, Edited By Pankaj Menon
Aug 8, 2024
banner_image

Claim

ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ಅಲ್ಲಿನ ರಾಷ್ಟ್ರಗೀತೆಯನ್ನೇ ಬರೆದ ನೊಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರ ಪ್ರತಿಮೆಯನ್ನು ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ ಎಂಬರ್ಥದಲ್ಲಿ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಬಾಂಗ್ಲಾದೇಶದ ರಾಷ್ಟ್ರಗೀತೆ, #ಅಮರ್_ಸೋನಾರ್_ಬಾಂಗ್ಲಾ, 1906 ರಲ್ಲಿ ರವೀಂದ್ರನಾಥ ಠಾಗೋರ್ ಅವರು ಬರೆದಿದ್ದಾರೆ. ಇಂದು, ಅಲ್ಲಿನ ವಿದ್ಯಾರ್ಥಿಗಳು ಅವರ ಪ್ರತಿಮೆಗೆ ಈ ಸ್ಥಿತಿಯನ್ನು ಮಾಡಿದ್ದಾರೆ.” ಎಂದಿದೆ.

Also Read: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ

Fact Check: ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಠಾಗೋರ್ ಪ್ರತಿಮೆ ಧ್ವಂಸ ಎಂದು ಹಳೆಯ ಫೋಟೋ ವೈರಲ್

ಇದೇ ರೀತಿಯ ಪೋಸ್ಟ್ ಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ಕಂಡುಕೊಂಡಿದ್ದೇವೆ.

ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.  

Fact

ಹೇಳಿಕೆಯೊಂದಿಗೆ ಲಗತ್ತಿಸಲಾದ ಫೋಟೋದ ಬಗ್ಗೆ ನ್ಯೂಸ್‌ಚೆಕರ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ವೇಳೆ ಫೆಬ್ರವರಿ 18, 2023ರ ಪುಣೆ ಮಿರರ್ ವರದಿಯಲ್ಲಿ ಅದೇ ರೀತಿಯ ಫೋಟೋ ಲಭ್ಯವಾಗಿದೆ. ಢಾಕಾ ವಿಶ್ವವಿದ್ಯಾಲಯದಲ್ಲಿ ಠಾಗೋರ್ ಪ್ರತಿಮೆಯ ತಲೆ ಪತ್ತೆ ಎಂದಿದೆ.  

Fact Check: ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಠಾಗೋರ್ ಪ್ರತಿಮೆ ಧ್ವಂಸ ಎಂದು ಹಳೆಯ ಫೋಟೋ ವೈರಲ್

ಢಾಕಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಿತ್ತು ಹಾಕಲಾದ ಠಾಗೋರ್ ಅವರ ಪ್ರತಿಮೆಯ ತಲೆಯನ್ನು ಇಲ್ಲಿ ನಡೆಯುತ್ತಿರುವ ‘ಅಮರ್ ಎಕುಶೆ’ ಪುಸ್ತಕ ಮೇಳದ ಆವರಣದಲ್ಲಿ ಕೆಲವು ದಾರಿಹೋಕರು ಕಂಡುಹಿಡಿದಿದ್ದಾರೆ ಎಂದು ಢಾಕಾ ವಿಶ್ವವಿದ್ಯಾಲಯದ  ಬಾಂಗ್ಲಾದೇಶ ಛಾತ್ರ ನಾಯಕ ಶಿಮುಲ್ ಕುಂಭಕಾರ್ ಶನಿವಾರ ಹೇಳಿದ್ದಾರೆ. ಗುರುವಾರ, ಢಾಕಾ ವಿಶ್ವವಿದ್ಯಾಲಯ (ಡಿಯು) ಅಧಿಕಾರಿಗಳು ರಾಜು ಸ್ಮಾರಕ ಶಿಲ್ಪದ ಪಕ್ಕದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿದ್ದ ಠಾಗೋರ್ ಅವರ ಪ್ರತಿಮೆಯನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ‘ಅಮರ್ ಎಕುಶೆ’ ಪುಸ್ತಕ ಮೇಳದಲ್ಲಿ ಇತ್ತೀಚೆಗೆ ನಡೆದ ಪುಸ್ತಕಗಳ ನಿಷೇಧ ಮತ್ತು ಸೆನ್ಸಾರ್‌ಶಿಪ್‌ನ ವಿರುದ್ಧ ಪ್ರತಿಭಟಿಸಲು ವಿದ್ಯಾರ್ಥಿಗಳು ಮಂಗಳವಾರ ಠಾಗೋರ್ ಅವರ ಸಾಂಕೇತಿಕ ಶಿಲ್ಪವನ್ನು ನಿರ್ಮಿಸಿದರು,” ಎಂದು ವರದಿಯಲ್ಲಿದೆ.

ಫೆಬ್ರವರಿ 2023 ರಲ್ಲಿ ಸೆನ್ಸಾರ್ ಶಿಪ್‌ ವಿರುದ್ಧದ ಪ್ರತಿಭಟನೆ ವೇಳೆ ಢಾಕಾ ವಿಶ್ವವಿದ್ಯಾನಿಲಯದಿಂದ ತೆಗೆದುಹಾಕಲಾದ ಠಾಗೋರ್ ಪ್ರತಿಮೆಯ ತಲೆ ಮುರಿದಿರುವ ಬಗ್ಗೆ ಹಲವು ವರದಿಗಳು ದೃಢಪಡಿಸಿವೆ.  ಇದೇ ರೀತಿಯ ರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆದ್ದರಿಂದ ಈ ಸಾಕ್ಷ್ಯಗಳ ಪ್ರಕಾರ, ಠಾಗೋರರ ಪ್ರತಿಮೆ ಧ್ವಂಸ ಮಾಡಿದ ಘಟನೆ ಈಗಿನದ್ದಲ್ಲ. ಇದು 2023ರ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದುಬಂದಿದೆ.

Also Read: ನೇತ್ರಾವತಿ ನದಿಯಲ್ಲಿ ಪ್ರವಾಹ ಎಂದು ಕೇರಳದ ಪಟ್ಟಾಂಬಿ ಸೇತುವೆ ವೀಡಿಯೋ ವೈರಲ್

Our Source
Report By Pune Mirror, Dated: 19 February, 2023

Report By News18 Hindi, Dated: 20 February, 2023

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

18,956

Fact checks done

FOLLOW US
imageimageimageimageimageimageimage